ಹಾವು
From Wikipedia, the free encyclopedia
ಹಾವು ಒಂದು ಪ್ರಾಣಿ. ಇದು ವರ್ಟಿಬ್ರೇಟಾ ವಿಭಾಗ (ಕಶೇರುಕ - ಬೆನ್ನು ಹುರಿ ಮೂಳೆ), ರೆಪ್ಟಿಲಿಯಾ (ಸರೀಸೃಪ) ವರ್ಗ, ಸ್ಕ್ವೊಮೇಟ್ ಗಣ, ಓಫಿಡಿಯ ಉಪಗಣಕ್ಕೆ ಸೇರಿರುವ ಪ್ರಾಣಿ (ಸ್ನೇಕ್). ಹಲ್ಲಿ, ಆಮೆ, ಉಡ, ಮೊಸಳೆಗಳೂ ಇದೇ ವರ್ಗಕ್ಕೆ ಸೇರುತ್ತವೆ. ಉರಗ ಪರ್ಯಾಯನಾಮ. ನೆಲದ ಮೇಲೆ ಹರಿದಾಡುತ್ತ, ಹೊರಳುತ್ತ ಅಂಕುಡೊಂಕಾಗಿ ಚಲಿಸುವ, ಬಿಲವಾಸೀ ಜೀವನಕ್ಕೆ ಮಾರ್ಪಾಡುಗೊಂಡು ವಿಕಾಸವಾಗಿರುವ ಕಶೇರುಕಗಳ ಒಂದು ಗುಂಪು (ಸ್ನೇಕ್). ಮರಗಳ ಮೇಲೂ ನೀರಿನಲ್ಲೂ ವಾಸಿಸುವ ಹಾವುಗಳು ಇವೆ. ಇವಕ್ಕೆ ಕಾಲು, ಭುಜಾಸ್ಥಿ, ಎದೆಮೂಳೆ ಮತ್ತು ಮೂತ್ರ ಕೋಶಗಳಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಬೆನ್ನು ಮೂಳೆ ಹಾಗೂ ಪಕ್ಕೆಲುಬುಗಳಿವೆ. ಎದೆ ಮೂಳೆ ಇಲ್ಲದ ಕಾರಣ ಪಕ್ಕೆಲುಬು ಸಡಿಲವಾಗಿದೆ. ತಲೆ ಬುರುಡೆಯ ಮೂಳೆಗಳು ಅಳ್ಳಕವಾಗಿವೆ. ಹಾಗಾಗಿ ಅವು ತಲೆಯನ್ನು ಸುಲಭವಾಗಿ ಆಡಿಸಬಹುದು. ಈ ಪ್ರಾಣಿಗಳು ಮಾಂಸಾಹಾರಿಗಳು.[1]
Quick Facts Snakes Temporal range: Late Cretaceous – Holocene,, Scientific classification ...
Snakes Temporal range: Late Cretaceous – Holocene, | |
---|---|
Western terrestrial garter snake, a species of snake from western North America. | |
Scientific classification | |
ಕ್ಷೇತ್ರ: | ಯೂಕ್ಯಾರ್ಯೋಟಾ |
ಸಾಮ್ರಾಜ್ಯ: | ಅನಿಮೇಲಿಯ |
ವಿಭಾಗ: | ಕಾರ್ಡೇಟಾ |
ವರ್ಗ: | ರೆಪ್ಟೀಲಿಯಾ |
ಗಣ: | ಸ್ಕ್ವಾಮೇಟಾ |
ಏಕಮೂಲ ವರ್ಗ: | ಒಫಿಡಿಯಾ |
ಉಪಗಣ: | ಸರ್ಪೆಂಟೀಸ್ Linnaeus, 1758 |
Infraorders | |
| |
Approximate world distribution of snakes, all species |
Close