ಕೂಚಿಪೂಡಿ
ಶಾಸ್ತ್ರೀಯ ಭಾರತೀಯ ನೃತ್ಯಗಳಲ್ಲಿ ಒಂದು / From Wikipedia, the free encyclopedia
ಕೂಚಿಪೂಡಿ (Kuchipudi) (ತೆಲುಗು : కూచిపూడి) ('Koochipoodi' ('ಕೂಚಿಪೂಡಿ') ಎಂದು ಉಚ್ಚಾರಿತ) ಭಾರತ ದೇಶದ ಆಂಧ್ರಪ್ರದೇಶ ರಾಜ್ಯದ ಭಾರತೀಯ ಶಾಸ್ತ್ರೀಯ ನೃತ್ಯರೂಪ. ದಕ್ಷಿಣ ಭಾರತದ ಇತರೆಡೆಯೂ ಸಹ ಈ ನೃತ್ಯವು ಜನಪ್ರಿಯ. ಕೂಚಿಪೂಡಿ ಎಂಬುದು ಆಂಧ್ರಪ್ರದೇಶದ ಬಂಗಾಳ ಕೊಲ್ಲಿ ತೀರದಲ್ಲಿರುವ ಕೃಷ್ಣಾ ಜಿಲ್ಲೆಯ ದಿವಿ ತಾಲ್ಲೂಕಿನಲ್ಲಿರುವ ಗ್ರಾಮವೊಂದರ ಹೆಸರು. ಅಲ್ಲಿ ವಾಸವಾಗಿದ್ದ ಬ್ರಾಹ್ಮಣ ಸಮುದಾಯವು ಈ ನೃತ್ಯಕಲಾರೂಪವನ್ನು ಅಭ್ಯಸಿಸುತ್ತಿದ್ದ ರಿಂದ, ಇದಕ್ಕೆ 'ಕೂಚಿಪೂಡಿ ನೃತ್ಯ' ಎನ್ನುವುದು ರೂಢಿಯಾಯಿತು.