ಇಸ್ಲಾಂ ಧರ್ಮ
From Wikipedia, the free encyclopedia
ಇಸ್ಲಾಮ್ (الإسلام; [ɪsˈlaːm] ( listen), ಅನುವಾದ. ದೇವರ ಇಚ್ಛೆಗೆ ಶರಣಾಗುವುದು)[2] ಅಥವಾ ಮಹಮದೀಯ ಮತ ಅಥವಾ ಮಹಮದೀಯ ಧರ್ಮವು ಎಂಬುದು ಏಕದೇವತಾವಾದದಲ್ಲಿ ಅಧಿಷ್ಠಿತವಾದ ಐಬ್ರಹೀಮಿಕ ಧರ್ಮವಾಗಿದ್ದು, ಖುರಾನ್ ಮತ್ತು ಮುಹಮ್ಮದ್ ಪೈಗಂಬರರ ಶಿಕ್ಷಣಗಳಲ್ಲಿ ಕೇಂದ್ರೀಕೃತವಾಗಿದೆ.[3] ಇಸ್ಲಾಮ್ ಧರ್ಮದ ಅನುಯಾಯಿಗಳನ್ನು ಮುಸ್ಲಿಮರು ಅಥವಾ ಮುಸಲ್ಮಾನ (ದೇವರ ಇಚ್ಛೆಗೆ ಶರಣಾದವರು) ಅಥವಾ ಮಹಮ್ಮದೀಯ ಎಂದು ಕರೆಯಲಾಗುತ್ತದೆ.[2] ಇಸ್ಲಾಂ ಧರ್ಮವು ಜಾಗತಿಕವಾಗಿ 190 ಕೋಟಿಗಿಂತಲೂ (2020ರ ಅಂದಾಜಿನ ಪ್ರಕಾರ) ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಜಗತ್ತಿನ ಒಟ್ಟು ಜನಸಂಖ್ಯೆಯ ಕಾಲು ಭಾಗವನ್ನು (25%) ಒಳಗೊಳ್ಳುತ್ತದೆ ಮತ್ತು ಜಗತ್ತಿನ ಎರಡನೆ ಅತಿದೊಡ್ಡ ಧರ್ಮವಾಗಿದೆ.[4]
ಈ ಲೇಖನವನ್ನು ವಿಕಿಪೀಡಿಯದ ಗುಣಮಟ್ಟ ಮಾನದಂಡಗಳಿಗೆ ಸರಿಹೊಂದುವಂತೆ ಚೊಕ್ಕಗೊಳಿಸಬೇಕಿದೆ. ಇದರಲ್ಲಿನ ನಿರ್ದಿಷ್ಟ ದೋಷ ಇಂತಿದೆ: ಸೂಕ್ತ ಉಲ್ಲೇಖ ಅಗತ್ಯ. ವೈಯಕ್ತಿಕ ಅಭಿಪ್ರಾಯಗಳಂತೆ ಕಾಣುವ ವಾಕ್ಯಗಳನ್ನು ತಿದ್ದಬೇಕು. |
ಈ ಲೇಖನದ ತಟಸ್ಥ ದೃಷ್ಟಿ ಕೋನವು ವಿವಾದಾಸ್ಪದವಾಗಿದೆ. ದಯವಿಟ್ಟು ಚರ್ಚೆ ಪುಟದಲ್ಲಿಯ ಮಾತುಕತೆಯನ್ನು ನೋಡಿ. ವಿವಾದವು ಬಗೆಹರಿಯುವವರೆಗೆ ಈ ಸಂದೇಶವನ್ನು ತೆಗೆಯಬೇಡಿ. |
This article is actively undergoing a major edit for a short while. To help avoid edit conflicts, please do not edit this page while this message is displayed. This page was last revised at ೧೪:೧೫, ೮ ಏಪ್ರಿಲ್ ೨೦೨೪ (UTC) (4346581 ಸೆಕೆಂಡು ಗಳ ಹಿಂದೆ). Please remove this template if this page hasn't been edited in several hours. If you are the editor who added this template, please be sure to remove it or replace it with {{Under construction}} between editing sessions.
|
ಇಸ್ಲಾಂ ಧರ್ಮ | |
---|---|
الإسلام | |
Type | ಜಾಗತಿಕ ಧರ್ಮ |
Classification | ಅಬ್ರಹಾಮಿಕ್ ಧರ್ಮ |
Scripture | ಕುರ್ಆನ್ |
Theology | ಏಕದೇವತಾವಾದ |
Language | ಅರೇಬಿಕ್ |
Founder | ಮುಹಮ್ಮದ್ |
Origin | ಕ್ರಿ.ಶ. 7ನೇ ಶತಮಾನ |
Number of followers | 190 ಕೋಟಿ[1] ಇವರನ್ನು ಮುಸ್ಲಿಮರು ಎಂದು ಕರೆಯಲಾಗುತ್ತದೆ. |
ಇಸ್ಲಾಂ ಧರ್ಮವು ಆದಮ್, ಅಬ್ರಹಾಮ್ (ಅಥವಾ ಇಬ್ರಹೀಮ್), ಮೋಸೆ, ಯೇಸು ಮುಂತಾದ ಪೂರ್ವ ಪ್ರವಾದಿಗಳ ಮೂಲಕ ಆರಂಭಿಕ ಕಾಲದಿಂದಲೇ ಅಸ್ತಿತ್ವದಲ್ಲಿರುವ ಆದಿ ಧರ್ಮದ ಸಂಪೂರ್ಣ ಮತ್ತು ಜಾಗತಿಕ ಆವೃತ್ತಿಯೆಂದು ಮುಸ್ಲಿಮರು ನಂಬುತ್ತಾರೆ.[5] ಯಹೂದ ಧರ್ಮ ಮತ್ತು ಕ್ರೈಸ್ತ ಧರ್ಮಗಳು ಇದರ ಇತರ ಆವೃತ್ತಿಗಳಾಗಿವೆ.[6] ಮುಸಲ್ಮಾನರು ಖುರಾನನ್ನು ದೇವರ ಅಕ್ಷರಶಃ ಮಾತುಗಳು ಮತ್ತು ಯಾವುದೇ ಹಸ್ತಕ್ಷೇಪಗಳಿಗೆ ಒಳಗಾಗದೆ ಸುರಕ್ಷಿತವಾಗಿ ಸಂರಕ್ಷಿಸಲಾದ ಗ್ರಂಥವೆಂದು ನಂಬುತ್ತಾರೆ.[7] ಅದೇ ರೀತಿ ಅವರು ಮುಹಮ್ಮದ್ ಪೈಗಂಬರರನ್ನು ಇಸ್ಲಾಂ ಧರ್ಮದ ಪ್ರಮುಖ ಮತ್ತು ಅಂತಿಮ ಪ್ರವಾದಿಯೆಂದು ಪರಿಗಣಿಸುತ್ತಾರೆ.[8] ಮುಹಮ್ಮದ್ರ ಮಾತುಗಳು ಮತ್ತು ನಡವಳಿಕೆಗಳನ್ನು ಸುನ್ನತ್ ಎಂದು ಕರೆಯಲಾಗುತ್ತಿದ್ದು ಇವುಗಳನ್ನು ಹದೀಸ್ ಎಂಬ ಹೆಸರಿನಲ್ಲಿ ಜೋಪಾನವಾಗಿ ಸಂಗ್ರಹಿಸಿಡಲಾಗಿದೆ. ಕುರ್ಆನ್ ಮತ್ತು ಹದೀಸ್ಗಳು ಇಸ್ಲಾಂ ಧರ್ಮದ ಮೂಲ ಆಧಾರಗಳಾಗಿವೆ.[2]
ಅಲ್ಲಾಹನ ಹೊರತು ಬೇರೆ ದೇವರಿಲ್ಲ ಮತ್ತು ಮುಹಮ್ಮದ್ ಅಲ್ಲಾಹನ ಸಂದೇಶವಾಹಕರು ಎಂದು ಸಾಕ್ಷಿ ನುಡಿಯುವುದು, ದಿನನಿತ್ಯ ಐದು ವೇಳೆ ನಮಾಝ್ ಮಾಡುವುದು, ವಾರ್ಷಿಕವಾಗಿ ಕಡ್ಡಾಯ ದಾನ ಮಾಡುವುದು, ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸುವುದು ಮತ್ತು ಆರ್ಥಿಕ ಹಾಗೂ ದೈಹಿಕ ಸಾಮರ್ಥ್ಯವಿರುವವರು ಹಜ್ಜ್ ನಿರ್ವಹಿಸಲು ಮಕ್ಕಾಗೆ ಹೋಗುವುದು ಇಸ್ಲಾಂ ಧರ್ಮದ ಪಂಚಸ್ತಂಭಗಳಾಗಿದ್ದು ಪ್ರತಿಯೊಬ್ಬ ಮುಸಲ್ಮಾನ ಇವುಗಳನ್ನು ಕಡ್ಡಾಯವಾಗಿ ನಿರ್ವಹಿಸಬೇಕಾಗಿದೆ.[9] ಶರಿಯ ಅಥವಾ ಶರಿಯತ್ ಎಂಬ ಹೆಸರಿನಲ್ಲಿ ಪ್ರಖ್ಯಾತವಾಗಿರುವ ಇಸ್ಲಾಮಿಕ್ ಕಾನೂನು ಸಂಹಿತೆಯು ಮನುಷ್ಯನ ವೈಯುಕ್ತಿಕ, ಕೌಟುಂಬಿಕ, ಸಾಮಾಜಿಕ, ವ್ಯಾವಹಾರಿಕ, ರಾಜಕೀಯ ಮುಂತಾದ ಜೀವನದ ಎಲ್ಲಾ ಮಗ್ಗಲುಗಳನ್ನು ಸ್ಪರ್ಶಿಸುತ್ತದೆ.[10] ಈದುಲ್ ಫಿತರ್ (ರಂಜಾನ್) ಮತ್ತು ಈದುಲ್ ಅದ್ಹಾ (ಬಕ್ರೀದ್) ಇಸ್ಲಾಂ ಧರ್ಮದ ಎರಡು ಪ್ರಮುಖ ಹಬ್ಬಗಳಾಗಿವೆ. ಮಕ್ಕಾದಲ್ಲಿರುವ ಮಸ್ಜಿದುಲ್ ಹರಾಮ್, ಮದೀನದಲ್ಲಿರುವ ಮಸ್ಜಿದ್ ನಬವಿ ಮತ್ತು ಜೆರೂಸಲೇಂನಲ್ಲಿರುವ ಮಸ್ಜಿದ್ ಅಕ್ಸಾ ಇಸ್ಲಾಂ ಧರ್ಮದ ಪ್ರಮುಖ ಧಾರ್ಮಿಕ ಸ್ಥಳಗಳಾಗಿವೆ.