ಫ್ರಾನ್ಸ್
ಪಶ್ಚಿಮ ಯುರೋಪ್ನಲ್ಲಿರುವ ಒಂದು ದೇಶ / From Wikipedia, the free encyclopedia
ಫ್ರಾನ್ಸ್ ಪಶ್ಚಿಮ ಯೂರೋಪಿನಲ್ಲಿರುವ ದೇಶ.[1] ಇದು ಯುರೋಪ್ ಖಂಡದ ಮೂರನೆಯ ಅತ್ಯಂತ ದೊಡ್ಡ ದೇಶ. ಇದು ಯುರೋಪಿನ ಒಂದು ಬಲಾಡ್ಯ ದೇಶವಾಗಿದೆ.[2] ಇದು ಪ್ರಪಂಚದ ಹಲವೆಡೆ ತನ್ನ ವಸಾಹತುಗಳನ್ನು ಸ್ಥಾಪಿಸಿ ಹತ್ತೊಂಭತ್ತನೆಯ ಶತಮಾನ ಮತ್ತು ೨೦ನೆಯ ಶತಮಾನದ ಮೊದಲ ಭಾಗದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿತ್ತು.[3] ಸಾಂಸ್ಕೃತಿಕವಾಗಿ ಹಲವಾರು ಚಿಂತಕರು, ಕಲಾವಿದರು, ವಿಜ್ಞಾನಿಗಳನ್ನು ಹೊಂದಿ ಈಗಲೂ ಪ್ರಪಂಚದ ಗಮನಸೆಳೆಯುತ್ತಿದೆ. ಪ್ರಪಂಚದಲ್ಲಿ ನಾಲ್ಕನೆಯದಾಗಿ ಅತೀ ಹೆಚ್ಚು ಪಾರಂಪರಿಕ ತಾಣಗಳಿದ್ದು, ವರ್ಷಕ್ಕೆ ೮ ಕೊಟಿಗಿಂತಲೂ ಹೆಚ್ಚು ಪ್ರವಾಸಿಗಳನ್ನು ಸೆಳೆಯುತ್ತಿದೆ.[4]
ಫ್ರೆಂಚ್ ಗಣರಾಜ್ಯ République française ರೆಪಬ್ಲಿಕ್ ಫ್ರಾನ್ಸೇಸ್ | |
---|---|
Flag | |
Motto: ಲಿಬರ್ತೆ, ಎಗಾಲಿತೆ, ಫ್ರತೆರ್ನಿತೆ (ಫ್ರೆಂಚ್ ಭಾಷೆಯಲ್ಲಿ: "ಸ್ವಾತಂತ್ರ, ಸಮಾನತೆ, ಭ್ರಾತೃತ್ವ") | |
Anthem: ಲ ಮಾರ್ಸೈಎಸ್ | |
Capital and largest city | ಪ್ಯಾರಿಸ್ |
Official languages | ಫ್ರೆಂಚ್ ಭಾಷೆ |
Government | ಏಕೀಕೃತ ಗಣರಾಜ್ಯ |
• ರಾಷ್ಟ್ರಪತಿ | ಇಮ್ಮಾನ್ಯುವೆಲ್ ಮಾಕ್ರೋನ್ |
ಬರ್ನಾರ್ಡ್ ಕಾಜ಼ಾನುವೆ | |
ರಚನೆ | |
೮೪೩ (ವೆರ್ಡುನ್ ಒಪ್ಪಂದ) | |
೧೯೫೮ (೫ನೇ ಗಣರಾಜ್ಯ) | |
• ಮೆಟ್ರೋಪಾಲಿಟನ್ ಫ್ರಾನ್ಸ್ | |
Population | |
• ೨೦೦೬5 estimate | ೬೩,೫೮೭,೭೦೦ (೨೦ ನೇ) |
• ಮೆಟ್ರೋಪಾಲಿಟನ್ ಫ್ರಾನ್ಸ್ | ೬೧,೦೪೪,೬೮೪ (೨೦ ನೇ) |
GDP (PPP) | 2005 estimate |
• Total | $1.830 trillion (7th) |
• Per capita | $29,316 (20th) |
HDI (2003) | 0.938 very high · 16th |
Currency | ಯುರೋ (€) 6, CFP Franc 7 (EUR, XPF) |
Time zone | UTC+1 (CET 2) |
• Summer (DST) | UTC+2 (CEST 2) |
Calling code | 33 |
Internet TLD | .fr 8 |
1 Whole territory of the French Republic, including all the overseas departments and territories, but excluding the French territory of Terre Adélie in Antarctica where sovereignty is suspended since the signing of the Antarctic Treaty in 1959. 2 Metropolitan (i.e. European) France only. |
ಫ್ರಾನ್ಸ್ ಅಧಿಕೃತವಾಗಿ ರಿಪಬ್ಲಿಕ್ ಫ್ರಾನ್ಸೇಸ್, ಪಶ್ಚಿಮ ಯುರೋಪಿನ ಗಣರಾಜ್ಯ. ಇದು ಪಶ್ಚಿಮ ಯುರೋಪಿನಲ್ಲಿ ಅಟ್ಲಾಂಟಿಕ್ ಮತ್ತು ಮೆಡಿಟರೇನಿಯನ್ ಸಮುದ್ರಗಳ ನಡುವೆ ಹಬ್ಬಿದೆ. ಹೆಚ್ಚು ಕಡಿಮೆ ಷಟ್ಕೋನಾಕೃತಿಯಲ್ಲಿರುವ ಈ ದೇಶದ ಉತ್ತರದಲ್ಲಿ ಇಂಗ್ಲಿಷ್ ಕಡಲ್ಗಾಲುವೆ, ಬೆಲ್ಜಿಯಮ್ ಮತ್ತು ಲಕ್ಸೆಂಬರ್ಗ್, ಪಶ್ಚಿಮದಲ್ಲಿ ಅಟ್ಲಾಂಟಿಕ್ ಸಾಗರ ಮತ್ತು ಬಿಸ್ಕೇಕೊಲ್ಲಿ, ದಕ್ಷಿಣದಲ್ಲಿ ಸ್ಪೇನ್ ಮತ್ತು ಮೆಡಿಟರೇನಿಯನ್ ಸಮುದ್ರ, ಪೂರ್ವದಲ್ಲಿ ಪಶ್ಚಿಮ ಜರ್ಮನಿ, ಸ್ವಿಟ್ಜರ್ಲ್ಯಾಂಡ್ ಮತ್ತು ಇಟಲಿ ಇವೆ. ಫ್ರಾನ್ಸ್ ಉತ್ತರ ದಕ್ಷಿಣವಾಗಿ ೯೫೦ ಕಿ.ಮೀ. ಪೂರ್ವ ಪಶ್ವಿಮವಾಗಿ ೯೭೪ ಕಿ.ಮೀ ಇದ್ದು ಒಟ್ಟು ವಿಸ್ತೀರ್ಣ ೫೫೧,೫೦೦ ಚ.ಕಿ.ಮೀ ಇದೆ. ೩೭೦೦ ಕಿ.ಮೀ ಉದ್ದ ಸಮುದ್ರ ತೀರ ಹೊಂದಿದೆ. ೧೯೯೦ ರಲ್ಲಿ ಇಲ್ಲಿನ ಜನಸಂಖ್ಯೆ ೫೬,೬೩೪,೨೯೯ ಇದ್ದು ೨೦೦೦ ದ ಗಣತಿಯಂತೆ ೫೯೦೨೪,೦೦೦ ಆಗಿದೆ. ಇದರ ರಾಜಧಾನಿ ಪ್ಯಾರಿಸ್.