ಭಯೋತ್ಪಾದನೆ
From Wikipedia, the free encyclopedia
ಭಯೋತ್ಪಾದನೆ ಅಥವಾ ಸ್ವಚ್ಛಂದ ಹಿಂಸೆ ಎಂದರೆ ಹೆದರಿಸುವುದು. ಸಮಾಜದಲ್ಲಿನ ಸಾಮಾಜಿಕ ವ್ಯವಸ್ಥೆಯನ್ನು ಕದಡಿ ಭಯ ಹುಟ್ಟಿಸುವುದು. ಇದು ಸಮಾಜ ವಿರೋಧಿ ಕೃತ್ಯವಾಗಿದೆ. ಇದರಿಂದ ಸಮಾಜದಲ್ಲಿ ಬದುಕು ದುಸ್ತರಗೊಳ್ಳುವುದು. ಅಪರಾಧವೆಂಬುದು ಸಮಾಜದಲ್ಲಿ ಅಸಹಜ ಪ್ರಕ್ರಿಯೆಯೇನಲ್ಲ. ದಮನ, ಮರ್ದನ, ಬಲಾತ್ಕಾರಗಳಿಗೆ ವಿರುದ್ಧ ಪ್ರತಿಕ್ರಿಯೆಯಾಗಿಯೂ ಅಪರಾಧ ಕೃತ್ಯ ನಡೆಯಬಹುದು. ಸ್ವಾರ್ಥವೂ ಅಂತಹ ಕೆಲಸವನ್ನು ಮಾಡಿಸಬಹುದು. ಹಾಗಂತ ಅದು ಭಯೋತ್ಪಾದನೆ ಆಗುವುದಿಲ್ಲ. ಇಂದು ರಾಜಕೀಯ, ಧಾರ್ಮಿಕ ಅಥವಾ ಸೈದ್ಧಾಂತಿಕ ಗುರಿ ಸಾಧಿಸಲು, ಸ್ವಚ್ಛಂದ ಹಿಂಸೆಯನ್ನು ಅನುಸರಿಸುವುದು ಸಹಜವೇ ಆಗಿದೆ.
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಲೇಖನವು ಪತ್ರಿಕಾ ವರದಿಯಂತಿದೆ.. (ಜುಲೈ ೨೦೧೭) |