ಶುಕ್ರ
From Wikipedia, the free encyclopedia
ಶುಕ್ರ - ಇದು ಸೂರ್ಯನಿಗೆ ಎರಡನೇ ಅತಿ ಸಮೀಪದ ಗ್ರಹ. ಸೂರ್ಯನನ್ನು ೨೨೪.೭ ಭೂಮಿ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. −4.6 ಗೋಚರ ಪ್ರಮಾಣವಿರುವ ಶುಕ್ರವು, ಚಂದ್ರನ ನಂತರ ರಾತ್ರಿಯ ಆಗಸದಲ್ಲಿ ಅತ್ಯಂತ ಪ್ರಕಾಶಮಾನವಾದ ಕಾಯ. ೪೭.೮° ಗರಿಷ್ಠ ನೀಳತೆಯನ್ನು ಹೊಂದಿರುವ ಶುಕ್ರಗ್ರಹವು ಮುಂಜಾನೆ/ಮುಸ್ಸಂಜೆಗಳಲ್ಲಿ ಚೆನ್ನಾಗಿ ಕಾಣುತ್ತದೆ. ಇದನ್ನು "ಹಗಲು ನಕ್ಷತ್ರ" ಮತ್ತು "ಸಂಜೆ ನಕ್ಷತ್ರ" ಎಂದೂ ಕರೆಯಲಾಗುತ್ತದೆ.
Click image for description | |||||||
ಕಕ್ಷೆಯ ಗುಣಗಳು | |||||||
---|---|---|---|---|---|---|---|
ದೀರ್ಘಾರ್ಧ ಅಕ್ಷ | ೧೦೮,೨೦೮,೯೨೬ ಕಿ.ಮೀ. ೦.೭೨೩ ೩೩೧ ೯೯ AU | ||||||
ಕಕ್ಷೆಯ ಪರಿಧಿ | ೬೮೦,೦೦೦,೦೦೦ ಕಿ.ಮೀ. ೪.೫೪೫ AU | ||||||
ಕಕ್ಷೀಯ ಕೇಂದ್ರ ಚ್ಯುತಿ | ೦.೦೦೬ ೭೭೩ ೨೩ | ||||||
ಪುರರವಿ | ೧೦೭,೪೭೬,೦೦೨ ಕಿ.ಮೀ. ೦.೭೧೮ ೪೩೨ ೭೦ AU | ||||||
ಅಪರವಿ | ೧೦೮,೯೪೧,೮೪೯ ಕಿ.ಮೀ. ೦.೭೨೮ ೨೩೧ ೨೮ AU | ||||||
ಕಕ್ಷೀಯ ಪರಿಭ್ರಮಣ ಕಾಲ | ೨೨೪.೭೦೦ ೬೯ ದಿನ (೦.೬೧೫ ೧೯೭ ೦ a) | ||||||
ಯುತಿ ಅವಧಿ | ೫೮೩.೯೨ d | ||||||
ಸರಾಸರಿ ಕಕ್ಷಾ ವೇಗ | ೩೫.೦೨೦ ಕಿ.ಮೀ./ಕ್ಷಣ | ||||||
ಗರಿಷ್ಠ ಕಕ್ಷಾ ವೇಗ | ೩೫.೨೫೯ ಕಿ.ಮೀ./ಪ್ರತಿ ಕ್ಷಣ | ||||||
ಕನಿಷ್ಠ ಕಕ್ಷಾ ವೇಗ | ೩೪.೭೮೪ ಕಿ.ಮೀ./ಪ್ರತಿ ಕ್ಷಣ | ||||||
ಓರೆ | ೩.೩೯೪ ೭೧° (ಸೂರ್ಯನ ಸಮಭಾಜಕ ರೇಖೆಗೆ ೩.೮೬°) | ||||||
ಆರೋಹಣ ಸಂಪಾತದ ರೇಖಾಂಶ | ೭೬.೬೮೦ ೬೯° | ||||||
ಪುರರವಿಯ ಕೋನಭಾಗ | ೫೪.೮೫೨ ೨೯° | ||||||
ನೈಸರ್ಗಿಕ ಉಪಗ್ರಹಗಳ ಸಂಖ್ಯೆ | ೦ | ||||||
ಭೌತಿಕ ಗುಣಲಕ್ಷಣಗಳು | |||||||
ಸಮಭಾಜಕ ರೇಖೆಯ ವ್ಯಾಸ | ೧೨,೧೦೩.೭ ಕಿ.ಮೀ. (ಭೂಮಿಯ ೦.೯೪೯) | ||||||
ಮೇಲ್ಮೈ ವಿಸ್ತೀರ್ಣ | ೪.೬೦×೧೦೮ ಕಿ.ಮೀ.೨ (ಭೂಮಿಯ ೦.೯೦೨) | ||||||
ಗಾತ್ರ | ೯.೨೮×೧೦೧೧ ಕಿ.ಮೀ.³ (ಭೂಮಿಯ ೦.೮೫೭) | ||||||
ದ್ರವ್ಯರಾಶಿ | ೪.೮೬೮೫×೧೦೨೪ kg (ಭೂಮಿಯ ೦.೮೧೫) | ||||||
ಸರಾಸರಿ ಸಾಂದ್ರತೆ | ೫.೨೦೪ ಗ್ರಾಂ/ಸೆ.ಮೀ.೩ | ||||||
ಸಮಭಾಜಕದ ಬಳಿ ಗುರುತ್ವ | ೮.೮೭ ಮೀ./ಕ್ಷಣ೨ (೦.೯೦೪ ಜೀ) | ||||||
ಮುಕ್ತಿ ವೇಗ | ೧೦.೩೬ ಕಿ.ಮೀ./ಪ್ರತಿ ಕ್ಷಣ | ||||||
ಅಕ್ಷೀಯ ಪರಿಭ್ರಮಣ ಕಾಲ | −೨೪೩.೦೧೮೫ ದಿನ | ||||||
ಅಕ್ಷೀಯ ಪರಿಭ್ರಮಣ ವೇಗ | ೬.೫೨ ಕಿ.ಮೀ./ಘಂ. (ಸಮಭಾಜಕದಲ್ಲಿ) | ||||||
ಅಕ್ಷದ ಓರೆ | ೨.೬೪° | ||||||
ಉತ್ತರ ಧ್ರುವದ ವಿಷುವದಂಶ |
೨೭೨.೭೬° (೧೮ ಘಂ ೧೧ ನಿ ೨ ಕ್ಷ) ೧ | ||||||
ಘಂಟಾವೃತ್ತಾಂಶ | ೬೭.೧೬° | ||||||
ಪ್ರತಿಫಲನಾಂಶ | ೦.೬೫ | ||||||
ಮೇಲ್ಮೈ* ತಾಪಮಾನ |
| ||||||
Adjective | Venusian or (rarely) Cytherean | ||||||
(*min temperature refers to cloud tops only) | |||||||
ವಾಯುಮಂಡಲದ ಗುಣಲಕ್ಷಣಗಳು | |||||||
ವಾತಾವರಣದ ಒತ್ತಡ | ೯.೨ MPa | ||||||
ಇಂಗಾಲದ ಡೈ-ಆಕ್ಸೈಡ್ | ~೯೬.೫% | ||||||
ಸಾರಜನಕ | ~೩.೫% | ||||||
ಗಂಧಕದ ಡೈ-ಆಕ್ಸೈಡ್ | .೦೧೫% | ||||||
ಆರ್ಗಾನ್ | .೦೦೭% | ||||||
ನೀರಾವಿ | .೦೦೨% | ||||||
ಇಂಗಾಲದ ಮಾನಾಕ್ಸೈದ್ | .೦೦೧೭% | ||||||
ಹೀಲಿಯಂ | .೦೦೧೨% | ||||||
ನಿಯಾನ್ | .೦೦೦೭% | ||||||
Carbonyl sulfide Hydrogen chloride Hydrogen fluoride |
trace | ||||||
ಗಾತ್ರದಲ್ಲಿ ಸುಮಾರು ಭೂಮಿಯಷ್ಟೇ ಇದೆ.ತನ್ನ ಅಕ್ಷದ ಮೇಲೆ ಬುಧ ಗ್ರಹಕ್ಕಿಂತ ನಿಧಾನವಾಗಿ ಸುತ್ತುವ ಇದರ ೧ ದಿನ ಭೂಮಿಯ ೨೪೩ ದಿನಕ್ಕೆ ಸಮಾನ.ಇದು ಭೂಮಿಯ ವಿರುದ್ಧ ದಿಕ್ಕಿನಲ್ಲಿ ಸುತ್ತುತ್ತದೆ.ಇದರ ವಾತಾವರಣದಲ್ಲಿ ಇಂಗಾಲಾಮ್ಲ ಹೆಚ್ಚಾಗಿರುವುದರಿಂದ ಈ ಗ್ರಹದಲ್ಲಿ ಜೀವಿಗಳು ಇಲ್ಲ.ಇದರ ಮೇಲ್ಮೈ ಸೀಸವನ್ನೂ ಕರಗಿಸಬಲ್ಲಷ್ಟು ಶಾಖದಿಂದ ಕೂಡಿದೆ.
ಘನರೂಪಿಯಾದ ಶುಕ್ರವು ಭೂಮಿಯ ಗಾತ್ರ ಮತ್ತು ರಚನೆಯನ್ನು ಹೋಲುವುದರಿಂದ ಇದನ್ನು ಭೂಮಿಯ "ಸಹೋದರ ಗ್ರಹ"ವೆಂದೂ ಕರೆಯಲಾಗುತ್ತದೆ. ಶುಕ್ರವು ಚೆನ್ನಾಗಿ ಬೆಳಕನ್ನು ಪ್ರತಿಫಲಿಸುವ ಮೋಡಗಳಿಂದ ಆವೃತವಾಗಿದ್ದು, ಅದರ ಮೇಲ್ಮೈ ಸೂರ್ಯನ ಬೆಳಕಿರುವಾಗ ಕಾಣುವುದಿಲ್ಲ. ೨೦ನೇ ಶತಮಾನದಲ್ಲಿ ಗ್ರಹ ವಿಜ್ಞಾನವು ಶುಕ್ರದ ಕೆಲವು ರಹಸ್ಯಗಳನ್ನು ಬಯಲುಮಾಡುವ ಮುನ್ನ ಅದರ ಬಗ್ಗೆ ಹಲವಾರು ವದಂತಿಗಳು, ಅನುಮಾನಗಳು ಹುಟ್ಟಿಕೊಂಡಿದ್ದವು. ಮುಖ್ಯವಾಗಿ ಇಂಗಾಲದ ಡೈ-ಆಕ್ಸೈಡನ್ನು ಒಳಗೊಂಡ ಶುಕ್ರದ ವಾಯುಮಂಡಲವು ಘನರೂಪಿ ಗ್ರಹಗಳಲ್ಲೇ ಅತಿ ದಟ್ಟವಾಗಿದೆ. ಶುಕ್ರದ ಮೇಲ್ಮೈಯಲ್ಲಿ ವಾಯು ಒತ್ತಡವು ಭೂಮಿಯ ಮೇಲಿನ ಒತ್ತಡಕ್ಕಿಂತ 90 ಪಟ್ಟು ಅಧಿಕ.
ಶುಕ್ರದ ಮೇಲ್ಮೈನ ವಿವರವಾದ ನಕ್ಷೆಯನ್ನು ಕಳೆದ 20 ವರ್ಷಗಳಲ್ಲಿ ಮಾತ್ರ ತಯಾರಿಸಲಾಗಿದೆ. ವ್ಯಾಪಕವಾಗಿ ಜ್ವಾಲಾಮುಖಿಗಳು ಕಂಡುಬರುವ ಈ ಮೇಲ್ಮೈನಲ್ಲಿ ಇಂದಿಗೂ ಕೆಲವು ಜ್ವಾಲಾಮುಖಿಗಳು ಜೀವಂತವಾಗಿರಬಹುದು.
ಶುಕ್ರ ಗ್ರಹದ ವ್ಯಾಸ ೧೨,೪೦೦ ಕಿ.ಮೀ ಅಂದರೆ ೭,೭೦೦ ಮೈಲಿಗಳು.ಸೂರ್ಯನ ಸುತ್ತ ಒಂದು ಬಾರಿ ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಕಾಲ ೨೨೪.೭ ದಿನಗಳು.ಸೂರ್ಯನಿಂದ ಸುಮಾರು ೧೦೮,೦೦೦,೦೦೦ ಕಿ.ಮೀ. ಅಂದರೆ ೬೭,೦೦೦,೦೦೦ ಮೈಲಿಗಳ ದೂರದಲ್ಲಿದೆ.