ಲೀಡ್ಸ್
From Wikipedia, the free encyclopedia
ಲೀಡ್ಸ್ | |
---|---|
ನಗರ | |
ಲೀಡ್ಸ್ ನಗರ | |
Motto(s): "Pro rege et lege" "For king and the law" | |
Sovereign state | United Kingdom |
Constituent country | ಇಂಗ್ಲೆಂಡ್ |
Region | Yorkshire and the Humber |
Ceremonial county | West Yorkshire |
Admin HQ | Leeds city centre |
Borough Charter | 1207 |
Town Charter | 1626 |
City status | 1893 |
City of Leeds Met. District created | 1974 |
Government | |
• Type | Metropolitan borough, City |
• Governing body | Leeds City Council |
• Lord Mayor | Cllr James McKenna (L) |
• Leader of the Council | Cllr Keith Wakefield (L) |
• Chief Executive | Paul Rogerson |
• MPs: | Stuart Andrew (C) Ed Balls (L) |
Area | |
• Total | ೨೧೩ sq mi (೫೫೧.೭೨ km2) |
Highest elevation | ೧೧೨೦ ft (೩೪೦ m) |
Lowest elevation | ೩೦ ft (೧೦ m) |
Population (ಟೆಂಪ್ಲೇಟು:English statistics year) | |
• Total | ಟೆಂಪ್ಲೇಟು:EnglishDistrictPopulation ([[List of English districts by population|Ranked ಟೆಂಪ್ಲೇಟು:EnglishDistrictRank]]) |
• Density | ೩,೫೭೪/sq mi (೧,೩೮೦/km2) |
• Ethnicity (2001 census)[3] | ೮೯.೧% White ೫.೪% Asian or Asian British ೨.೦% Black or Black British ೧.೭% Mixed Race ೧.೮% Chinese and other |
Demonym | Loiner/Leodensian |
Time zone | UTC+0 (Greenwich Mean Time) |
• Summer (DST) | UTC+1 (British Summer Time) |
Postcode | LS,part of WF and also part of BD. |
Area code(s) | 0113 (urban core) 01924 (Wakefield nos) 01937 (Wetherby/ Boston Spa) 01943 (Guiseley/ Otley) 01977 (Pontefract nos) |
ISO 3166-2 | GB-LDS |
ONS code | 00DA |
NUTS 3 | UKE42 |
OS grid reference | SE296338 |
Euro. Parlt. Const. | Yorkshire & the Humber |
Website | www.leeds.gov.uk |
ಲೀಡ್ಸ್ (pronounced /ˈliːdz/ ( listen)) ಎಂಬುದು ಇಂಗ್ಲೆಂಡ್ನ ಪಶ್ಚಿಮ ಯಾರ್ಕ್ಷೈರ್ನ ಒಂದು ನಗರ ಹಾಗೂ ಜಿಲ್ಲೆ.[4] 2001ರಲ್ಲಿ ಲೀಡ್ಸ್ನ ಮುಖ್ಯ ನಗರ ವಿಭಾಗದ ಜನಸಂಖ್ಯೆಯು 443,247,[5] ಹಾಗೂ ಒಟ್ಟಾರೆ ನಗರದ ಜನಸಂಖ್ಯೆಯು ಟೆಂಪ್ಲೇಟು:EnglishDistrictPopulation (ಟೆಂಪ್ಲೇಟು:English statistics year).[6] ಲೀಡ್ಸ್ ನಗರವು ಪಶ್ಚಿಮ ಯಾರ್ಕ್ಷೈರ್ ನಗರ ಪ್ರದೇಶದ ಸಾಂಸ್ಕೃತಿಕ, ಆರ್ಥಿಕ ಹಾಗೂ ವಾಣಿಜ್ಯ ಕೇಂದ್ರವಾಗಿದೆ,[7][8][9] ಇದು 2001ರ ಜನಗಣತಿಯ ಪ್ರಕಾರ 1.5 ಮಿಲಿಯನ್ ಜನಸಂಖ್ಯೆಯನ್ನು ಹೊಂದಿತ್ತು,[10] ಹಾಗೂ ಲೀಡ್ಸ್ ನಗರ ಪ್ರದೇಶ, ಲೀಡ್ಸ್ ನಗರವನ್ನು ಕೇಂದ್ರವಾಗಿ ಹೊಂದಿರುವ ಆರ್ಥಿಕ ಭಾಗದ ಜನಸಂಖ್ಯೆಯು 2.9 ಮಿಲಿಯನ್ನಷ್ಟಿದೆ.[11] ಲಂಡನ್ ಹೊರತು ಪಡಿಸಿ ಯುಕೆಯ ವ್ಯಾಪಾರ, ಕಾನೂನು ಹಾಗೂ ಹಣಕಾಸು ಸೇವೆಗಳ ಕೇಂದ್ರ ಲೀಡ್ಸ್ ನಗರವಾಗಿದೆ.[12][13][14][15][16]
ಐತಿಹಾಸಿಕವಾಗಿ ಇದು ವೆಸ್ಟ್ ರೈಡಿಂಗ್ ಆಫ್ ಯಾರ್ಕ್ಶೈರ್ ಪ್ರದೇಶದ ಒಂದು ಭಾಗವಾಗಿದೆ, ಐದನೆಯ ಶತಮಾನದಲ್ಲಿ ಎಲ್ಮೆಟ್ ರಾಜ್ಯವು "ಲಾಯ್ಡಿಸ್" ಎಂಬ ಕಾಡಿನಿಂದ ಸುತ್ತುವರಿದಿತ್ತು, ಎಂಬುದು ಇತಿಹಾಸದ ಪುರಾವೆಗಳಿಂದ ಕಂಡು ಬರುತ್ತದೆ. ಈ ಕಾಡಿನ ಹೆಸರಿನಿಂದಲೇ ಲೀಡ್ಸ್ ಎಂಬ ಹೆಸರು ಈ ನಗರಕ್ಕೆ ಬಂದಿದೆ. ಶತಮಾನಗಳಿಂದ ಈ ಹೆಅಸರು ಆಡಳಿತದಲ್ಲಿ ಬಳಕೆಯಲ್ಲಿದೆ. 13ನೇ ಶತಮಾನದಲ್ಲಿ ಒಂದು ಸಣ್ಣ ಜಹಗೀರುದಾರನಿಗೆ ಸೇರಿದ ಪ್ರದೇಶದಿಂದ ಹಲವಾರು ಬದಲಾವಣೆಗಳ ನಂತರ ಈಗಿನ ಮೆಟ್ರೋಪಾಲಿಟನ್ ಪ್ರದೇಶಕ್ಕೆ ಸೇರಿತು.
17ನೆಯ ಹಾಗೂ 18ನೆಯ ಶತಮಾನಗಳಲ್ಲಿ ಲೀಡ್ಸ್ ನಗರವು ಉಣ್ಣೆ ಉತ್ಪಾದನೆ ಹಾಗೂ ವ್ಯಾಪಾರದ ಪ್ರಮುಖ ಕೇಂದ್ರವಾಯಿತು. ನಂತರ, ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ, ಲೀಡ್ಸ್ ಒಂದು ಪ್ರಮುಖ ಕೈಗಾರಿಕಾ ಕೇಂದ್ರವಾಯಿತು; ಆಗ ಉಣ್ಣೆಯು ಪ್ರಮುಖ ಕೈಗಾರಿಕೆ ಯಾಗಿದ್ದರೂ, ಅಗಸೆ, ತಂತ್ರಜ್ಞಾನ, ಕಬ್ಬಿಣ ಎರಕಗಾರಿಕೆ, ಮುದ್ರಣ ಹಾಗೂ ಇತರೆ ಕೈಗಾರಿಕೆಗಳೂ ಇಲ್ಲಿ ಮುಖ್ಯವಾಗಿ ಇದ್ದವು.[17]
ಐರ್ ನದಿಯ ಕಣಿವೆಯಲ್ಲಿ ಒಂದು ಚಿಕ್ಕ ಮಾರುಕಟ್ಟೆ ಪ್ರದೇಶವಾಗಿದ್ದ ಈ ನಗರವು 16ನೆಯ ಶತಮಾನದಲ್ಲಿ ಸುತ್ತಮುತ್ತಲಿನ ಹಳ್ಳಿಗಳನ್ನು ಸೇರಿಸಿಕೊಂಡು 20ನೆಯ ಶತಮಾನದ ಮಧ್ಯಭಾಗದ ಹೊತ್ತಿಗೆ ಹೆಚ್ಚು ಜನಸಂಖ್ಯೆಯುಳ್ಳ ಒಂದು ದೊಡ್ಡ ನಗರವಾಗಿ ಮಾರ್ಪಟ್ಟಿತ್ತು. ಸಾರ್ವಜನಿಕ ಸಾರಿಗೆ, ರೈಲ್ವೇ ಹಾಗೂ ರಸ್ತೆ ಸಾರಿಗೆ ಜಾಲಗಳು ಈ ಲೀಡ್ಸ್ ನಗರ ಪ್ರದೇಶವನ್ನು ಕೇಂದ್ರೀಕರಿಸಿವೆ ಹಾಗೂ ನಗರಗಳು ಹಾಗೂ ಪಟ್ಟಣಗಳಿಂದ ಇತರೆ ದೇಶಗಳಿಗೆ ಹೋಗುವುದಕ್ಕೆ ಒಂದಕ್ಕಿಂತ ಹೆಚ್ಚು ಮಾರ್ಗಗಳು ಇರುವಂತೆ ಸಂಪರ್ಕ ವ್ಯವಸ್ಥೆ ಕಲ್ಪಿಸಲಾಗಿದೆ. ಲೀಡ್ಸ್ ನಗರ ಪ್ರದೇಶಕ್ಕೆ ಇದರಲ್ಲಿ ಮಹತ್ವ ನೀಡಿರುವುದು, ಪ್ರಾದೇಶಿಕ ಅಭಿವೃದ್ಧಿಯಿಂದ ಗುರುತಿಸಲ್ಪಟ್ಟಿರುವ ಈ ನಗರದ ಪ್ರಾಮುಖ್ಯತೆಯನ್ನು ತೋರುತ್ತದೆ.