ರೇಷ್ಮೆಹುಳು
From Wikipedia, the free encyclopedia
ರೇಷ್ಮೆಹುಳುವು ಪಳಗಿಸಿದ ರೇಷ್ಮೆಚಿಟ್ಟೆಯಾದ ಬಾಂಬಿಕ್ಸ್ ಮೋರಿಯ ಲಾರ್ವ ಅಥವಾ ಕಂಬಳಿಹುಳು.[1][2] ಇದು ರೇಷ್ಮೆಯ ಪ್ರಧಾನ ಉತ್ಪಾದಕವಾಗಿರುವುದರಿಂದ ಆರ್ಥಿಕವಾಗಿ ಮುಖ್ಯವಾದ ಕೀಟವಾಗಿದೆ. ಬಿಳಿ ಹಿಪ್ಪನೇರಿಳೆ ಎಲೆಗಳು ರೇಷ್ಮೆಹುಳುವಿನ ಇಷ್ಟದ ಆಹಾರವಾಗಿದೆ. ಆದರೆ ಇವು ಇತರ ಹಿಪ್ಪನೇರಿಳೆ ಸಸ್ಯಗಳನ್ನು ಮತ್ತು ಓಸೇಜ್ ಕಿತ್ತಳೆಯನ್ನು ಕೂಡ ತಿನ್ನಬಹುದು. ಆಯ್ದ ಸಂತಾನವೃದ್ಧಿಯ ಸಹಸ್ರಮಾನಗಳ ಪರಿಣಾಮವಾಗಿ, ಪಳಗಿಸಿದ ರೇಷ್ಮೆಚಿಟ್ಟೆಗಳು ಸಂತಾನೋತ್ಪತ್ತಿಗಾಗಿ ಮಾನವರ ಮೇಲೆ ನಿಕಟವಾಗಿ ಅವಲಂಬಿಸಿವೆ. ಬಾಂಬಿಕ್ಸ್ ಮೀಯಾಂಡಿರೈನ ಎಂಬುದು ಕಾಡು ಪ್ರಭೇದ. ಈ ಪ್ರಭೇದದಿಂದ ಬಾಂಬಿಕ್ಸ್ ಮೋರಿ ವಿಕಾಸಗೊಂಡಿರುವುದಾಗಿ ಊಹೆ. ಕಾಡು ರೇಷ್ಮೆಚಿಟ್ಟೆಗಳು ತಮ್ಮ ದೇಶೀಕೃತ ಸೋದರಸಂಬಂಧಿಗಳಿಗಿಂತ ಭಿನ್ನವಾಗಿವೆ ಏಕೆಂದರೆ ಅವನ್ನು ಆಯ್ದು ಉತ್ಪನ್ನಮಾಡಲಾಗಿಲ್ಲ; ಅವುಗಳಿಂದ ರೇಷ್ಮೆ ಉತ್ಪಾದನೆಯಲ್ಲಿ ಅಷ್ಟು ವಾಣಿಜ್ಯಿಕವಾಗಿ ಅಭಿವೃದ್ಧಿ ಸಾಧ್ಯವಾಗಿಲ್ಲ. ನವುರಾದ ರೇಷ್ಮೆಎಳೆಗಳನ್ನು ಸೃಷ್ಟಿಸುವ ಬಾಂಬಿಕ್ಸ್ ಮೋರಿ ಕೀಟವನ್ನು ಮನುಷ್ಯ ಹಲವು ಶತಮಾನಗಳ ಹಿಂದಿನಿಂದಲೇ ತನ್ನ ವಶಕ್ಕೆ ತೆಗೆದುಕೊಂಡು ಪ್ರಪಂಚದ ವಿವಿಧ ಭಾಗಗಳಲ್ಲಿ ರೇಷ್ಮೆಕೃಷಿ ಮಾಡುತ್ತಿದ್ದಾನೆ.
Bombyx mori | |
---|---|
ಜೋಡಿಯಾದ ಗಂಡು (ಮೇಲೆ), ಹೆಣ್ಣು (ಕೆಳಗೆ) | |
ಐದನೇ ಅಂತರಾಕಾರ | |
Conservation status | |
Domesticated | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಆರ್ಥ್ರೊಪೋಡಾ |
ವರ್ಗ: | ಇನ್ಸೆಕ್ಟಾ |
ಗಣ: | ಲೆಪಿಡಾಪ್ಟೆರಾ |
ಕುಟುಂಬ: | ಬಾಂಬಿಸಿಡೇ |
ಕುಲ: | ಬಾಂಬಿಕ್ಸ್ |
ಪ್ರಜಾತಿ: | B. mori |
Binomial name | |
Bombyx mori (Linnaeus, 1758) | |
Synonyms | |
|
ಕಚ್ಚಾ ರೇಷ್ಮೆಯ ಉತ್ಪಾದನೆಗಾಗಿ ರೇಷ್ಮೆಹುಳುಗಳನ್ನು ಬೆಳೆಸುವ ಅಭ್ಯಾಸವಾದ ರೇಷ್ಮೆಕೃಷಿಯು ಚೀನಾದಲ್ಲಿ ಕನಿಷ್ಠಪಕ್ಷ ೫,೦೦೦ ವರ್ಷಗಳಿಂದ ನಡೆಯುತ್ತಿದೆ.[3] ಅಲ್ಲಿಂದ ಅದು ಭಾರತ, ಕೊರಿಯಾ, ಜಪಾನ್ ಮತ್ತು ಪಶ್ಚಿಮ ದೇಶಗಳಿಗೆ ಹರಡಿತು.