ಬುಗಾಟ್ಟಿ ಆಟೋಮೊಬೈಲ್ಸ್
From Wikipedia, the free encyclopedia
ಬುಗಾಟ್ಟಿ ಆಟೋಮೊಬೈಲ್ಸ್ ಎಸ್.ಎ.ಎಸ್ (ಫ್ರೆಂಚ್ ಉಚ್ಚಾರಣೆಯಲ್ಲಿ: ಬೈಗಾಟಿ)ಇದು ಫ್ರೆಂಚ್ನ ಐಷಾರಾಮಿ ಸ್ಪೋರ್ಟ್ಸ್ ಕಾರು ತಯಾರಕ ಸಂಸ್ಥೆಯಾಗಿದೆ. ಈ ಕಂಪನಿಯು ೧೯೯೮ ರಲ್ಲಿ ವೋಕ್ಸ್ವ್ಯಾಗನ್ ಗ್ರೂಪ್ನ ಅಂಗಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟಿತು. ಇದು ಫ್ರಾನ್ಸ್ನ ಅಲ್ಸೇಸ್ನ ಮೊಲ್ಶೈಮ್ನಲ್ಲಿ ನೆಲೆಗೊಂಡಿದೆ. ಬುಗಾಟ್ಟಿ ಆಟೋಮೊಬೈಲ್ ಬ್ರಾಂಡ್ ಅನ್ನು ೧೯೦೯ ರಲ್ಲಿ ಮೊಲ್ಶೈಮ್ನಲ್ಲಿ ಎಟ್ಟೋರ್ ಬುಗಾಟ್ಟಿಯವರು (೧೮೮೧-೧೯೪೭) ಸ್ಥಾಪಿಸಿದರು. ನಂತರ ಕ್ರೀಡೆ, ರೇಸಿಂಗ್ ಮತ್ತು ಐಷಾರಾಮಿ ಕಾರುಗಳ ತಯಾರಿಕೆಗೆ ಕಾರಣರಾದರು. [4]
Quick Facts ಸಂಸ್ಥೆಯ ಪ್ರಕಾರ, ಪೂರ್ವಾಧಿಕಾರಿ ...
ಸಂಸ್ಥೆಯ ಪ್ರಕಾರ | ಅಂಗಸಂಸ್ಥೆ |
---|---|
ಪೂರ್ವಾಧಿಕಾರಿ | ಬುಗಾಟಿ ಆಟೋಮೊಬಿಲಿ ಎಸ್.ಪಿ.ಎ.[1] |
ಮುಖ್ಯ ಕಾರ್ಯಾಲಯ | ಮೊಲ್ಶೈಮ್, ಫ್ರಾನ್ಸ್[2] |
ಪ್ರಮುಖ ವ್ಯಕ್ತಿ(ಗಳು) | ಮೇಟ್ ರಿಮಾಕ್ (ಬುಗಾಟಿ ರಿಮಾಕ್ ನ ಸಿಇಒ) |
ಉದ್ಯಮ | ಆಟೋಮೋಟಿವ್ ಉದ್ಯಮ |
ಉತ್ಪನ್ನ | ಸ್ಪೋರ್ಟ್ಸ್ ಕಾರು |
ಉತ್ಪನ್ನ ಫಲಿತಾಂಶ | ೭೬ ವಾಹನಗಳು (೨೦೧೮)[3] |
ಉದ್ಯೋಗಿಗಳು | ೨೯೭ (೨೦೧೬) |
ಪೋಷಕ ಸಂಸ್ಥೆ | ಬುಗಾಟಿ ರಿಮಾಕ್ ಡಿ.ಒ.ಒ. ಮತ್ತು ಫೋಕ್ಸ್ ವ್ಯಾಗನ್ ಗ್ರೂಪ್ |
ಉಪಸಂಸ್ಥೆಗಳು |
|
ಜಾಲತಾಣ | www |
Close
ನವೆಂಬರ್ ೨೦೨೧ ರಲ್ಲಿ, ಕಂಪನಿಯು ರಿಮಾಕ್ ಗ್ರೂಪ್ ಮತ್ತು ಪೋರ್ಷೆಎಜಿ ನಡುವಿನ ಜಂಟಿ ಉದ್ಯಮವಾದ ಬುಗಾಟ್ಟಿ ರಿಮ್ಯಾಕ್ನ ಭಾಗವಾಯಿತು. ನವೆಂಬರ್ ೧, ೨೦೨೧ ರಿಂದ, ಬುಗಾಟ್ಟಿ ರಿಮ್ಯಾಕ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಮೇಟ್ ರಿಮಾಕ್ರವರು ಕಂಪನಿಯನ್ನು ಮುನ್ನಡೆಸುತ್ತಿದ್ದಾರೆ.