ಮಿಲಾನ್
ಇಟಲಿ ದೇಶದ ಎರಡನೇ ಅತಿ ದೊಡ್ಡ ನಗರ / From Wikipedia, the free encyclopedia
ಮಿಲನ್ ; (ಇಟಾಲಿಯನ್:Milano, listen (ಸಹಾಯ·ಮಾಹಿತಿ) Italian pronunciation: [miˈla(ː)no]; ಪಶ್ಚಿಮ ಲೋಂಬಾರ್ಡ್, ಮಿಲನ್ listen (ಸಹಾಯ·ಮಾಹಿತಿ)) ಇಟಲಿ ದೇಶದ ಒಂದು ನಗರ ಲೊಂಬಾರ್ಡಿ ಪ್ರದೇಶ ಮತ್ತು ಮಿಲನ್ ಪ್ರಾಂತದ ಒಂದು ರಾಜಧಾನಿ. ಈ ನಗರದ ಜನಸಂಖ್ಯೆ ಸುಮಾರು 1,300,000 ಇದ್ದು, ಈ ನಗರ ಪ್ರದೇಶ ಅಂದಾಜು 4,300,000 ಜನರಿರುವ ಯೂರೋಪಿಯನ್ ಒಕ್ಕೂಟದಲ್ಲಿ ಇದು ಐದನೆ ದೊಡ್ಡ ನಗರ.[2] ಈ ಮಿಲನ್ ಮಹಾನಗರದ ವಿಸ್ತೀರ್ಣ ಇಡೀ ಇಟಲಿಯಲ್ಲೇ ದೊಡ್ಡದಾಗಿದ್ದು OECD ಅಂದಾಜು ಮಾಡಿರುವಂತೆ ಇಲ್ಲಿ 7,400,000 ಜನಸಂಖ್ಯೆಯಿದೆ.[3] ಸೆಲ್ಟಿಕ್ ಜನಾಂಗಕ್ಕೆ ಸೇರಿದ ಇನ್ಸ್ಬ್ರರು ಈ ನಗರವನ್ನು ಮೀಡಿಯೋನಮ್ ಎಂಬ ಹೆಸರಿನಿಂದ ಸ್ಥಾಪಿಸಿದರು. ಮುಂದೆ 222 BCಯಲ್ಲಿ ಇದನ್ನು ರೋಮನ್ನರು ವಶಪಡಿಸಿಕೊಂಡರು ಮತ್ತು ರೋಮನ್ ಚಕ್ರಾಧಿಪತ್ಯದಡಿ ಈ ನಗರ ಯಶಸ್ಸು ಕಂಡಿತು. ನಂತರ 1500ರಲ್ಲಿ ಮಿಲನ್ ನಗರವನ್ನು ವಿಸ್ಕೊಂಟಿ, ಸಪೋರ್ಜಾ ಮತ್ತು ಸ್ಪ್ಯಾನಿಷರು ಮತ್ತು 1700ರಲ್ಲಿ ಆಸ್ಟ್ರಿಯನ್ನರು ಆಳಿದರು 1796ರಲ್ಲಿ ಮಿಲನ್ ನಗರವನ್ನು ವಶಪಡಿಸಿಕೊಂಡ ನೆಪೋಲಿಯನ್ 1805ರಲ್ಲಿ ತನ್ನ ಇಟಾಲಿ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿಕೊಂಡನು.[4][5] ರೊಮ್ಯಾಂಟಿಕ್ ಅವಧಿಯಲ್ಲಿ ಮಿಲನ್ ಅನೇಕ ಕಲಾವಿದರು, ಕವಿಗಳು ಮತ್ತು ಬರಹಗಾರರನ್ನು ಆಕರ್ಷಿಸಿ ಯೂರೋಪಿನ ದೊಡ್ಡ ಸಾಂಸ್ಕೃತಿಕ ಕೇಂದ್ರವಾಯಿತು. ನಂತರ 2ನೆ ಮಹಾಯುದ್ಧದಲ್ಲಿ ಸಂಯುಕ್ತ ಪಡೆಗಳ ಬಾಂಬ್ ದಾಳಿಯಿಂದ ನಗರ ವಿರೂಪಗೊಂಡಿತು ಮತ್ತು 1943ರಲ್ಲಿ ಇದನ್ನು ಜರ್ಮನಿ ಆಕ್ರಮಿಸಿಕೊಂಡಾಗ ಮಿಲನ್ ನಗರ ಇಟಾಲಿಯನ್ನರ ಪ್ರತಿರೋದದ ಪ್ರಮುಖ ಕೇಂದ್ರವಾಯಿತು.[4] ಇಷ್ಟಾದರೂ ದಕ್ಷಿಣ ಇಟಲಿ ಮತ್ತು ವಿದೇಶಗಳಿಂದ ಸಾವಿರಾರು ವಲಸೆಗಾರರನ್ನು ಆಕರ್ಷಿಸಿ ಯುದ್ಧೋತ್ತರ ಕಾಲದಲ್ಲಿ ಆರ್ಥಿಕ ಬೆಳವಣಿಗೆಯನ್ನು ಕಂಡಿತು.[4] ಅಂತರರಾಷ್ಟ್ರೀಯ ಮತ್ತು ಕಾಸ್ಮೊಪಾಲಿಟನ್ ನಗರವಾಗಿರುವ ಮಿಲನ್ನ ಜನಸಂಖ್ಯೆಯ ಪೈಕಿ 13.9% ವಿದೇಶೀಯರು.[6] ಈ ನಗರ ಯೂರೋಪಿನ ಮುಖ್ಯ ಸಾಗಾಣಿಕೆ ಮತ್ತು ಕೈಗಾರಿಕಾ ವಲಯ[7] ಮತ್ತು $115 ಬಿಲಿಯನ್ ಡಾಲರ್ GDP ಇರುವ ವಿದ್ಯುತ್ ಖರೀದಿಯಲ್ಲಿ ಜಗತ್ತಿನ ಶ್ರೀಮಂತಿಕೆಯಲ್ಲಿ 26ನೇ ಸ್ಥಾನದಲ್ಲಿದ್ದು EUನ ಮುಖ್ಯ ವ್ಯಾಪಾರ[8] ಮತ್ತು ಹಣಕಾಸು ಕೇಂದ್ರ (ಮಿಲನ್ನ ಆರ್ಥಿಕತೆ ನೋಡಿ). ಮಿಲನ್ ನಗರದ ಮೆಟ್ರೋಪಾಲಿಟನ್ ಪ್ರದೇಶ 2004ರಲ್ಲಿ € 241.2 ಬಿಲಿಯನ್ (US$ 312.3 ಬಿಲಿಯನ್)ಗಳಷ್ಟು GDPಸಾಧಿಸಿ ಯೂರೋಪಿನ 4ನೆಯ ಸ್ಥಾನದಲ್ಲಿತ್ತು. €35,137 (US$ 52,263) ತಲಾವಾರು GDP ಇರುವ ಮಿಲನ್ ನಗರ ಇಟಲಿಯಲ್ಲೇ ಮುಂಚೂಣಿಯಲ್ಲಿದೆ, ಅದು EU ಸರಾಸರಿಯ 161.6% ನಷ್ಟು ಇದೆ.[9] ಇದರ ಜೊತೆಗೆ ಹೊರಗಿನಿಂದ ಬಂದ ಕೆಲಸಗಾರರಿಗೆ ಮಿಲನ್ ನಗರ ಜಗತ್ತಿನ ತುಂಬಾ ದುಬಾರಿ ನಗರಗಳ ಪೈಕಿ 11ನೆಯ ಸ್ಥಾನದಲ್ಲಿದೆ.[10] ಮಿಲನ್ ನಗರವನ್ನು ಜಗತ್ತಿನ 28ನೆಯ ಪ್ರಭಾವಿ ಮತ್ತು ಶಕ್ತಿಯುತ ನಗರವೆಂದು ವರ್ಗೀಕರಿಸಲಾಗಿದೆ.[11] ವಾಣಿಜ್ಯ, ಕೈಗಾರಿಕೆ, ಸಂಗೀತ, ಕ್ರೀಡೆ, ಸಾಹಿತ್ಯ, ಕಲೆ ಮತ್ತು ಮಾಧ್ಯಮಗಳಲ್ಲಿ ಜಾಗತಿಕ ಪ್ರಭಾವ ಹೊಂದಿರುವ ಮಿಲನ್ ನಗರವನ್ನು ಜಗತ್ತಿನ ಫ್ಯಾಷನ್ ವಿನ್ಯಾಸ ರಾಜಧಾನಿಯೆಂದು ಗುರುತಿಸಲಾಗಿದೆ; GaWC ಶ್ರೇಷ್ಠ ದರ್ಜೆ ನಗರವಾಗಿ ಆಲ್ಫಾ ವರ್ಲ್ಡ್ ಸಿಟೀಸ್ ಮಾನ್ಯ ಮಾಡಿದೆ.[12] ಲೋಬಾರ್ಡ್ ಮಹಾನಗರ ವಿಶೇಷವಾಗಿ ಫ್ಯಾಷನ್ ಗೃಹಗಳು ಮತ್ತು ವಯಾ ಮೊಂಟೆನಾಪೊಲಿಯೋನ್ ಮತ್ತು ಗ್ಯಾಲರಿಯಾ ವಿಟ್ಟೋರಿಯೊ ಇಮ್ಯಾನುಯೆಲ್ ಮತ್ತು ಪಿಯಝಾ ಡುಯೊಮೊ (ಜಗತ್ತಿನ ಅತಿ ಹಳೆಯ ವ್ಯಾಪಾರಿ ಸಂಕೀರ್ಣವೆಂದು ಹೆಸರಾಗಿದೆ) ಮುಂತಾದ ಫ್ಯಾಷನ್ ಗೃಹಗಳು ಮತ್ತು ಅಂಗಡಿಗಳಿಗೆ ಪ್ರಸಿದ್ಧಿಯಾಗಿದೆ. ಈ ನಗರಕ್ಕೆ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಆಸ್ತಿ ಹೊಂದಿದೆ, ಮತ್ತು ಅನನ್ಯ ಪಾಕ ವಿದ್ಯಾ ಪರಂಪರೆಯನ್ನು ಹೊಂದಿದೆ (ಪ್ರಾನೆಟೋನ್ , ಕ್ರಿಸ್ಮಸ್ ಕೇಕ್ ಮತ್ತು ರಿಸೊಟ್ಟೊ ಅಲ್ಲಾ ಮಿಲಾನೀಸ್ ಮುಂತಾದ ತಿಂಡಿ ತಿನಿಸುಗಳ ತವರಾಗಿದೆ). ಈ ನಗರಕ್ಕೆ ನಿರ್ಧಿಷ್ಟವಾದ ಮತ್ತು ಪ್ರಸಿದ್ಧಿಯಾದ ಆಪರ್ಯಾಟಿಕ್ ಸಂಗೀತ ಪರಂಪರೆಯಿದೆ; ಇದು ಗಿಯೂಸೆಪ್ ವರ್ದಿ ಯಂತಹ ಸಂಗೀತಗಾರರು ಮತ್ತು (ಟಿಯಾಟ್ರೊ ಅಲಾಸ್ಕಾಲಾದಂತಹ) ರಂಗಮಂದಿರಗಳ ತವರು. ಮಿಲನ್ ನಗರ ಅನೇಕ ಮುಖ್ಯ ಮ್ಯೂಜಿಯಂಗಳು, ವಿಶ್ವವಿದ್ಯಾಲಯ ಅಕಾಡೆಮಿಗಳು, ಅರಮನೆಗಳು, ಚರ್ಚುಗಳು ಮತ್ತು ಗ್ರಂಥಾಲಯಗಳು (ಅಕಾಡೆಮಿ ಆಫ್ ಬ್ರೆರಾ ಮತ್ತು ಕ್ಯಾಸ್ಟೆಲೊ ಜಫೋರ್ಜೆಸ್ಕೊ) ಮತ್ತು ಎ.ಸಿ.ಮಿಲನ್ ಮತ್ತು ಎಫ್.ಸಿ.ಇಂಟರ್ನ್ಯಾಜನಾಲೆ ಮಿಲಾನೊ ನಂತಹ ಎರಡು ಹೆಸರಾಂತ ಫುಟ್ಬಾಲ್ ತಂಡಗಳಿಗೆ ಹೆಸರುವಾಸಿ. ಈ ಎಲ್ಲಾ ಪರಂಪರೆಗಳಿರುವ ಕಾರಣ ಮಿಲನ್ ನಗರ ಯೂರೋಪಿನ ಸುಪ್ರಸಿದ್ಧ ಪ್ರವಾಸಿ ಸ್ಥಳವಾಗಿ ರೂಪುಗೊಂಡಿದೆ; 2008ರಲ್ಲಿ ಇಲ್ಲಿಗೆ 1914 ಮಿಲಿಯನ್ ವಿದೇಶಿ ಪ್ರವಾಸಿಗರು ಭೇಟಿ ಕೊಟ್ಟಿದ್ದಾರೆ.[13] ಈ ನಗರ ಹಿಂದೆ 1906ರಲ್ಲಿ ವಿಶ್ವ ವಸ್ತು ಪ್ರದರ್ಶನವನ್ನು ಏರ್ಪಡಿಸಿತ್ತು; ಮುಂದೆ 2015ರಲ್ಲಿ ಜಾಗತಿಕ ವಸ್ತುಪ್ರದರ್ಶನಕ್ಕೆ ಆತಿಥ್ಯ ನೀಡಲಿದೆ.[14] ಮಿಲನ್ ನಗರವಾಸಿಗಳನ್ನು ಮಿಲನೀಸ್ (ಇಟಾಲಿಯನ್: [Milanesi] Error: {{Lang}}: text has italic markup (help)ವಾಡಿಕೆ ಪ್ರಕಾರ ಅಥವಾ ಅನೌಪಚಾರಿಕವಾಗಿ [Meneghini] Error: {{Lang}}: text has italic markup (help) [Ambrosiani] Error: {{Lang}}: text has italic markup (help)) ಮಿಲನ್ ನಗರವಾಸಿಗಳು ಈ ನಗರಕ್ಕೆ ಪ್ರೀತಿಯಿಂದ "ನೈತಿಕ ರಾಜಧಾನಿ" ಎಂಬ ಅಡ್ಡಹೆಸರಿನ್ನಿಟ್ಟುಕೊಂಡಿದ್ದಾರೆ.[4]
Milan
Milano | |
---|---|
Comune | |
Comune di Milano | |
Country | Italy |
Region | Lombardy |
Province | Milan (MI) |
Government | |
• Mayor | Letizia Moratti (PdL) |
Area | |
• Total | ೧೮೩.೭೭ km೨ (೭೦.೯೫ sq mi) |
Elevation | ೧೨೦ m (೩೯೦ ft) |
Population (30 April 2009)[1] | |
• Total | ೧೩,೦೧,೩೯೪ |
• Density | ೭,೧೦೦/km೨ (೧೮,೦೦೦/sq mi) |
Demonym | Milanesi |
Time zone | UTC+1 (CET) |
• Summer (DST) | UTC+2 (CEST) |
Postal code | 20100, 20121-20162 |
Dialing code | 02 |
Patron saint | Ambrose |
Saint day | December 7 |
Website | Official website |