ಲಾವೋಸ್
From Wikipedia, the free encyclopedia
ಅಧಿಕೃತವಾಗಿ ಲಾವೊ ಪೀಪಲ್ಸ್ ಡೆಮೋಕ್ರಟಿಕ್ ರಿಪಬ್ಲಿಕ್ ಎಂದು ಕರೆಯುವ ಲಾವೋಸ್ (pronounced /ˈlɑː.oʊs/, /ˈlaʊ/ ಅಥವಾ /ˈleɪ.ɒs/) ಆಗ್ನೇಯ ಏಷ್ಯಾದ ಸಂಪೂರ್ಣವಾಗಿ ನೆಲಾವೃತವಾದ ಒಂದು ರಾಷ್ಟ್ರವಾಗಿದೆ. ಇದು ವಾಯವ್ಯದಲ್ಲಿ ಬರ್ಮಾ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ(ಪ್ರಜಾಪ್ರಭುತ್ವ ಚೀನಾ), ಪೂರ್ವದಲ್ಲಿ ವಿಯೆಟ್ನಾಂ, ದಕ್ಷಿಣದಲ್ಲಿ ಕಾಂಬೋಡಿಯ ಹಾಗೂ ಪಶ್ಚಿಮದಲ್ಲಿ ಥೈಲೆಂಡ್ ದೇಶಗಳ ಗಡಿಗಳಿಂದ ಆವೃತವಾಗಿದೆ. ಲಾವೋಸ್ 14ರಿಂದ 18ನೇ ಶತಮಾನದವರೆಗೆ ಅಸ್ತಿತ್ವದಲ್ಲಿದ್ದ ಲ್ಯಾನ್-ಕ್ಸಾಂಗ್ ಸಾಮ್ರಾಜ್ಯ ಅಥವಾ ದಶಲಕ್ಷ ಆನೆಗಳನ್ನು ಹೊಂದಿದ್ದ ನೆಲ ಎಂಬ ಹೆಸರಿನಲ್ಲಿ ಅದರ ಇತಿಹಾಸವನ್ನು ನಿರೂಪಿಸುತ್ತದೆ.
Lao People's Democratic Republic ສາທາລະນະລັດ ປະຊາທິປະໄຕ ປະຊາຊົນລາວ Sathalanalat Paxathipatai Paxaxon Lao | |
---|---|
Motto: "ສັນຕິພາບ ເອກະລາດ ປະຊາທິປະໄຕ ເອກະພາບ ວັດທະນາຖາວອນ" "Peace, Independence, Democracy, Unity and Prosperity" | |
Anthem: Pheng Xat Lao | |
Capital and largest city | Vientiane |
Official languages | Lao |
Official scripts | Lao script |
Demonym(s) | Laotian, Lao |
Government | Socialist republic, Single-party communist state |
• President | Lt. Gen. Choummaly Sayasone |
• Vice President | Bounnhang Vorachith |
• Prime Minister | Bouasone Bouphavanh |
• President of National Assembly | Thongsing Thammavong |
• President of the People's Supreme Court | Khammi Sayavong |
Independence From ಫ್ರಾನ್ಸ್ | |
• Date | 19 July, 1949 |
Area | |
• Total | 236,800 km2 (91,400 sq mi) (83rd) |
• Water (%) | 2 |
Population | |
• 2009 estimate | 6,320,000[1] (101st) |
• 1995 census | 4,574,848 |
• Density | 26.7/km2 (69.2/sq mi) (177th) |
GDP (PPP) | 2008 estimate |
• Total | $13.310 billion[2] (129th) |
• Per capita | $2,127[2] (137th) |
GDP (nominal) | 2008 estimate |
• Total | $5.374 billion[2] |
• Per capita | $859[2] |
Gini (2008) | 34.6 medium |
HDI (2007) | 0.619[3] Error: Invalid HDI value · 133rd |
Currency | Kip (LAK) |
Time zone | UTC+7 |
Driving side | right |
Calling code | 856 |
ISO 3166 code | LA |
Internet TLD | .la |
ಫ್ರೆಂಚ್ ರಕ್ಷಿತ ಪ್ರದೇಶ ಅವಧಿಯ ನಂತರ ಇದು 1949ರಲ್ಲಿ ಸ್ವಾತಂತ್ರ್ಯ ಪಡೆಯಿತು. ದೀರ್ಘಕಾಲದ ಆಂತರಿಕ ಯುದ್ಧವು ಕಮ್ಯೂನಿಸ್ಟ್ ಪ್ಯಾಥೆಟ್ ಲಾವೊ ಆಂದೋಲನದ ನಾಯಕತ್ವ 1975ರಲ್ಲಿ ಅಧಿಕಾರಕ್ಕೆ ಬಂದಾಗ ಅಧಿಕೃತವಾಗಿ ಕೊನೆಗೊಂಡಿತು. ಆದರೆ ಬಣಗಳ ನಡುವಿನ ಪ್ರತಿಭಟನೆಗಳು ಅನೇಕ ವರ್ಷಗಳ ಕಾಲ ಮುಂದುವರಿಯಿತು. ಇಲ್ಲಿನ ಜನಸಂಖ್ಯೆಯ ನಲವತ್ತನಾಲ್ಕು ಪ್ರತಿಶತ ಜನರು 2006ರ ಅಂಕಿಅಂಶದಂತೆ ದಿನವೊಂದಕ್ಕೆ US$1.25ಕ್ಕೆ ಸಮಾನವಾಗಿರುವ ಅಂತಾರಾಷ್ಟ್ರೀಯ ಬಡತನ ರೇಖೆಗಿಂತ ಕೆಳಗಡೆ ಬದುಕುತ್ತಿದ್ದಾರೆ. ಆದರೂ CIA ವರ್ಲ್ಡ್ ಫ್ಯಾಕ್ಟ್ಬುಕ್ ಈ ಅಂಕಿಅಂಶವನ್ನು ಪ್ರಸ್ತುತ 26%ನಷ್ಟು ಎಂದಿದೆ.[4]