ತಮಿಳು
ಭಾರತದ ಭಾಷೆ / From Wikipedia, the free encyclopedia
ದ್ರಾವಿಡ ಭಾಷೆಗಳಲ್ಲಿ ಬಹಳ ಪ್ರಾಚೀನ ಮತ್ತು ಶ್ರೀಮಂತ ಭಾಷೆ ತಮಿಳು.[1] ತಮಿಳು[2] ಭಾಷೆಯಲ್ಲಿ ದೊರೆತಿರುವ ಕೃತಿಗಳಲ್ಲಿ ಮೊತ್ತಮೊದಲನೆಯದು ತೊಲ್ಕಾಪ್ಪಿಯಂ. ಇದು ಒಂದು ಪ್ರಾಚೀನ ಲಕ್ಷಣ ಗ್ರಂಥ. ಇದರ ಕಾಲ ಕ್ರಿ.ಪೂ. ೩ನೇ ಶತಮಾನ. ಪಂಚದ್ರಾವಿಡ ಭಾಷೆಗಳಾದ ತಮಿಳು, ಕನ್ನಡ ತೆಲುಗು, ಮಲಯಾಳಂ ಮತ್ತು ತುಳುಗಳಲ್ಲಿ ತಮಿಳು ಭಾಷೆಯು ತೀರ ಹಳೆಯದಾದರೆ ನಂತರ ಉಳಿದ ನಾಲ್ಕು ಭಾಷೆಗಳು ಬರುತ್ತವೆ. ಈ ಎಲ್ಲ ಭಾಷೆಗಳಲ್ಲೂ ಬರವಣಿಗೆ ಎಡದಿಂದ ಬಲಕ್ಕೆ ಸಾಗುತ್ತದೆ. ತಮಿಳಿಗೆ ತನ್ನದೇ ಆದ ಲಿಪಿ ಬಳಕೆಯಲ್ಲಿದೆ. ತಮಿಳು ಪ್ರಮುಖವಾಗಿ ಭಾರತ ಹಾಗು ಶ್ರೀಲಂಕಾದಲ್ಲಿ ಮಾತನಾಡಲ್ಪಡುವ, ದ್ರಾವಿಡ ಭಾಷಾಕುಟುಂಬಕ್ಕೆ ಸೇರಿದ ಒಂದು ಭಾಷೆ.