ಮಸೂರ ಅವರೆ
From Wikipedia, the free encyclopedia
ಮಸೂರ ಅವರೆ ಅಥವಾ ಮಸೂರ್ ದಾಲ್ ಅಥವಾ ಮಸೂರ ಬೇಳೆ (ಲೆನ್ಸ್ ಕ್ಯುಲಿನರಿಸ್ ) ಯನ್ನು ದ್ವಿದಳ ಧಾನ್ಯದ ಒಂದು ಬಗೆಯೆಂದು ಪರಿಗಣಿಸಲಾಗುತ್ತದೆ. ಚನ್ನಂಗಿ ಬೇಳೆ ಪರ್ಯಾಯ ನಾಮ. ಇದು ದ್ವಿದಳ ಧಾನ್ಯಗಳ ಸಸ್ಯದ ಜಾತಿಗೆ ಸೇರಿದ ಪೊದೆಯಾಗಿ ಬೆಳೆಯುವ ಒಂದು ವಾರ್ಷಿಕ ಸಸ್ಯ. ಇದರ ಬೀಜಗಳು ಮಸೂರ-ಆಕಾರದಲ್ಲಿ ಬೆಳೆಯುತ್ತವೆ. ಇದು15 inches (38 cm)ರಷ್ಟು ಎತ್ತರವಿರುತ್ತದೆ, ಹಾಗೂ ಬೀಜಗಳು ಕೋಶಗಳಲ್ಲಿ ಬೆಳೆಯುತ್ತವೆ. ಸಾಮಾನ್ಯವಾಗಿ ಪ್ರತಿಯೊಂದರಲ್ಲೂ ಎರಡು ಬೀಜಗಳಿರುತ್ತವೆ.
ಇದರ ಮೂಲಸ್ಥಾನ ದಕ್ಷಿಣ ಮತ್ತು ಪಶ್ಚಿಮ ಏಷ್ಯ ಎನ್ನಲಾಗಿದೆ. ಗ್ರೀಸ್ ಮತ್ತು ಈಜಿಪ್ಟ್ ದೇಶಗಳಲ್ಲೂ ಈ ಬೆಳೆ ಬಳಕೆಯಲ್ಲಿದೆ.
ಉತ್ತರ ಭಾರತದಲ್ಲಿ ಇದು ಹೆಚ್ಚು ಪ್ರಸಿದ್ಧ. ಇದರ ಕಾಳಿನ ಸಾರು ಬಲುರುಚಿ ಎನ್ನಲಾಗಿದೆ. ಹಿಟ್ಟಿನ ಜೊತೆ ಅಥವಾ ರೊಟ್ಟಿಯ ಜೊತೆ ಉಪಯೋಗಿಸುತ್ತಾರೆ. ಮಸೂರಬೇಳೆ ಚಳಿಗಾಲದ ಬೆಳೆ. ಮೂರು ತಿಂಗಳೊಳಗೆ ಫಲ ಕೊಡುತ್ತದೆ. ಅಲ್ಲದೇ ಇದು ಜೀರ್ಣಕಾರಿ ಕೂಡ. ಹೀಗಾಗಿ ಇದರ ಬಳಕೆ ಹೆಚ್ಚು. ಮೊಳಕೆಯೊಡೆದಿರುವ ಕಾಳುಗಳಲ್ಲಿ ಜೀವಸತ್ತ್ವಗಳ ಮೊತ್ತ ಇನ್ನೂ ಅಧಿಕ.
ಒಂದು ಹೆಕ್ಟೇರಿಗೆ ಸಾಧಾರಣವಾಗಿ 450-900 ಕೆಜಿ. ಇಳುವರಿ ಪಡೆಯಬಹುದು.