ಮಿಯಾಮಿ
From Wikipedia, the free encyclopedia
ಮಿಯಾಮಿ ನಗರವು pronounced /maɪˈæmi/ಅಥವಾ /maɪˈæmə/, ಅಮೇರಿಕ ಸಂಸ್ಥಾನಗಳಲ್ಲಿರುವ, ನೈಋತ್ಯಫ್ಲೋರಿಡಾದ, ಅಟ್ಲಾಂಟಿಕ್ ತೀರ ಪ್ರದೇಶದಲ್ಲಿರುವ ಅತ್ಯಂತ ಪ್ರಮುಖ ಮತ್ತು ದೊಡ್ಡ ನಗರವಾಗಿದೆ. ಫ್ಲೋರಿಡಾದ ಅತ್ಯಂತ ಪ್ರಖ್ಯಾತ ಪ್ರಾಂತವಾದ, ಮಿಯಾಮಿ ದೇಡ್ ಪ್ರಾಂತ್ಯದ ಆಸನ ಸ್ಥಳ ಎಂದೇ, ಮಿಯಾಮಿ ನಗರವನ್ನು ಗುರುತಿಸಲಾಗುತ್ತದೆ. ದಕ್ಷಿಣ ಫ್ಲೋರಿಡಾ ಮಹಾನಗರದ, ಪ್ರಮುಖ ಹಾಗೂ ಬಹುಮುಖ್ಯ ಪಟ್ಟಣವಾಗಿರುವ ಫ್ಲೋರಿಡಾದ ಜನಸಂಖ್ಯೆ ಸುಮಾರು ೫,೪೧೪,೭೧೨; ಇದು ಅಮೇರಿಕಾದ ೭ನೆಯ ಅತಿ ದೊಡ್ಡ ನಗರವಾಗಿದೆ. ನಗರೀಕೃತ ಮಿಯಾಮಿ ಜನವಸತಿ ಪ್ರದೇಶವು (ಜನಗಣತಿ ನಿಗಮದ ಪ್ರಕಾರ), ೨೦೦೦ದಲ್ಲಿನ ಜನಗಣತಿ ವರದಿಗಳ ಪ್ರಕಾರ, ೪,೯೧೯,೦೩೬ ಅಮೇರಿಕಾದ, ಐದನೆಯ ಅತ್ಯಂತ ದೊಡ್ಡ ಜನಸಂಖ್ಯೆಯುಳ್ಳ, ನಗರ ಪ್ರದೇಶವಾಗಿದೆ.[4] ೨೦೦೮ರಲ್ಲಿ ಮಿಯಾಮಿ ನಗರ ಪ್ರದೇಶದ ಜನಸಂಖ್ಯೆಯು ೫,೨೩೨,೩೪೨ನ್ನು ತಲುಪಿತ್ತು. ಅಲ್ಲಿಗೆ ಅದು ಅಮೇರಿಕಾದ ನಾಲ್ಕನೆಯ ಅತಿ ದೊಡ್ಡ ಜನಸಂಖ್ಯೆಯುಳ್ಳ ನಗರವಾಗಿತ್ತು. ಇದೇ ಸಾಲಿನಲ್ಲಿ ನ್ಯೂಯಾರ್ಕ್, ಲಾಸ್ಎಂಜಲಿಸ್ ಮತ್ತು ಚಿಕಾಗೋ ನಗರಗಳೂ ಇದ್ದವು.[2]
Miami | |
---|---|
City | |
Nickname(s): The Magic City, The MIA, The 305, The Gateway to the Americas | |
Country | United States |
State | Florida |
County | Miami-Dade |
Settled | 1825 |
Incorporated | July 28, 1896 |
Named for | Mayaimi |
Government | |
• Type | Mayor-Commissioner Plan |
• Mayor | Tomás Regalado (I) |
• City Manager | Pedro G. Hernandez |
• City Attorney | Julie O. Bru |
• City Clerk | Priscilla Thompson |
Area | |
• City | ೫೫.೨೭ sq mi (೧೪೩.೧ km2) |
• Land | ೩೫.೬೮ sq mi (೯೨.೪ km2) |
• Water | ೧೯.೫೯ sq mi (೫೦.೭ km2) |
• Urban | ೧,೧೧೬.೧ sq mi (೨೮೯೧ km2) |
• Metro | ೬,೧೩೭ sq mi (೧೫೮೯೦ km2) |
Elevation | ೬ ft (೨ m) |
Population | |
• City | ೪,೩೩,೧೩೬ (೪೨nd) |
• Density | ೧೧,೫೮೧/sq mi (೪,೪೭೧/km2) |
• Urban | ೫೨,೩೨,೩೪೨ |
• Metro | ೫೪,೧೪,೭೧೨ |
• Demonym | Miamian |
Time zone | UTC-5 (EST) |
• Summer (DST) | UTC-4 (EDT) |
ZIP Code | 33101-33102, 33107, 33109-33112, 33114, 33116, 33119, 33121-33122, 33124-33170, 33172-33190, 33193-33197, 33199, 33222, 33231, 33233-33234, 33238-33239, 33242-33243, 33245, 33247, 33255-33257, 33261, 33265-33266, 33269, 33280, 33283, 33296, 33299 |
Area code(s) | 305, 786 |
FIPS code | 12-45000GR2 |
GNIS feature ID | 0295004GR3 |
Website | http://www.ci.miami.fl.us/ |
ಆರ್ಥಿಕ, ಹಣಕಾಸು ವಿಷಯ, ಸಂಸ್ಕೃತಿ, ಸಂವಹನ, ಫ್ಯಾಶನ್, ಶಿಕ್ಷಣ, ಮುದ್ರಣ ಮಾಧ್ಯಮ, ಪತ್ರಿಕೋದ್ಯಮ, ಕಲೆ, ಸಿನಿಮಾ, ಅಂತರಾಷ್ಟ್ರೀಯ ವ್ಯಾಪಾರ - ಇವೇ ಮೊದಲಾದ ಅಂಶಗಳಿಂದಾಗಿ, ಮಿಯಾಮಿ ನಗರವು ಜಾಗತಿಕವಾಗಿ ಪ್ರಾಮುಖ್ಯತೆಯನ್ನು ಗಳಿಸಿರುವ ನಗರಗಳಲ್ಲಿ ಒಂದೆನಿಸಿದೆ.[5][6] ಅಮೇರಿಕಾದ ದ್ವಾರಬಾಗಿಲು ಎಂದೇ ಹೆಸರಾಗಿರುವ ಮಿಯಾಮಿ ನಗರ ಮನರಂಜನೆ, ಶಿಕ್ಷಣ, ಮಾಧ್ಯಮ, ಸಂಗೀತ, ಫ್ಯಾಶನ್, ಸಿನಿಮಾ, ಸಂಸ್ಕೃತಿ, ಪತ್ರಿಕೋದ್ಯಮ, ಮತ್ತು ಪ್ರದರ್ಶನ ಕಲೆಗಳಿಗಾಗಿ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವುದಲ್ಲದೆ, ಅವೆಲ್ಲವುಗಳಿಗೂ ಪ್ರಮುಖ ವೇದಿಕೆಯೆನಿಸಿದೆ.[7]
ಡೌನ್ ಟೌನ್ ಮಿಯಾಮಿಯು ಅಮೆರಿಕದಲ್ಲಿನ[8][9], ಅಂತರಾಷ್ಟ್ರೀಯ ಬ್ಯಾಂಕುಗಳ ಅತ್ಯಂತ ದೊಡ್ಡ ಕೇಂದ್ರಸ್ಥಾನವಾಗಿದೆ. ಅಲ್ಲದೆಯೇ, ಹಲವಾರು ಕಾರ್ಪೋರೆಟ್ ಕೇಂದ್ರಸ್ಥಾನಗಳಿಗೆ ಮತ್ತು ಟೆಲಿವಿಶನ್ ಸ್ಟೂಡಿಯೋಗಳಿಗೆ ಹೆಸರುವಾಸಿಯಾಗಿದೆ. ಇದೆಲ್ಲದರ ಜೊತೆಗೆ, ಮಹಾನಗರದ, ಹೆಸರಿಗಷ್ಟೇ ಎನ್ನುವಂತಿರುವ ಮಿಯಾಮಿ ಬಂದರು(ಪೋರ್ಟ್), ಪ್ರಪಂಚದ ಅತ್ಯಂತ ಜನನಿಬಿಡ ಸಾರ್ವಜನಿಕ ಹಡಗು ಯಾನದ ಕೇಂದ್ರವೆನಿಸಿದೆ ಮತ್ತು ಯಾವಾಗಲೂ ಬಿಡುವಿರದ, ಜನಪ್ರಿಯ ಹಡಗುಯಾನದ ತಾಣ ಹಾಗೂ ನೌಕಾಯಾವೂ ಆಗಿದೆ.