ಪ್ರೀಮಿಯರ್ ಲೀಗ್
From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ದೇಶ | ಇಂಗ್ಲೆಂಡ್ |
---|---|
ಒಕ್ಕೂಟ | UEFA |
ಸ್ಥಾಪಿಸಲಾಯಿತು | 20 February 1992 |
ತಂಡಗಳ ಸಂಖ್ಯೆ | 20 |
ಪಿರಮಿಡ್ನಲ್ಲಿನ ಮಟ್ಟಗಳು | 1 |
ಗೆ ಗಡೀಪಾರು | Football League Championship |
ದೇಶೀಯ ಕಪ್(ಗಳು) | FA Cup, League Cup |
ಅಂತರರಾಷ್ಟ್ರೀಯ ಕಪ್ (ಗಳು) | Champions League, Europa League |
ಕೊನೆಯ ಚಾಂಪಿಯನ್ಶಿಪ್ಗಳು | Manchester United (2008–09) |
ಹೆಚ್ಚಿನ ಚಾಂಪಿಯನ್ಶಿಪ್ಗಳು | Manchester United (11) |
ಟಿವಿ ಪಾಲುದಾರರು | Sky Sports, ESPN |
ಜಾಲತಾಣ | PremierLeague.com |
2009–10 Premier League |
ಪ್ರೀಮಿಯರ್ ಲೀಗ್ ಎಂಬುದು ಅಸೋಸಿಯೇಷನ್ ಫುಟ್ಬಾಲ್ ಕ್ಲಬ್ಗಳ ಒಂದು ಆಂಗ್ಲ ವೃತ್ತಿಪರ ಲೀಗ್. ಆಂಗ್ಲ ಫುಟ್ಬಾಲ್ ಲೀಗ್ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿರುವ ಇದು, ರಾಷ್ಟ್ರದ ಪ್ರಾಥಮಿಕ ಫುಟ್ಬಾಲ್ ಸ್ಪರ್ಧೆಯಾಗಿದೆ. 20 ಕ್ಲಬ್ಗಳು ಭಾಗವಹಿಸುವ ಈ ಸ್ಪರ್ಧೆಯು, ಬಡತಿ ಹಾಗೂ ವರ್ಗಾವಣೆಯ ವ್ಯವಸ್ಥೆಯಲ್ಲಿ ದ ಫುಟ್ಬಾಲ್ ಲೀಗ್ನೊಂದಿಗೆ ಕೆಲಸ ಮಾಡುತ್ತದೆ. ಪ್ರೀಮಿಯರ್ ಲೀಗ್ ಒಂದು ಸಂಸ್ಥೆಯಾಗಿದ್ದು ಅದರ 20 ಸದಸ್ಯ ಕ್ಲಬ್ಗಳು ಷೇರುದಾರರಾಗಿ ವರ್ತಿಸುತ್ತವೆ. ಕ್ರೀಡಾಋತುಗಳು ಆಗಸ್ಟ್ನಿಂದ ಮೇವರೆಗೆ ನಡೆಯುತ್ತಿದ್ದು, ಪ್ರತಿ ತಂಡವು 38 ಪಂದ್ಯಗಳನ್ನಾಡುತ್ತಾ ಒಟ್ಟಾರೆ ಕ್ರೀಡಾಋತುವಿನಲ್ಲಿ 380 ಪಂದ್ಯಗಳು ನಡೆಯುತ್ತವೆ. ಬಹಳಷ್ಟು ಪಂದ್ಯಗಳನ್ನು ಶನಿವಾರಗಳು ಹಾಗೂ ಭಾನುವಾರಗಳಂದು ನಡೆಸಲಾಗುತ್ತದಾದರೂ, ಕೆಲ ಪಂದ್ಯಗಳನ್ನು ವಾರದ ದಿನಗಳ ಸಂಜೆಯಲ್ಲಿ ನಡೆಸಲಾಗುತ್ತದೆ. ಬಾರ್ಕ್ಲೇಸ್ ಬ್ಯಾಂಕ್ ಇದನ್ನು ಪ್ರಾಯೋಜಿಸುತ್ತದಾದರಿಂದ ಅಧಿಕೃತವಾಗಿ ಬಾರ್ಕ್ಲೇಸ್ ಪ್ರೀಮಿಯರ್ ಲೀಗ್ ಎಂದೇ ಕರೆಸಿಕೊಳ್ಳುತ್ತದೆ.
1888ರಲ್ಲಿ ಮೂಲವಾಗಿ ಸ್ಥಾಪಿಸಲಾಗಿದ್ದ, ಲಾಭಕರವಾದ ಕಿರುತೆರೆ ಪ್ರಸಾರಹಕ್ಕುಗಳ ವ್ಯವಹಾರದ ಲಾಭ ಪಡೆಯುತ್ತಿದ್ದ ದ ಫುಟ್ಬಾಲ್ ಲೀಗ್ನಿಂದ ಹೊರಬರಲು ಫುಟ್ಬಾಲ್ ಲೀಗ್ ಫರ್ಸ್ಟ್ ಡಿವಿಷನ್/ಪ್ರಥಮ ವಿಭಾಗದ ಕ್ಲಬ್ಗಳು ತೆಗೆದುಕೊಂಡ ನಿರ್ಧಾರದ ನಂತರ 20 ಫೆಬ್ರವರಿ 1992ರಂದು FA ಪ್ರೀಮಿಯರ್ ಲೀಗ್ ಆಗಿ ಸ್ಪರ್ಧೆಯನ್ನು ರೂಪಿಸಲಾಯಿತು. ಆಗಿನಿಂದ ಪ್ರೀಮಿಯರ್ ಲೀಗ್ ವಿಶ್ವದಲ್ಲೇ ಅತಿ ಹೆಚ್ಚು ನೋಡಲ್ಪಡುವ ಕ್ರೀಡಾ ಲೀಗ್ ಆಗಿದೆ.[1] ಇದು ವಿಶ್ವದ ಅತ್ಯಂತ ಲಾಭಕರವಾದ ಫುಟ್ಬಾಲ್ ಲೀಗ್ ಆಗಿದೆ, 2007–08ರ ಸಾಲಿನಲ್ಲಿ ಒಟ್ಟಾರೆ ಕ್ಲಬ್ಗಳ ಆದಾಯವು £1.93 ಶತಕೋಟಿ ($3.15bn)ರಷ್ಟಿತ್ತು.[2] ಲೀಗ್ಗಳು ಐರೋಪ್ಯ ಸ್ಪರ್ಧೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ತೋರಿದ ಸಾಧನೆ ಮೇರೆಗೆ ನೀಡಿದ UEFA ಗುಣಾಂಕಗಳಲ್ಲಿ ಸ್ಪೇನ್'ನ ಲಾ ಲಿಗಾ ಹಾಗೂ ಇಟಲಿ'ಯ ಸೆರೀ Aಗಳನ್ನು ಮೀರಿಸಿ ಪ್ರಥಮ ಸ್ಥಾನ ಪಡೆದಿದೆ.[3]
21 ಏಪ್ರಿಲ್ 2010ರಂದು, ಪ್ರೀಮಿಯರ್ ಲೀಗ್ ಅಂತರರಾಷ್ಟ್ರೀಯ ವ್ಯಾಪಾರ ವಿಭಾಗದಲ್ಲಿನ ಸಾಧನೆಗೆ ಕ್ವೀನ್'ಸ್ ಅವಾರ್ಡ್ ಫಾರ್ ಎಂಟರ್ಪ್ರೈಸ್/ರಾಣಿಯವರ ಉದ್ದಿಮೆಗಳ ಪ್ರಶಸ್ತಿಯನ್ನು ಘನತೆವೆತ್ತ ರಾಣಿ ಎಲಿಜಬೆತ್ IIರಿಂದ ಪಡೆಯಿತು.[4] ಪ್ರೀಮಿಯರ್ ಲೀಗ್ ಅಂತರರಾಷ್ಟ್ರೀಯ ವ್ಯವಹಾರಕ್ಕೆ ಅದು ನೀಡಿದ ಕೊಡುಗೆ ಹಾಗೂ ಆಂಗ್ಲ ಫುಟ್ಬಾಲ್ ಮತ್ತು ಯುನೈಟೆಡ್ ಕಿಂಗ್ಡಮ್'ನ ಪ್ರಸಾರೋದ್ಯಮಕ್ಕೆ ಇದು ತಂದುಕೊಡುವ ಮೌಲ್ಯಗಳಿಗಾಗಿ ಮಾನ್ಯತೆ ಪಡೆದಿದೆ.ಅಂತರರಾಷ್ಟ್ರೀಯ ವ್ಯವಹಾರ ಪ್ರಶಸ್ತಿಯು 2007ರಿಂದ 2009ರ ನಡುವಣ ಮೂರು ಸತತ 12-ತಿಂಗಳುಗಳ ಅವಧಿಗಳಲ್ಲಿ ಸಾಗರೋತ್ತರ ವರಮಾನ ಹಾಗೂ ವಾಣಿಜ್ಯ ಯಶಸ್ಸುಗಳಲ್ಲಿ ಗಮನಾರ್ಹ ಮಟ್ಟದ ಬೆಳವಣಿಗೆ ಕಂಡುದುದನ್ನು ಪರಿಗಣಿಸಿತ್ತು.
ಒಟ್ಟಾರೆಯಾಗಿ 43 ಕ್ಲಬ್ಗಳು ಪ್ರೀಮಿಯರ್ ಲೀಗ್ನಲ್ಲಿ ಸ್ಪರ್ಧಿಸಿದ್ದವಾದರೂ, ಕೇವಲ ನಾಲ್ಕು ಮಾತ್ರ ಪ್ರಶಸ್ತಿಯನ್ನು ಗೆದ್ದಿವೆ : ಆರ್ಸೆನಲ್, ಬ್ಲಾಕ್ಬರ್ನ್ ರೋವರ್ಸ್, ಚೆಲ್ಸಿಯಾ, ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್. 2008–09ರ ಕ್ರೀಡಾಋತುವಿನಲ್ಲಿ ಯಾವುದೇ ಪ್ರೀಮಿಯರ್ ಲೀಗ್ ತಂಡವು ಗೆದ್ದ ಅತಿ ಹೆಚ್ಚು ಬಾರಿಯಾದ ಹನ್ನೊಂದನೇ ಬಾರಿ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದ ಮ್ಯಾಂಚೆಸ್ಟರ್ ಯುನೈಟೆಡ್ ಪ್ರಸ್ತುತ ಚಾಂಪಿಯನ್ನರು.