ಸಲಾಲಾಹ್, ಒಮಾನ್
From Wikipedia, the free encyclopedia
'ಒಮಾನ್ ದೇಶ'ದ ಎರಡನೆಯ ದೊಡ್ಡ ಪಟ್ಟಣವೆಂದು ಹೆಸರಾದ 'ಸಲಾಲ್' (Salalah), Salalah (Arabic: صلالة; transliterated Şalālah), ದಕ್ಷಿಣದ ಒಮಾನಿ ಪ್ರಾಂತ್ಯದ 'ಧೊಫಾರ್' ನಲ್ಲಿ, ಗವರ್ನರ್ (ವಾಲಿ) ರವರ ಆವಾಸ ಸ್ಥಾನವಿದೆ. 'ಸಲಾಲ್,' ಗೆ ಬಂದವಲಸಿಗರು, 'ಕಡಲತಡಿ'ಗೆ ಬರವುದು ಸಹಜ. ಸನ್, ೨೦೦೯ ರಲ್ಲಿನ ಜನಸಂಖ್ಯೆ, ೧೯೭,೧೬೯ ಎಂದು ವರದಿಗಳು ತಿಳಿಸುತ್ತವೆ. ಇಲ್ಲಿ ಪ್ರವಾಸಿಗರಿಗೆ ಬೆಚ್ಚಿಬೀಳುವ ಮೈನವಿರೇಳುವ ಅನುಭವವನ್ನು ಮಾತ್ರ ಜೀವನದಲ್ಲಿ ಮರೆಯಲು ಸಾಧ್ಯವಾಗದ ಮಾತು. 'ಸಲಾಲ್ 'ನೋಡಲೆಂದೇ ಬರುವ ಪ್ರವಾಸಿಗರಿಗೇನೂ ಕಡಿಮೆಯಿಲ್ಲ. ’ಒಮಾನ್’ ನ ರಾಜಧಾನಿ 'ಮಸ್ಕಾಟ್ 'ನಿಂದ, ೧,೦೪೦ ಕಿ.ಮೀ ದೂರದಲ್ಲಿದೆ, ದೇಶದ ಎರಡನೆಯ ರಾಜಧಾನಿ ಎಂದನ್ನಿಸಿಕೊಳ್ಳುತ್ತಿರುವ 'ಸಲಾಲ್' ಪಟ್ಟಾಣ. ದಕ್ಷಿಣ ತುದಿಯಲ್ಲಿ ಪ್ರಾವಾಸಿ ತಾಣಗಳಿವೆ. ತೆಂಗು ಮತ್ತು ಬಾಳೆತೋಟಗಳು ಯಾತ್ರಿಕರನ್ನು ಸ್ವಾಗತಿಸುತ್ತವೆ. ಕಣ್ಣಿಗೆ ಕಾಣುವಷ್ಟು ದೂರ ಕಡಲ ತೀರವಿದೆ. ವರ್ಷದಲ್ಲಿ ೨ ತಿಂಗಳು ಇಲ್ಲಿ ಮಳೆ. ಕೊಲ್ಲಿ ರಾಜ್ಯಗಳಲ್ಲಿ 'ಸಲಾಲ್' ಎದ್ದು ಕಾಣಿಸುತ್ತದೆ. ಇಲ್ಲಿನ ಅತ್ಯಾಕರ್ಷಣೆಯ ಕೇಂದ್ರವೆಂದರೆ, 'ಮೊಗ್ ಸೇಲ್ ನಲ್ಲಿರುವ ಕಡಲ ತೀರ', (Al Mughsayl), ಸಲಾಲ್ ನಿಂದ ಸುಮಾರು, ೪೦ ಕಿ.ಮೀ.ದೂರದಲ್ಲಿದೆ.
ಸಲಾಲಾಹ್ Salalah
صلالة | |
---|---|
City | |
Coordinates: 17°01′11″N 54°05′23″E | |
Country | ಒಮಾನ್ |
ಮುಹಫಧ | ಧೋಫಾರ್ |
Government | |
• Type | ನಿರಂಕುಶ ರಾಜಪ್ರಭುತ್ವ |
• ಸುಲ್ತಾನ್ | ಕ್ಯುಬೊಸ್ ಬಿನ್ ಸೇಡ್ |
Population (2016) | |
• Metro | ೩,೪೦,೮೧೫ |
Time zone | UTC+4 (Oman standard time) |
Website | www.OMANet.om |