ವಿಶ್ವನಾಥನ್ ಆನಂದ್
From Wikipedia, the free encyclopedia
ವಿಶ್ವನಾಥನ್ ಆನಂದ್ (ಜನನ: ಡಿಸೆಂಬರ್ ೧೧, ೧೯೬೯) ಭಾರತದ ಪ್ರಸಿದ್ಧ ಚದುರಂಗದ (ಚೆಸ್) ಆಟಗಾರ. ಫಿಡೆ ಕ್ರಮಾಂಕಗಳ ಪ್ರಕಾರ, ೨೦೦೪ ರಲ್ಲಿ ಪ್ರಪಂಚದ ಎರಡನೆ ಸ್ಥಾನ ಪಡೆದಿದ್ದು (ಗ್ಯಾರಿ ಕ್ಯಾಸ್ಪರೋವ್ ಮೊದಲ ಸ್ಥಾನ), ಪ್ರತಿಷ್ಠಿತ ಗ್ರ್ಯಾಂಡ್ಮಾಸ್ಟರ್ ಪದವಿಯನ್ನು ಹೊಂದಿದ್ದಾರೆ. ೨೦೦೭ರಲ್ಲಿ ವಿಶ್ವ ಚಾಂಪಿಯನ್ ಪಟ್ಟವನ್ನು ಪಡೆದಿದ್ದಾರೆ.
Quick Facts ವಿಶ್ವನಾಥನ್ ಆನಂದ್, Full name ...
ವಿಶ್ವನಾಥನ್ ಆನಂದ್ | |
---|---|
Full name | ವಿಶ್ವನಾಥನ್ ಆನಂದ್ |
Country | ಭಾರತ |
Born | (1969-12-11) ೧೧ ಡಿಸೆಂಬರ್ ೧೯೬೯ (ವಯಸ್ಸು ೫೪) ಮಯಿಲದುತ್ತುರೈ, ತಮಿಳುನಾಡು, ಭಾರತ |
Title | ಗ್ರಾಂಡ್ಮಾಸ್ಟರ್ (೧೯೮೮) |
World Champion | ೨೦೦೦-೨೦೦೨ (ಫಿಡೆ) ೨೦೦೭-ಪ್ರಸಕ್ತ (ನಿರ್ವಿವಾದಿತ) |
FIDE rating | ೨೮೧೭ (ಮೊದಲ ಸ್ಥಾನ, ಮಾರ್ಚಿ ೨೦೧೧ಫಿಡೆ ಅಂತರಾಷ್ಟ್ರೀಯ ಶ್ರೇಣಿ) |
Peak rating | ೨೮೧೭ (ಮಾರ್ಚಿ ೨೦೧೧) |
Close
ಕೆಲವೊಮ್ಮೆ "ವಿಶಿ" ಎಂದು ಕರೆಯಲ್ಪಡುವ ಆನಂದ್ ತಮ್ಮ ಮೊದಲ ಅಂತಾರಾಷ್ಟ್ರೀಯ ಯಶಸ್ಸನ್ನು ಪಡೆದಿದ್ದು ೧೯೮೭ ರ ವಿಶ್ವ ಜೂನಿಯರ್ ಸ್ಪರ್ಧೆಯಲ್ಲಿ ಗೆದ್ದಾಗ. ೧೯೯೦ ರ ದಶಕದ ಪ್ರಾರಂಭದ ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ಉತ್ತಮ ಸಾಧನೆಯನ್ನು ತೋರಿ ಅನೇಕ ಪ್ರತಿಷ್ಠಿತ ಟೂರ್ನಿಗಳನ್ನು ಗೆದ್ದರು. ೧೯೯೧ ರಲ್ಲಿ ಗೆದ್ದ ರೆಜಿಯೋ ಎಮಿಲಿಯಾ ಟೂರ್ನಿ ಇವುಗಳಲ್ಲಿ ಒಂದು. ಅವರ ಆಟದ ಆಶ್ಚರ್ಯಕರ ಗುಣವೆಂದರೆ ತಮ್ಮ ಪಂದ್ಯಗಳಲ್ಲಿ ಪ್ರಾರಂಭದಿಂದ ಕೊನೆಯವರೆಗೂ ಅತ್ಯಂತ ವೇಗದಿಂದ ತಮ್ಮ ನಡೆಗಳನ್ನು ನಡೆಸುತ್ತಿದ್ದರು!