ಸಿಟಿಗ್ರೂಪ್
From Wikipedia, the free encyclopedia
ಸಿಟಿಗ್ರೂಪ್ ಇಂಕ್. (ಇದನ್ನು ಸಿಟಿ ಎಂದು ಬ್ರಾಂಡ್ ಮಾಡಲಾಗಿದೆ) ಎಂಬುದು ಅಮೆರಿಕಾದ ಒಂದು ಪ್ರಮುಖ ಹಣಕಾಸಿನ ಸೇವೆಗಳ ಕಂಪನಿಯಾಗಿದ್ದು, ನ್ಯೂಯಾರ್ಕ್ ನಗರದಲ್ಲಿ ಅದು ತನ್ನ ಮೂಲವನ್ನು ಹೊಂದಿದೆ. 1998ರ ಏಪ್ರಿಲ್ 7ರಂದು ನಡೆದ, ಇತಿಹಾಸದಲ್ಲಿನ ಪ್ರಪಂಚದ ಅತಿದೊಡ್ಡ ವಿಲೀನಗಳ ಪೈಕಿ ಒಂದರಿಂದ ಸಿಟಿಗ್ರೂಪ್ ರೂಪುಗೊಂಡಿತು; ಇದು ಬ್ಯಾಂಕಿಂಗ್ ದೈತ್ಯ ಸಿಟಿಕಾರ್ಪ್ ಮತ್ತು ಹಣಕಾಸಿನ ವಾಣಿಜ್ಯಕೂಟವಾದ ಟ್ರಾವೆಲರ್ಸ್ ಗ್ರೂಪ್ ನಡುವಿನ ಒಂದು ವಿಲೀನವಾಗಿತ್ತು ಎಂಬುದು ಗಮನಾರ್ಹ ಅಂಶ.[2]
This article is outdated. (July 2010) |
ಸಂಸ್ಥೆಯ ಪ್ರಕಾರ | Public NYSE: C ಟೆಂಪ್ಲೇಟು:Tyo |
---|---|
ಸ್ಥಾಪನೆ | New York City, New York (1812) |
ಮುಖ್ಯ ಕಾರ್ಯಾಲಯ | New York City, New York, U.S. |
ವ್ಯಾಪ್ತಿ ಪ್ರದೇಶ | Worldwide |
ಪ್ರಮುಖ ವ್ಯಕ್ತಿ(ಗಳು) | Richard D. Parsons (Chairman) Vikram Pandit (CEO) John Gerspach (CFO) |
ಉದ್ಯಮ | Banking Financial services |
ಉತ್ಪನ್ನ | Consumer banking Corporate banking Investment banking Global wealth destruction Financial analysis Private equity |
ಆದಾಯ | $80.285 billion (2009)[1] |
ಆದಾಯ(ಕರ/ತೆರಿಗೆಗೆ ಮುನ್ನ) | $32.463 billion (2009)[1] |
ನಿವ್ವಳ ಆದಾಯ | -$1.606 billion (2009)[1] |
ಒಟ್ಟು ಆಸ್ತಿ | $1.938 trillion (2Q 2010) |
ಒಟ್ಟು ಪಾಲು ಬಂಡವಾಳ | $157.330 billion (2Q 2010)[1] |
ಉದ್ಯೋಗಿಗಳು | 259,000 (2Q 2010)[1] |
ಜಾಲತಾಣ | Citigroup.com |
ಸಿಟಿಗ್ರೂಪ್ ಇಂಕ್ ಪ್ರಪಂಚದ ಅತಿದೊಡ್ಡ ಹಣಕಾಸಿನ ಸೇವೆಗಳ ಜಾಲವನ್ನು ಹೊಂದಿದ್ದು, ಇದು 140 ದೇಶಗಳಲ್ಲಿ ಹಬ್ಬಿದೆ ಮತ್ತು ವಿಶ್ವಾದ್ಯಂತ ಸರಿಸುಮಾರು 16,000 ಕಚೇರಿಗಳನ್ನು ಒಳಗೊಂಡಿದೆ. ವಿಶ್ವಾದ್ಯಂತ ಸರಿಸುಮಾರು 260,000 ಸಿಬ್ದಂದಿಗಳನ್ನು ನೇಮಿಸಿಕೊಂಡಿರುವ ಈ ಕಂಪನಿಯು, 140 ದೇಶಗಳಲ್ಲಿ 200 ದಶಲಕ್ಷಕ್ಕೂ ಹೆಚ್ಚಿನ ಗ್ರಾಹಕ ಖಾತೆಗಳನ್ನು ಹೊಂದಿದೆ. US ಸರ್ಕಾರಿ ಖಜಾನೆಯ ಭದ್ರತೆಗಳಿಗೆ[3] ಇದೊಂದು ಪ್ರಧಾನ ವ್ಯಾಪಾರಿಯಾಗಿದೆ.
2008ರ ಜಾಗತಿಕ ಹಣಕಾಸಿನ ಬಿಕ್ಕಟ್ಟಿನ ಅವಧಿಯಲ್ಲಿ ಸಿಟಿಗ್ರೂಪ್ ಬೃಹತ್ ನಷ್ಟಗಳನ್ನು ಅನುಭವಿಸಿತು ಮತ್ತು 2008ರ ನವೆಂಬರ್ನಲ್ಲಿ U.S. ಸರ್ಕಾರವು ಇದನ್ನು ಒಂದು ಭಾರೀ ಪಾರುಮಾಡುವಿಕೆಯ ಪ್ರಕ್ರಿಯೆಯಲ್ಲಿ ರಕ್ಷಿಸಿತು.[4] ಇದರ ಅತಿದೊಡ್ಡ ಷೇರುದಾರರಲ್ಲಿ, ಮಧ್ಯ ಪ್ರಾಚ್ಯ ಮತ್ತು ಸಿಂಗಪೂರ್ ವಲಯಗಳಿಂದ ಬಂದಿರುವ ನಿಧಿಗಳು ಸೇರಿವೆ.[5] 2009ರ ಫೆಬ್ರುವರಿ 27ರಂದು, ಸಿಟಿಗ್ರೂಪ್ ಒಂದು ಪ್ರಕಟಣೆಯನ್ನು ನೀಡಿ, ತುರ್ತು ನೆರವಿನಲ್ಲಿನ 25 ಶತಕೋಟಿ $ನಷ್ಟು ಹಣವನ್ನು ಸಾಮಾನ್ಯ ಷೇರುಗಳಾಗಿ ಪರಿವರ್ತಿಸುವ ಮೂಲಕ ಅಮೆರಿಕಾ ಸಂಯುಕ್ತ ಸಂಸ್ಥಾನವು ಕಂಪನಿಯಲ್ಲಿ 36%ನಷ್ಟು ಇಕ್ವಿಟಿ ಹಣವನ್ನು ಹೂಡಿಕೆ ಮಾಡಲಿದೆ ಎಂದು ತಿಳಿಸಿತು; ಒಂದು ತಿಂಗಳ ಹಿಂದೆ ನಡೆದ ಬ್ಯಾಂಕ್ ಆಫ್ ಅಮೆರಿಕಾದ 19 ಶತಕೋಟಿ $ನಷ್ಟು ಮೌಲ್ಯದ ಷೇರು ಮಾರಾಟವನ್ನು ಮೀರಿಸಿದ, US ಇತಿಹಾಸದಲ್ಲಿನ ಅತಿದೊಡ್ಡ ಏಕಮಾತ್ರ ಷೇರು ಮಾರಾಟದಲ್ಲಿ 21 ಶತಕೋಟಿ $ನಷ್ಟು ಮೌಲ್ಯದ ಸಾಮಾನ್ಯ ಷೇರುಗಳು ಮತ್ತು ಇಕ್ವಿಟಿಯನ್ನು ಸಿಟಿಗ್ರೂಪ್ ಮಾರಾಟಮಾಡಿದ ನಂತರ, ಈ ಹೂಡಿಕೆಹಣವನ್ನು 27%ಗೆ ತಗ್ಗಿಸಲಾಯಿತು.
ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ನಾಲ್ಕು ದೊಡ್ಡ ಬ್ಯಾಂಕುಗಳ ಪೈಕಿ ಸಿಟಿಗ್ರೂಪ್ ಒಂದಾಗಿದ್ದು, ಬ್ಯಾಂಕ್ ಆಫ್ ಅಮೆರಿಕಾ, JP ಮಾರ್ಗಾನ್ ಚೇಸ್ ಮತ್ತು ವೆಲ್ಸ್ ಫಾರ್ಗೋ ಬ್ಯಾಂಕುಗಳು ಉಳಿದ ಮೂರು ಬ್ಯಾಂಕುಗಳಾಗಿವೆ.[6][7][8][9][10][11][12]