ಲಿವರ್ ಪೂಲ್ ಫುಟ್ ಬಾಲ್ ಕ್ಲಬ್
From Wikipedia, the free encyclopedia
ಲಿವರ್ ಪೂಲ್ ಫುಟ್ ಬಾಲ್ ಕ್ಲಬ್ ಲಿವರ್ ಪೂಲ್ ನಲ್ಲಿರುವ ಒಂದು ಆಂಗ್ಲ ವೃತ್ತಿನಿರತ ಫುಟ್ ಬಾಲ್ ತಂಡವಾಗಿದೆ, ಇದು ಪ್ರೀಮಿಯರ್ ಲೀಗ್ ನಲ್ಲಿ ಭಾಗವಹಿಸುತ್ತದೆ. 1892 ರಲ್ಲಿ ಈ ಕ್ಲಬ್ ಸ್ಥಾಪಿತವಾದಂದಿನಿಂದ ಅದು ಆನ್ ಫೀಲ್ಡ್ ನಲ್ಲಿ ಆಡುತ್ತಿದೆ ಹಾಗೂ ಸ್ಥಾಪನೆಯಾದ ಮರುವರ್ಷವೇ ಅದನ್ನು ಫುಟ್ ಬಾಲ್ ಲೀಗ್ ಗೆ ಸೇರಿಸಿಕೊಳ್ಳಲಾಯಿತು.
ಪೂರ್ಣ ಹೆಸರು | Liverpool Football Club | |||
---|---|---|---|---|
ಉಪ ಹೆಸರು | The Reds | |||
ಸ್ಥಾಪನೆ | 15 ಮಾರ್ಚ್ 1892; 48255 ದಿನ ಗಳ ಹಿಂದೆ (1892-೦೩-15) (by John Houlding) | |||
ಮೈದಾನ | Anfield (ಸಾಮರ್ಥ್ಯ: 53,394[1]) | |||
ಮಾಲೀಕರು | Fenway Sports Group (John W. Henry & Tom Werner) | |||
ಅಧ್ಯಕ್ಷರು | Tom Werner | |||
ಮ್ಯಾನೇಜರ್ | Jürgen Klopp | |||
Premier League | ||||
2022–23 | Premier League, 5th | |||
ಕ್ಲಬ್ ನ ಅಧಿಕೃತ ಪುಟ | ||||
| ||||
Current season |
ಇಂಗ್ಲೆಂಡ್ ನ 20 ನೆಯ ಶತಮಾನದ ಅತಿ ಯಶಸ್ವಿ ಕ್ಲಬ್ [2][3] ಹಾಗೂ ಇಂಗ್ಲಿಷ್ ಫುಟ್ ಬಾಲ್ ನ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಕ್ಲಬ್ ಗಳಲ್ಲಿ ಒಂದಾದ ಲಿವರ್ ಪೂಲ್ ಜಂಟಿಯಾಗಿ ಲೀಗ್ ಪ್ರಶಸ್ತಿಗಳನ್ನು 18 ಬಾರಿ ಗೆದ್ದು ದಾಖಲೆ ನಿರ್ಮಿಸಿದೆ, ಏಳು ಫೆಡರೇಷನ್ ಏಷ್ಯಾ ಕಪ್ ಗಳನ್ನು ಗೆದ್ದಿದೆ ಮತ್ತು ಏಳು ಲೀಗ್ ಕಪ್ ಗಳನ್ನು ಗೆದ್ದು ಮತ್ತೊಂದು ದಾಖಲೆ ನಿರ್ಮಿಸಿದೆ. ಯೂರೋಪಿಯನ್ ಫುಟ್ ಬಾಲ್ ಸ್ಪರ್ಧೆಗಳಲ್ಲೂ ಲಿವರ್ ಪೂಲ್ ಅತ್ಯಂತ ಯಶಸ್ವಿ ತಂಡವಾಗಿದೆ; 2005 ರಲ್ಲಿ ಕಡೆಯ ಬಾರಿ ಗೆದ್ದ ಕಪ್ ಸೇರಿದಂತೆ ಲಿವರ್ ಪೂಲ್ ಐದು ಯೂರೋಪಿಯನ್ ಕಪ್ ಗಳನ್ನು ಗೆದ್ದಿದೆ ಹಾಗೂ ಮೂರು UEFA ಕಪ್ ಗಳಲ್ಲಿ ವಿಜಯ ಸಾಧಿಸಿದೆ. ಈ ಕ್ಲಬ್ ಪ್ರಸ್ತುತದಲ್ಲಿ ಯೂರೋಪ್ ನಲ್ಲಿ ಮೂರನೆಯ ಕ್ರಮಾಂಕದಲ್ಲೂ, ವಿಶ್ವದಲ್ಲಿ ಆರನೆಯ ಕ್ರಮಾಂಕದಲ್ಲೂ ಇದೆ; ಈ ಕ್ಲಬ್ ಅತಿ ಹೆಚ್ಚು ಅಂತರರಾಷ್ಟ್ರೀಯ ಟೈಟಲ್ ಗಳನ್ನು (ಪ್ರಶಸ್ತಿಗಳನ್ನು) ಗೆದ್ದಿರುವ ಹೆಗ್ಗಳಿಕೆಗೆ ಭಾಜನವಾಗಿದೆ.[4]
ಈ ತಂಡದ ಬೆಂಬಲಿಗರು ಎರಡು ಪ್ರಮುಖ ದುರಂತಗಳಿಗೆ ತುತ್ತಾಗಿದ್ದಾರೆ. ಮೊದಲನೆಯ ದುರಂತವೆಂದರೆ 1985 ರ ಹೇಯ್ಸೆಲ್ ಕ್ರೀಡಾಂಗಣ ದುರಂತ, ಆ ಕ್ರೀಡಾಂಗಣದಲ್ಲಿ ಮುನ್ನುಗ್ಗುತ್ತಿದ್ದ ಲಿವರ್ ಪೂಲ್ ಅಭಿಮಾನಿಗಳ ರಭಸ, ಒತ್ತಡಕ್ಕೆ ಗೋಡೆಯೊಂದು ಕುಸಿದು 39 ಜನ ಜುವೆಂಟಸ್ ಬೆಂಬಲಿಗರು ಅಸುನೀಗಿದರು. 1989ರ ಹಿಲ್ಸ್ ಬರ್ಗ್ ದುರಂತದಲ್ಲಿ 96 ಲಿವರ್ ಪೂಲ್ ಅಭಿಮಾನಿಗಳು ಸುತ್ತಲಿನ ಗೋಡೆಗೆ ಒತ್ತರಿಸಿಕೊಂಡ ಸಲುವಾಗಿ ತಮ್ಮ ಪ್ರಾಣಗಳನ್ನು ಕಳೆದುಕೊಂಡರು.
ದೀರ್ಫಕಾಲದಿಂದಲೂ ಲಿವರ್ ಪೂಲ್ ಗೆ ಅಕ್ಕಪಕ್ಕದಲ್ಲಿರುವ ಎವರ್ಟನ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್ ಗಳೊಡನೆ ತೀವ್ರವಾದ ಪೈಪೋಟಿಯಿದೆ. 1964ರಿಂದಲೂ ಈ ತಂಡದ ಸಮವಸ್ತ್ರದ ಬಣ್ಣವು ಸಂಪೂರ್ಣ ಕೆಂಪು; ಅದಕ್ಕೂ ಮುನ್ನ ಕೆಂಪು ಅಂಗಿ ಮತ್ತು ಬಿಳಿಯ ಚಡ್ಡಿ ಇದ್ದುದನ್ನು ಆ ಕಾಲದ (1964ರ) ಮ್ಯಾನೇಜರ್ ಬಿಲ್ ಶಾಂಕ್ಲಿ ಸಂಪೂರ್ಣ ಕೆಂಪಿಗೆ ಬದಲಾಯಿಸಿದರು. ಈ ಕ್ಲಬ್ ನ ಗೀತೆ "ಯೂ ವಿಲ್ ನೆವರ್ ವಾಕ್ ಅಲೋನ್".