ಕುರಾನು
ಇಸ್ಲಾಂ ಧರ್ಮದ ಪವಿತ್ರ ಗ್ರಂಥ / From Wikipedia, the free encyclopedia
ಕುರಾನು ಇಸ್ಲಾಂ ಧರ್ಮದ ಮೂಲಾಧಾರ ಗ್ರಂಥ, ಕುರಾನು ಎಂಬುದು ಕುರ್ ಆನ್ ಎಂಬ ಪದಗಳಿಂದಾಗಿದ್ದು ಮೂಲ ಅರಬ್ಬೀ ಶಬ್ದವಾದ ಕರಾ ಎಂದರೆ ಓದು ಎಂಬುದಕ್ಕೆ ಸಂಬಂಧಿಸಿದೆ. ಅರಬ್ಬೀ ಭಾಷೆಯಲ್ಲಿ ಇದಕ್ಕೆ ಆಲ್-ಫರ್ಕ್ವಾನ್ (ಪ್ರಸಿದ್ಧಗ್ರಂಥ), ಕಲಮುಲ್ಲಾ (ದೇವನ ನುಡಿ), ಕಿತಾಬ್ (ಪವಿತ್ರ ಗ್ರಂಥ), ನೂರ್ (ದಿವ್ಯಜ್ಯೋತಿ) ಮತ್ತು ಆಲ್ಹುದಾ (ಮಾರ್ಗದರ್ಶಕ) ಎಂಬ ಹೆಸರುಗಳಿವೆ. ಇದಕ್ಕಿರುವ ಹಲವಾರು ಹೆಸರುಗಳಲ್ಲಿ ಕೆಲವನ್ನು ಕುರಾನಿನಲ್ಲಿ ಸೂಚಿಸಿದೆ; ಮತ್ತೆ ಕೆಲವನ್ನು ಮುಸಲ್ಮಾನರು ಕೊಟ್ಟಿರುತ್ತಾರೆ. ಕುರಾನನ್ನು ಇಸ್ಲಾಂ ಧರ್ಮದ ಎಲ್ಲ ಪಂಗಡದವರೂ ಅತ್ಯಂತ ಪೂಜ್ಯಭಾವನೆಯಿಂದ ಕಾಣುತ್ತಾರೆ.