ಮಾಯಾ ನಾಗರಿಕತೆ
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (October 2008) |
ಈ ಮಾಯಾ ಎನ್ನುವುದು ಮೆಸೊಅಮೆರಿಕಾದ (ಮೆಕ್ಸಿಕೊ+ಅಮೆರಿಕಾ)ನಾಗರಿಕತೆಯಾಗಿದೆ.ಆಗಿನ ಕಾಲದಲ್ಲಿ ಇದೊಂದೇ ಲಿಖಿತ ಭಾಷಾಭಿವೃದ್ಧಿ ಪಡೆದ ಪೂರ್ವದ ಕೊಲಂಬಿಯನ್ ಅಮೆರಿಕನ್ ಸಂಸ್ಕೃತಿಯಾಗಿತ್ತೆನ್ನಲಾಗಿದೆ.ಹೀಗಾಗಿ ಅದು ತನ್ನ ಕಲೆ,ವಾಸ್ತುಶಿಲ್ಪ ಮತ್ತು ಗಣಿತ ಹಾಗು ಖಗೋಳ ವಿಜ್ಞಾನದ ಪದ್ದತಿಗಳಿಗೆ ಹೆಸರಾಗಿತ್ತು. ಆರಂಭದಲ್ಲಿ ಇದು ಪೂರ್ವದ-ಕ್ಲಾಸಿಕ್ ಪಂಥದ ಹುಟ್ಟಿನ ಸಂದರ್ಭದಲ್ಲಿ ಪ್ರವರ್ಧನಮಾನಕ್ಕೆ ಬಂತು, (c. 2000 BC ಯಿಂದ 250 AD), ಮೆಸೊಅಮೆರಿಕನ್ ಕಾಲಗಣನೆಯಂತೆ ಹಲವು ಮಾಯಾ ನಗರಗಳು ಆ ಕ್ಲಾಸಿಕ್ ಯುಗದ ಸಂದರ್ಭದಲ್ಲಿ ಉತ್ಕೃಷ್ಟ ಬೆಳವಣಿಗೆ ಸಾಧಿಸಿದ್ದವು.(c. 250 AD ರಿಂದ 900 AD),ವರೆಗೆ ಕ್ಲಾಸಿಕ್ ಯುಗದ ನಂತರದ ಅವಧಿ ವರೆಗೂ ಅವುಗಳ ಪ್ರಗತಿ ಮುಂದುವರೆದಿತ್ತು.ಇಲ್ಲಿ ಸ್ಪ್ಯಾನಿಶ್ ಯುಗದ ಆರಂಭದ ವರೆಗೂ ಇದರ ಅಭಿವೃದ್ಧಿ ನಿರಂತರವಾಗಿತ್ತು.
ಈ ಮಾಯಾ ನಾಗರಿಕತೆಯು ಇನ್ನಿತರ ಮೆಸೊಅಮೆರಿಕನ್ ಸಂಸ್ಕೃತಿಗಳ ಪಾಲನ್ನೂ ಹೊಂದಿತ್ತು.ಉನ್ನತ ಮಟ್ಟದ ಪರಸ್ಪರ ವಿಚಾರ ವಿನಿಮಯ ಮತ್ತು ಆಯಾ ಪ್ರಾದೇಶಿಕತೆಯಲ್ಲಿ ತಕ್ಕ ಮಟ್ಟಿಗಿನ ಸಾಂಸ್ಕೃತಿಕ ಪ್ರಸರಣವೂ ನಡೆದಿತ್ತು. ಶಾಸನ ರಚನೆ ಮತ್ತು ಕ್ಯಾಲಂಡರ್ ಗಳ ಬರೆಹಗಳು ಅತ್ಯಂತ ಹಳೆಯ ಸಂಪ್ರದಾಯವಾಗಿದ್ದವೆಂದು ಮಾಯಾ ಸಂಸ್ಕೃತಿಯಿಂದ ಕಂಡು ಬರುತ್ತದೆ;ಇಂಥ ಕಾರಣಗಳಿಂದ ಅವರ ಸಂಸ್ಕೃತಿಯು ಆಗಿನ ಕಾಲದ ಸಂಪೂರ್ಣ ಅಭಿವೃದ್ಧಿಗೆ ಕಾರಣವಾಗಿತ್ತು. ಈ ಮಾಯಾ ಪ್ರಭಾವವು ಹುಂಡುರಾಸ್,ಗ್ವಾಟೆಮಾಲಾ,ಉತ್ತರದ Elಸಲ್ವೆಡಾರ್ ಮತ್ತು ದೂರದ ಕೇಂದ್ರ ಮೆಕ್ಸಿಕೊಗಳಿಗೂ ಮತ್ತು ಮಾಯಾ ಪ್ರದೇಶದಿಂದ ಸುಮಾರು 1000 ಕಿ.ಮೀಗಳಷ್ಟು(625ಮೈಲುಗಳು) ದೂರದ ಭಾಗಗಳಿಗೂ ಇತ್ತೆಂದು ಗುರುತಿಸಲಾಗಿದೆ. ಮಾಯಾ ಕಲೆ ಮತ್ತು ವಾಸ್ತುಕಲೆಯಲ್ಲಿ ಹಲವು ಹೊರಭಾಗದ ಪ್ರಭಾವವೂ ಕಾಣುತಿತ್ತು.ಇದು ಹೊರಭಾಗದ ಆಕ್ರಮಣಶೀಲತೆಯಂದಲ್ಲ ಆದರೆ ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯವೇ ಇದಕ್ಕೆ ಕಾರಣವಾಗಿದೆ.
ಈ ಕ್ಲಾಸಿಕ್ ಯುಗದ ಮುಕ್ತಾಯದ ನಂತರ ಮಾಯಾ ಜನರು ಕಣ್ಮರೆಯಾಗಲಿಲ್ಲ.ಅಥವಾ ಸ್ಪ್ಯಾನಿಶ್ ಆಕ್ರಮಣಕಾರ ರ ಮತ್ತು ಅಮೆರಿಕಾ ಸ್ಪ್ಯಾನಿಶ್ ರ ವಸಾಹತೀಕರಣದಿಂದ ಅವರು ಕಾಣದಾಗಲಿಲ್ಲ. ಇಂದು ಮಾಯಾ ಮತ್ತವರ ಸಂತತಿಯು ಮಾಯಾ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ.ಇದು ಉನ್ನತ ಮಟ್ಟದ ಸಾಂಪ್ರದಾಯಿಕತೆಗಳು ಮತ್ತು ನಂಬಿಕೆಗಳಿಗೆ ಮೂಲವಾಗಿದೆ.ಪೂರ್ವ ಕೊಲಂಬಿಯನ್ ಮತ್ತು ಸ್ಪ್ಯಾನಿಶ್ ಆಕ್ರಮಣದ ವಿಜಯದ ವಿಚಾರಗಳು ಮತ್ತು ಸಂಸ್ಕೃತಿಗಳನ್ನೊಳಗೊಂಡಿದೆ. ಹಲವು ಮಾಯನ್ ಭಾಷೆಗಳನ್ನು ಇಂದೂ ಪ್ರಾಥಮಿಕ ಹಂತದಲ್ಲಿ ಬಳಸಲಾಗುತ್ತದೆ.ರಾಬಿನಾಲ್ ಆಚಿ ಎಂಬ ನಾಟಕವು ಆಚಿ ಭಾಷೆಯಲ್ಲಿ ರಚಿತವಾಗಿದೆ.ಇದನ್ನೂ ಇಂದು ಮಾನವೀಯತೆಯ ಮೌಖಿಕ ಮತ್ತು ಅಮೂರ್ತ ಸಂಪ್ರದಾಯಿಕ ಪಿತ್ರಾರ್ಜಿತ ಮೇರು ಕೃತಿಯ ಅತ್ಯುತ್ತಮ ಕೊಡುಗೆ ಎಂದು UNESCO ತನ್ನ 2005 ರ ವರದಿಯಲ್ಲಿ ತಿಳಿಸಿದೆ.