ಒಪೆಕ್
From Wikipedia, the free encyclopedia
ಪೆಟ್ರೋಲಿಯಂ ರಫ್ತುಗಾರ ರಾಷ್ಟ್ರಗಳ ಸಂಘಟನೆ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು ೧೯೬೫ರಿಂದ ಆಸ್ಟ್ರಿಯಾ ದೇಶದ ವಿಯೆನ್ನಾ ನಗರದಲ್ಲಿ ಮುಖ್ಯ ಕಛೇರಿ ಹೊಂದಿದೆ. ಕೆಲವು ದರ್ಶಕರ ಪ್ರಕಾರ ಇದು ಕೇವಲ ವ್ಯಾಪಾರ ಸಂಘಟನೆಯಾಗಿದೆ.
ಈ ಸಂಘಟನೆಯ ಸಂವಿಧಾನದ ಪ್ರಕಾರ ಇದರ ಮುಖ್ಯ ಗುರಿಗಳು:
- ವೈಯಕ್ತಿಕ ಮತ್ತು ಸಾಂಘಿಕವಾಗಿ ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವುದು
- ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯ ಸ್ಥಿರತೆಯನ್ನು ಕಾಪಾಡುವುದು
- ತೈಲ ಉತ್ಪಾದಕ ದೇಶಗಳಿಗೆ ಸ್ಥಿರ ಆದಾಯವನ್ನು ತಲುಪಿಸುವುದು
- ಆಮದು ರಾಷ್ಟ್ರಗಳಿಗೆ ನಿರ್ದಿಷ್ಟ ಪ್ರಮಾಣದಲ್ಲಿ ತೈಲವನ್ನು ಪೂರೈಸುವುದು
ಆದರೆ ಒಪೆಕ್ನ ಪ್ರಭಾವ ಪ್ರತಿ ಹಂತದಲ್ಲೂ ಸ್ಥಿರತೆ ಉಂಟುಮಾಡುವಂಥದ್ದಾಗಿರಲಿಲ್ಲ. ೧೯೭೩ರ ತೈಲ ಬಿಕ್ಕಟ್ಟಿನ ಸಂದರ್ಭದಲ್ಲಿ ತೈಲವನ್ನು ಅಸ್ತ್ರವಾಗಿಸಿ ಇಡೀ ಪ್ರಪಂಚವನ್ನೇ ಎಚ್ಚರಗೊಳಿಸಿತ್ತು. ಆದರೆ ಇಂದು ಈ ಸಂಘಟನೆಗೆ ಹಿಂದಿನ ಶಕ್ತಿಯಿಲ್ಲದಿದ್ದರೂ ತೈಲದ ಬೆಲೆಯ ಮೇಲೆ ಇದರ ಹಿಡಿತ ಸಾಕಷ್ಟಿದೆ.