ಮುಟ್ಟಿದರೆ ಮುನಿ
From Wikipedia, the free encyclopedia
ಮುಟ್ಟಿದರೆ ಮುನಿ ಅಮೋಘವಾದ ಔಷಧೀಯ ಗುಣವುಳ್ಳ ಗಿಡ. ಆಡುಭಾಷೆಯಲ್ಲಿ ನಾಚಿಕೆಗಿಡ, ಮುಡುಗುದಾವರೆ, ಮುಟ್ಟಲ ಮುರುಕ, ಗಂಡಕಾಲೆ, ನಮಸ್ಕಾರಿ, ನಾಚಿಗೆ ಮುಳ್ಳು, ಮುಟ್ಟಿದರೆ ಮುಚಕ, ಮುಚ್ಗನ್ ಮುಳ್ಳು, ಪತಿವ್ರತೆ, ಲಜ್ಜಾವತಿ ಎಂಬ ಹೆಸರಿದೆ. ಸಂಸ್ಕೃತದಲ್ಲಿ "ಅಂಜಲೀ ಕಾರಿಕೆ", ಆಂಗ್ಲದಲ್ಲಿ ಟಚ್ ಮಿ ನಾಟ್,[2] ಹಿಂದಿಯಲ್ಲಿ ಚುಯ್ ಮುಯ್ ಎಂದು ಕರೆಯುತ್ತಾರೆ. ಇದರ ಸಸ್ಯಶಾಸ್ತ್ರೀಯ ಹೆಸರು ‘ಮಿಮೋಸ ಪುಡಿಕಾ’ (Mimosa Pudica). ಇದರ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ, ಪ್ರಮುಖವಾಗಿ ಬ್ರೆಜ಼ಿಲ್ ಎಂದು ಬಗೆಯಗಾಲಿದೆ. ಭಾರತದ ಉಷ್ಣಪ್ರಾಂತ್ಯಗಳೆಲ್ಲೆಲ್ಲ ವ್ಯಾಪಕವಾಗಿ ಕಾಣಸಿಕ್ಕುತ್ತದೆ.
Quick Facts ಮುಟ್ಟಿದರೆ ಮುನಿ, Scientific classification ...
ಮುಟ್ಟಿದರೆ ಮುನಿ | |
---|---|
('ಮುಟ್ಟಿದರೆ ಮುನಿ (Touch me not)) Flower-head | |
Scientific classification | |
ಸಾಮ್ರಾಜ್ಯ: | plantae |
(ಶ್ರೇಣಿಯಿಲ್ಲದ್ದು): | ಅಂಜಿಯೋಸ್ಪೆರ್ಮ್ಸ್ |
(ಶ್ರೇಣಿಯಿಲ್ಲದ್ದು): | ಯೂಡಿಕಾಟ್ಸ್ |
(ಶ್ರೇಣಿಯಿಲ್ಲದ್ದು): | ರೋಸಿಡ್ಸ್ |
ಗಣ: | ಫೇಬಲ್ಸ್ |
ಕುಟುಂಬ: | ಫೆಬಾಸಿಯೇ |
ಉಪಕುಟುಂಬ: | ಮಿಮೋಸೋಡಿಯೆ |
ಕುಲ: | ಮಿಮೋಸ |
ಪ್ರಜಾತಿ: | 'ಎಂ.ಪುಡಿಕಾ |
Binomial name | |
ಮಿಮೋಸ ಪುಡಿಕಾ L.[1] | |
Close