ಸ್ವಾತಂತ್ರ್ಯದ ಪ್ರತಿಮೆ
From Wikipedia, the free encyclopedia
| name = Statue of Liberty | image = Statue of Liberty, NY.jpg | caption = The Statue of Liberty in New York Harbor | location = [[Libername=whereliberty>"Frequently Asked Questions". NPark Service. Retrieved 2007-03-22.</ees = 40 | lat_minutes = 41 | lat_seconds = 38 | lat_direction = N | long 7 | long_minutes = 2 | long_seconds = 37 | long_direction = W | locmapin = New York | built =October 28, 1886 | architect= Frederic Auguste Bartholdi | architecture= | area = 12 acres (49,000 m2)[1] | visitation_num = 3.2 million[2] | visitation_year = 2007 | governing_body = U.S. National Park Service | designation1 = WHS | designation1_date = 1984 (8th session) | designation1_type = Cultural | designation1_criteria = i, vi | designation1_number = 307 | designation1_free1name = Region | designation1_free1value = Europe and North America | designation2 = NRHP | designation2_offname = Statue of Liberty National Monument, Ellis Island and Liberty Island | designation2_date = October 15, 1966[3] | designation2_number = 66000058 | designation3 = NMON | designation3_date = October 15, 1924 | designation3_free1name = Designated by President | designation3_free1value = Calvin Coolidge[4] | designation4 = NYC Landmark | designation4_date = September 14, 1976 | designation4_type = Individual }} (ಸ್ಟ್ಯಾಚ್ಯೂ ಆಫ್ ಲಿಬರ್ಟಿ ಪ್ರತಿಮೆಯು ಅಮೆರಿಕದ ಅಪರೂಪದ ಸ್ಮಾರಕ. ಇದನ್ನು ವಿಶ್ವದ ಜ್ಞಾನೋದಯದ ಸಂಕೇತವೆಂದೂ ಪರಿಗಣಿಸಲಾಗುತ್ತದೆ) ಸ್ಟ್ಯಾಚ್ಯೂ ಆಫ್ ಲಿಬರ್ಟಿ (ಸ್ವಾತಂತ್ರ್ಯದ ಪ್ರತಿಮೆ) (French: Statue de la Liberté) ಯನ್ನು 'ಲಿಬರ್ಟಿ ಎನ್ಲೈಟೆನಿಂಗ್ ದಿ ವರ್ಲ್ಡ್ ' (French: la Liberté éclairant le monde) ಎಂದು ಅಧಿಕೃತವಾಗಿ ಹೆಸರಿಸಲಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, 1886ರ ಅಕ್ಟೋಬರ್ 28ರಂದು ಈ ಪ್ರತಿಮೆ ಅನಾವರಣಗೊಂಡಿತು. ಫ್ರಾನ್ಸ್ ದೇಶದ ಜನರು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸ್ನೇಹಪೂರ್ವಕವಾಗಿ ಈ ಪ್ರತಿಮೆಯನ್ನು ನೀಡಿದ್ದರು. ಅಮೆರಿಕನ್ ಕ್ರಾಂತಿ[5] ಸಂದರ್ಭದಲ್ಲಿ ಇವೆರಡೂ ದೇಶಗಳ ನಡುವೆ ಸ್ನೇಹವೇರ್ಪಟ್ಟಿತ್ತು. 'ಸ್ಟೊಲಾ' ಎಂಬ ಹೊಳಪಿನ ಕಿರೀಟ ಮತ್ತು ಪಾದರಕ್ಷೆ ಧರಿಸಿ, ಮುರಿದುಹೋದ ಸರಪಳಿಯನ್ನು ಮೆಟ್ಟಿ, ಬಲಗೈಯಲ್ಲಿ ಪಂಜು, ಹಾಗೂ ಸ್ವಾತಂತ್ರ್ಯ ದಿನಾಂಕ JULY IV MDCCLXXVI [6] ಕೆತ್ತಲಾದ 'ಟ್ಯಾಬುಲಾ ಅನ್ಸಾಟಾ' ಫಲಕ ಎಡಗೈಯಲ್ಲಿ ಹಿಡಿದು ನಿಂತ ಮಹಿಳೆಯೊಬ್ಬಳನ್ನು ಪ್ರತಿನಿಧಿಸುವ ಕೆತ್ತನೆ ಕಲಾಕೃತಿ ಇದಾಗಿದೆ. ನ್ಯೂಯಾರ್ಕ್ ಬಂದರಿನಲ್ಲಿರುವ ಲಿಬರ್ಟಿ ದ್ವೀಪದ ಮೇಲಿರುವ ಈ ಪ್ರತಿಮೆಯು, ಪ್ರವಾಸಿಗರು, ವಲಸೆಗಾರರು ಮತ್ತು ಹಡಗಿನ ಮೂಲಕ ಬರುವ ಅಮೆರಿಕನ್ನರನ್ನೂ ಸ್ವಾಗತಿಸುತ್ತದೆ.[7] ಫ್ರೆಡೆರಿಕ್ ಆಗಸ್ಟ್ ಬಾರ್ತೊಲ್ಡಿ ಈ ಪ್ರತಿಮೆಯ ಶಿಲ್ಪಿ.[8] ಇದರ ವಿನ್ಯಾಸಕ್ಕಾಗಿ ಅವರು U.S. ಪೆಟೆಂಟ್ ಹಕ್ಕು ಸ್ವಾಮ್ಯ ಪಡೆದಿದ್ದಾರೆ.[9]
Historic Site
ಮೌರಿಸ್ ಕೋಚ್ಲಿನ್ ಎಂಬಾತ ಪ್ರತಿಮೆಯ ಆಂತರಿಕ ವಿನ್ಯಾಸಕಾರ. ಈತ ವಿಶ್ವವಿಖ್ಯಾತ ಐಫೆಲ್ ಗೋಪುರದ ನಿರ್ಮಾತೃ ಗುಸ್ತಾವ್ ಐಫೆಲ್ನ ಸಂಸ್ಥೆಯಲ್ಲಿ ಮುಖ್ಯ ಅಭಿಯಂತರನಾಗಿದ್ದ. ವಿನ್ಯಾಸಗಾರ ರಿಚರ್ಡ್ ಮಾರಿಸ್ ಹಂಟ್ ಪ್ರತಿಮೆಯ ಪೀಠಭಾಗದ ವಿನ್ಯಾಸ ಮಾಡಿದ. ಯೂಜೆನ್ ವೀಯೊಲೆ-ಲು-ಡ್ಯುಪ್ರತಿಮೆಯ ನಿರ್ಮಾಣದಲ್ಲಿ ತಾಮ್ರ ಲೋಹದ ಬಳಕೆಗೆ ಕಾರಣನಾಗಿದ್ದಾನೆ. ಮೃದುವಾದ (ಮೆದು ಆಕಾರಕ್ಕೆ ಹೊಂದಿಕೊಳ್ಳಬಲ್ಲ) ಲೋಹವನ್ನು ಬಳಸಿ, ಮೆರಗಿನಿಂದ ಲೋಹಕೃತಿ ನಿರ್ಮಿಸುವ ರಪೂಸೆ ತಂತ್ರಕ್ಕೂ ಈತನೇ ಕಾರಣನಾಗಿದ್ದ.[10]
ಉಕ್ಕಿನ ಚೌಕಟ್ಟಿನ (ಮೂಲತಃ ಹದಗೊಳಿಸಿದ ಕಬ್ಬಿಣ)ದ ಮೇಲೆ ಶುದ್ಧ ತಾಮ್ರದ ರಕ್ಷಣಾ ಕವಚದಿಂದ ಈ ಪ್ರತಿಮೆಯನ್ನು ರಚಿಸಲಾಗಿದೆ. ಆದರೆ ಪಂಜಿನ ಜ್ವಾಲೆಗೆ ಗೋಲ್ಡ್ ಲೀಫ್ ಲೇಪನ ಮಾಡಲಾಗಿದೆ (ಮೂಲತಃ ತಾಮ್ರದಿಂದ ಮಾಡಲಾಗಿದ್ದು, ಆನಂತರ ಗಾಜಿನ ಹಲಗೆಗೆ ಹೊಂದಿಸಿಕೊಳ್ಳುವಂತೆ ಅದನ್ನು ಪರಿವರ್ತಿಸಲಾಗಿತ್ತು). ಪ್ರತಿಮೆಯು ಆಯತಾಕಾರದ ಶಿಲೆಯ ಪೀಠಸ್ಥಾನದ ಮೇಲೆ ನಿಂತಿದೆ. ಈ ಪೀಠವು ಏರುಪೇರಿನ ಹನ್ನೊಂದು ತುದಿಗಳುಳ್ಳ ನಕ್ಷತ್ರಾಕಾರದ ಆಧಾರವನ್ನು ಹೊಂದಿದೆ. ಪ್ರತಿಮೆಯೂ ೧೫೧ ಅಡಿ (೪೬ ಮೀ) ಎತ್ತರವಿದೆ. ಪೀಠ ಮತ್ತು ಆಧಾರ ಪರಿಗಣಿಸಿದರೆ ಅದು ೩೦೫ ಅಡಿ (೯೩ ಮೀ)ಇನ್ನಷ್ಟು ಎತ್ತರದಲ್ಲಿರುವಂತೆ ಕಾಣುತ್ತದೆ. ಜಗತ್ತಿನಾದ್ಯಂತ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಲಾಂಛನಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಸಹ ಒಂದು ಎಂದು ಪರಿಗಣಿಸಲಾಗುತ್ತದೆ.[11] ಜೊತೆಗೆ, 1886ರಿಂದ ಜೆಟ್ ಯುಗದ ವರೆಗೂ, ಯೂರೋಪಿನಿಂದ ಹಡಗಿನಲ್ಲಿ ಬರುತ್ತಿದ್ದ ಲಕ್ಷಗಟ್ಟಲೆ ವಲಸೆಗಾರರಿಗೆ, ಮೊಟ್ಟಮೊದಲು ಗೋಚರಿಸುವ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಪರೂಪದ ದೃಶ್ಯಗಳಲ್ಲಿ ಈ ಪ್ರತಿಮೆಯೂ ಒಂದಾಗಿತ್ತು. ಈ ಪ್ರತಿಮೆಯು ರಾಷ್ಟ್ರೀಯ ಉದ್ಯಾನ ಸೇವೆಯ ಆಡಳಿತದಲ್ಲಿ ಸ್ವಾತಂತ್ರ್ಯ ಸಂಕೇತಿಸುವ ಪ್ರತಿಮೆ ಎನಿಸಿಕೊಂಡಿದೆ. ರಾಷ್ಟ್ರೀಯ ಸ್ಮಾರಕ ದ ಕೇಂದ್ರಬಿಂದುವೂ ಆಗಿದೆ. ಈ ರಾಷ್ಟ್ರೀಯ ಸ್ಮಾರಕವು ಎಲಿಸ್ ದ್ವೀಪವನ್ನೂ ಸಹ ಒಳಗೊಂಡಿದೆ.