ಭಾರತದ ಪರ್ವತ ರೈಲುಮಾರ್ಗಗಳು
From Wikipedia, the free encyclopedia
ಭಾರತದ ಪರ್ವತ ರೈಲುಮಾರ್ಗಗಳು ಎಂಬುದು ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ, ಹತ್ತೊಂಬತ್ತನೇ ಶತಮಾನದಲ್ಲಿ ಮತ್ತು ಇಪ್ಪತ್ತನೇ ಶತಮಾನದ ಆರಂಭದಲ್ಲಿ ಭಾರತದ ಪರ್ವತಗಳಲ್ಲಿ ನಿರ್ಮಿಸಲ್ಪಟ್ಟ ಐದು ರೈಲು ಮಾರ್ಗಗಳಿಗೆ ಉಲ್ಲೇಖಿಸಲ್ಪಡುತ್ತವೆ ಮತ್ತು ಇವು ಇಂದಿಗೂ ಸಹ ಭಾರತೀಯ ರೈಲ್ವೆ ಇಲಾಖೆಯಿಂದ ಓಡಿಸಲ್ಪಡುತ್ತಿವೆ. ಈ ಐದು ರೈಲುಮಾರ್ಗಗಳ ಪೈಕಿಯ ಮೂರು ಮಾರ್ಗಗಳಾದ ಡಾರ್ಜಿಲಿಂಗ್ ಹಿಮಾಲಯನ್ ರೈಲುಮಾರ್ಗ (೧೮೮೧), ಕಲ್ಕಾ-ಶಿಮ್ಲಾ ರೈಲುಮಾರ್ಗ (೧೮೯೮) ಮತ್ತು ಕಾಂಗ್ರಾ ಕಣಿವೆಯ ರೈಲುಮಾರ್ಗ (೧೯೨೪) ಇವುಗಳು ಉತ್ತರ ಭಾರತದ ಹಿಮಾಲಯ ಪರ್ವತ ಶ್ರೇಣಿಯ ಏರುಪೇರುಗಳುಳ್ಳ ಬೆಟ್ಟ ಪ್ರದೇಶಗಳಲ್ಲಿ ನೆಲೆಗೊಂಡಿವೆ ಮತ್ತು ಇತರ ಎರಡು ರೈಲುಮಾರ್ಗಗಳು ಸಾಕಷ್ಟು ದೂರದಲ್ಲಿನ ದಕ್ಷಿಣ ಭಾಗದಲ್ಲಿ ಪಶ್ಚಿಮ ಘಟ್ಟಗಳಲ್ಲಿ ನೆಲೆಗೊಂಡಿವೆ; ದಕ್ಷಿಣದ ಭಾರತದಲ್ಲಿರುವ ನೀಲಗಿರಿ ಪರ್ವತ ರೈಲುಮಾರ್ಗ ಹಾಗೂ ಮಹಾರಾಷ್ಟ್ರದಲ್ಲಿರುವ ಮಥೆರಾನ್ ಬೆಟ್ಟದ ರೈಲುಮಾರ್ಗ ಇವೇ ಆ ಎರಡು ರೈಲುಮಾರ್ಗಗಳಾಗಿವೆ. ಡಾರ್ಜಿಲಿಂಗ್ ಹಿಮಾಲಯನ್ ರೈಲುಮಾರ್ಗ, ನೀಲಗಿರಿ ಪರ್ವತ ರೈಲುಮಾರ್ಗ ಮತ್ತು ಕಲ್ಕಾ-ಶಿಮ್ಲಾ ರೈಲುಮಾರ್ಗಗಳು ಒಟ್ಟಾಗಿ UNESCOದ ಒಂದು ವಿಶ್ವ ಪರಂಪರೆಯ ತಾಣವೆಂಬುದಾಗಿ ನಿರ್ದಿಷ್ಟವಾಗಿ ಸೂಚಿಸಲ್ಪಟ್ಟಿವೆ ಹಾಗೂ "ಭಾರತದ ಪರ್ವತ ರೈಲುಮಾರ್ಗಗಳು" ಎಂಬುದಾಗಿ ಸಂಬೋಧಿಸಲ್ಪಟ್ಟಿವೆ.[1][2][3] ಭಾರತದಲ್ಲಿನ ಈ ಐದು ರೈಲುಮಾರ್ಗಗಳು, ವಿಶ್ವದಲ್ಲಿ ಕಂಡುಬರುವ ಒಂದೇ ರೀತಿಯ ಸುಮಾರು ಇಪ್ಪತ್ತು ನ್ಯಾರೋ ಗೇಜು ಮತ್ತು ಮೀಟರ್ ಗೇಜು ಮಾರ್ಗಗಳ ಭಾಗವಾಗಿವೆ.[4]
ಭಾರತದ ಪರ್ವತ ರೈಲುಮಾರ್ಗಗಳು | |
---|---|
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು | |
ಪ್ರಕಾರ | Cultural |
ಮಾನದಂಡಗಳು | ii, iv |
ಉಲ್ಲೇಖ | ೯೪೪ |
ಯುನೆಸ್ಕೊ ಪ್ರದೇಶ | Asia-Pacific |
ದಾಖಲೆಯ ಇತಿಹಾಸ | |
Inscription | ೧೯೯೯ (೨೩rd ಸಮಾವೇಶ) |
Extensions | ೧೯೯೯ Darjeeling Himalayan Railway; ೨೦೦೫ Kalka-Shimla Railway; ೨೦೦೮ Nilgiri Mountain Railway |
ಈ ಎಲ್ಲಾ ಐದು ರೈಲು ಮಾರ್ಗಗಳು ಈಗಲೂ ಕಾರ್ಯಾತ್ಮಕವಾಗಿವೆ ಮತ್ತು ಅಡಿಬೆಟ್ಟಗಳಿಂದ ಮೊದಲ್ಗೊಂಡು ಮುಖ್ಯವಾದ ಗಿರಿಧಾಮಗಳವರೆಗೆ ಸಂಪರ್ಕಿಸುತ್ತವೆ; ಈ ಪಯಣದದಲ್ಲಿ ಹಾದುಹೋಗುವಾಗ ಅವು ಏರುಪೇರುಗಳುಳ್ಳ ಮತ್ತು ಚಿತ್ರವತ್ತಾದ ನೈಸರ್ಗಿಕ ದೃಶ್ಯಗಳನ್ನು ಹೊಂದಿರುವ ಪರ್ವತಮಯ ಭೂಪ್ರದೇಶಗಳ ಮೂಲಕ ಸುತ್ತಿಕೊಂಡು ಹೋಗುತ್ತವೆ. ಅವು ನಿರ್ಮಿಸಲ್ಪಟ್ಟಿರುವ ನಿರ್ದಿಷ್ಟ ಭೂಪ್ರದೇಶದ ಜ್ಞಾತ ವಿಷಯದ ಆಧಾರದ ಮೇಲೆ ಬ್ರಿಟಿಷ್ ವಸಾಹತಿನ ಅವಧಿಯಲ್ಲಿ ಅವನ್ನು "ತಂತ್ರಜ್ಞಾನದಲ್ಲಿನ ಅಭಿವೃದ್ಧಿಯ ಮೇಲಿನ ಮೌಲ್ಯಗಳ ಪರಸ್ಪರ ವಿನಿಮಯದ ಮಹೋನ್ನತ ಉದಾಹರಣೆಗಳು" ಹಾಗೂ ಎಂಜಿನಿಯರಿಂಗ್ ಕೌತುಕಗಳು ಎಂಬುದಾಗಿ ಪರಿಗಣಿಸಲಾಗಿತ್ತು.[1][2][3]