ಲುಫ್ಥಾನ್ಸ
From Wikipedia, the free encyclopedia
ಡ್ಯೂಷೆ ಲುಫ್ಥಾನ್ಸ AG (FWB: LHA) (German pronunciation: [ˈdɔʏt͡ʃə ˈlʊfthanza]) ಎಂಬುದು, ಒಟ್ಟಾರೆ ಸಾಗಣೆ ಮಾಡಿದ ಪ್ರಯಾಣಿಕರ ಸಂಖ್ಯೆಯ ಪರಿಭಾಷೆಯಲ್ಲಿ ಹೇಳುವುದಾದರೆ ಯುರೋಪ್ನಲ್ಲಿನ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದೆ, ಮತ್ತು ಜರ್ಮನಿಯ ಅಗ್ರಗಣ್ಯ ವಿಮಾನವಾಹಕವಾಗಿದೆ. ಲುಫ್ತ್ ("ಗಾಳಿ" ಎಂಬುದಕ್ಕಾಗಿರುವ ಜರ್ಮನ್ ಪದ), ಮತ್ತು ಹಾನ್ಸಾ (ಹಾನ್ಸಿಯಾಟಿಕ್ ಲೀಗ್ ಎಂಬ ಮಧ್ಯಯುಗದ ಪ್ರಬಲವಾದ ವ್ಯಾಪಾರೀ ಸಮೂಹದ ಹೆಸರು) ಎಂಬ ಎರಡು ಪದಗಳಿಂದ ಕಂಪನಿಯ ಹೆಸರು ಜನ್ಯವಾಗಿದೆ.
| ||||
ಸ್ಥಾಪನೆ | 1926 (as Deutsche Luft Hansa Aktiengesellschaft), refounded 1954 | |||
---|---|---|---|---|
Hubs | Lufthansa:
Company:
| |||
Focus cities |
| |||
Frequent-flyer program | Miles & More | |||
Airport lounge | HON / Senator Lounge | |||
Alliance | Star Alliance | |||
Subsidiaries | Airlines:
Shares:
Other:
| |||
Fleet size | 274 (+ 73 orders) excl.subsidiaries
746 (+ 156 orders) inc.subsidiaries excl.shares | |||
Destinations | 202 | |||
Company slogan | "There's no better way to fly" | |||
Headquarters | Lufthansa Aviation Center Airportring, Frankfurt am Main, North Rhine-Westphalia, Germany[2] | |||
Key people | Jürgen Weber (Head of Supervisory Board and former CEO), Wolfgang Mayrhuber(CEO), Stefan Lauer (Aviation Services and Human Resources), Stephan Gemkow (CFO) | |||
Revenue | €24.9 billion
(US$33.9 billion) | |||
Website | www.lufthansa.com |
ಸಾಗಿಸಲ್ಪಟ್ಟ ಒಟ್ಟಾರೆ ಪ್ರಯಾಣಿಕರ ಸಂಖ್ಯೆಯ ಪರಿಭಾಷೆಯಲ್ಲಿ ಹೇಳುವುದಾದರೆ, ಈ ವಿಮಾನಯಾನ ಸಂಸ್ಥೆಯು ವಿಶ್ವದ ಐದನೇ-ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, 18 ಸ್ವದೇಶಿ ಗಮ್ಯಸ್ಥಾನಗಳು ಹಾಗೂ ಆಫ್ರಿಕಾ, ಅಮೆರಿಕಾ ಖಂಡಗಳು, ಏಷ್ಯಾ ಹಾಗೂ ಯುರೋಪ್ ಖಂಡಗಳಾದ್ಯಂತದ 183 ಅಂತರರಾಷ್ಟ್ರೀಯ ಗಮ್ಯಸ್ಥಾನಗಳಿಗೆ ಅದು ತನ್ನ ಸೇವೆಗಳನ್ನು ನಿರ್ವಹಿಸುತ್ತಿದೆ. ತನ್ನ ಪಾಲುದಾರರ ಜೊತೆಗೂಡಿ ಸುಮಾರು 410 ಗಮ್ಯಸ್ಥಾನಗಳಿಗೆ ಲುಫ್ಥಾನ್ಸ ಸೇವೆಯನ್ನು ಒದಗಿಸುತ್ತಿದೆ.[3] ಕಂಪನಿಯನ್ನು ಅದರ ಅಂಗಸಂಸ್ಥೆಗಳೊಂದಿಗೆ ಸಂಯೋಜಿಸಿ ಲೆಕ್ಕಹಾಕಿ ನೋಡಿದಾಗ, ಅದು 722ಕ್ಕೂ ಹೆಚ್ಚಿನ ವಿಮಾನಗಳನ್ನು[4] ಹೊಂದುವುದರೊಂದಿಗೆ ವಿಶ್ವದಲ್ಲಿನ ಮೂರನೇ-ಅತಿದೊಡ್ಡ ಪ್ರಯಾಣಿಕ ವಿಮಾನಶ್ರೇಣಿಯನ್ನು ಒಳಗೊಂಡಿರುವುದು ಕಂಡುಬರುತ್ತದೆ.
ಕಲೋನ್ನ ಡ್ಯೂಟ್ಜ್ ಎಂಬಲ್ಲಿ ಲುಫ್ಥಾನ್ಸದ ನೋಂದಾಯಿತ ಕಚೇರಿ ಹಾಗೂ ಸಂಸ್ಥೆಯ ಕೇಂದ್ರಕಾರ್ಯಾಲಯವಿದ್ದರೆ, ಇದರ ಮುಖ್ಯ ಕಾರ್ಯಾಚರಣೆಗಳ ನೆಲೆ (ಲುಫ್ಥಾನ್ಸ ಏವಿಯೇಷನ್ ಸೆಂಟರ್ [LAC]) ಹಾಗೂ ಪ್ರಧಾನ ಸಂಚಾರಿ ಕೇಂದ್ರವು ಫ್ರಾಂಕ್ಫರ್ಟ್ ಆಮ್ ಮೇನ್ನಲ್ಲಿನ ಫ್ರಾಂಕ್ಫರ್ಟ್ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿದೆ ಹಾಗೂ ಒಂದು ಎರಡನೇ ಕೇಂದ್ರವು ಮ್ಯುನಿಕ್ ವಿಮಾನ ನಿಲ್ದಾಣದಲ್ಲಿ ನೆಲೆಗೊಂಡಿದೆ.[3][5][6][7] ಲುಫ್ಥಾನ್ಸದ ಬಹುಪಾಲು ವಿಮಾನ ಚಾಲಕರು, ನೆಲ ಸಿಬ್ಬಂದಿ, ಹಾಗೂ ವಿಮಾನದ ಪರಿಚಾರಕರು ಫ್ರಾಂಕ್ಫರ್ಟ್ನಲ್ಲಿ ನೆಲೆಗೊಂಡಿದ್ದಾರೆ.[8]
ಲುಫ್ಥಾನ್ಸವು ವಿಶ್ವದ ಅತಿದೊಡ್ಡ ವಿಮಾನಯಾನ ಸಂಸ್ಥೆ ಒಕ್ಕೂಟವಾದ ಸ್ಟಾರ್ ಅಲಯೆನ್ಸ್ನ ಓರ್ವ ಸಂಸ್ಥಾಪಕ ಸದಸ್ಯನಾಗಿದೆ. ಥಾಯ್ ಏರ್ವೇಸ್, ಯುನೈಟೆಡ್ ಏರ್ಲೈನ್ಸ್, ಏರ್ ಕೆನಡಾ ಹಾಗೂ ಸ್ಕ್ಯಾಂಡಿನೇವಿಯನ್ ಏರ್ಲೈನ್ಸ್ ಸಿಸ್ಟಮ್ ಇವೇ ಮೊದಲಾದ ವಿಮಾನಯಾನ ಸಂಸ್ಥೆಗಳನ್ನು ಒಡಗೂಡಿಕೊಂಡು 1997ರಲ್ಲಿ ಸ್ಟಾರ್ ಅಲಯೆನ್ಸ್ ಒಕ್ಕೂಟವು ರೂಪುಗೊಂಡಿತು. 500ಕ್ಕಿಂತಲೂ ಹೆಚ್ಚಿನ ವಿಮಾನಗಳನ್ನು ಲುಫ್ಥಾನ್ಸ ಗ್ರೂಪ್ ನಿರ್ವಹಿಸುತ್ತದೆ ಮತ್ತು 146 ರಾಷ್ಟ್ರೀಯತೆಗಳಿಗೆ ಸೇರಿದ (2007ರ ಡಿಸೆಂಬರ್ 31ರವೇಳೆಗೆ ಇದ್ದಂತೆ) ವಿಶ್ವಾದ್ಯಂತದ 105,261 ಜನರನ್ನು ಇದು ಸೇವೆಗೆ ನೇಮಿಸಿಕೊಂಡಿದೆ. 2008ರಲ್ಲಿ, ಲುಫ್ಥಾನ್ಸ ವಿಮಾನಗಳಲ್ಲಿ 70.5 ದಶಲಕ್ಷ ಪ್ರಯಾಣಿಕರು ಪಯಣಿಸಿದರು (ಇದರಲ್ಲಿ ಜರ್ಮನ್ವಿಂಗ್ಸ್, BMI, AUA, ಬ್ರಸೆಲ್ಸ್ ಏರ್ಲೈನ್ಸ್ಗಳಲ್ಲಿ ಪಯಣಿಸಿದವರ ವಿವರ ಸೇರಿಲ್ಲ).