ಬೀಚಿ
From Wikipedia, the free encyclopedia
ಬೀchi (ರಾಯಸಂ ಭೀಮಸೇನ ರಾವ್) ಏಪ್ರಿಲ್ ೨೩, ೧೯೧೩ - ಡಿಸೆಂಬರ್ ೭, ೧೯೮೦) ಅಂದರೆ ವೈಶಿಷ್ಟ್ಯಪೂರ್ಣ ಹಾಸ್ಯ ಬರಹಗಳಿಗೆ ಮತ್ತೊಂದು ಹೆಸರು.
ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ".
(- ಅಂದನಾ ತಿಂಮ)
Quick Facts ರಾಯಸಂ ಭೀಮಸೇನ ರಾವ್, ಜನನ ...
ರಾಯಸಂ ಭೀಮಸೇನ ರಾವ್ | |
---|---|
ಜನನ | ಏಪ್ರಿಲ್ ೨೩, ೧೯೧೩ ಹರಪನಹಳ್ಳಿ, ವಿಜಯನಗರ ಜಿಲ್ಲೆ |
ಮರಣ | ಡಿಸೆಂಬರ್ ೭, ೧೯೮೦ |
ಕಾವ್ಯನಾಮ | ಬೀchi |
ವೃತ್ತಿ | ಸಾಹಿತಿ |
ರಾಷ್ಟ್ರೀಯತೆ | ಭಾರತೀಯರು |
ಪ್ರಭಾವಗಳು
|
Close
ಬರಹಗಾರನ ವೈಯಕ್ತಿಕ ಪ್ರತಿಭೆ ಜಡ ಅನುಕರಣೆಯ ಮರಳಿನಲ್ಲಿ ಇಂಗಿ ಹೋಗಬಾರದು. ಇದು ಬೀchi ದೃಷ್ಟಿಕೋನ. ಈ ದೃಷ್ಟಿಯನ್ನು ಕಂಡೇ ಇರಬೇಕು ತುಂಬ ಗಂಭೀರ ಬರಹಗಾರರಾದ ಶಂ.ಬಾ. ಜೋಶಿ ಯವರು ಬೀchiಯವರನ್ನು “ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ” ಎಂದು ವರ್ಣಿಸಿದ್ದಾರೆ. ಬೀchi ಕನ್ನಡ ಸಾಹಿತ್ಯಕ್ಕೊಂದು ಸೊಗಸು ಮೂಡಿಸಿದವರು.[1]