ಟೂಲ್ (ವಾದ್ಯತಂಡ)
From Wikipedia, the free encyclopedia
ಟೂಲ್ ಎಂಬುದು, 1990ರಲ್ಲಿ ರಚನೆಯಾದ, ಅಮೆರಿಕಾ ಸಂಯುಕ್ತ ಸಂಸ್ಥಾನದ ಕ್ಯಾಲಿಫೊರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ಮೂಲದ ರಾಕ್ ಶೈಲಿ ಸಂಗೀತ ವಾದ್ಯತಂಡ. ಆರಂಭದಿಂದಲೂ ತಂಡದ ಸದಸ್ಯರ ಪಟ್ಟಿಯಲ್ಲಿ ಡ್ರಮ್ ವಾದಕ ಡ್ಯಾನಿ ಕ್ಯಾರಿ, ಗಿಟಾರ್ ವಾದಕ ಆಡಮ್ ಜೋನ್ಸ್ ಹಾಗೂ ಗಾಯಕ ಮೇಯ್ನಾರ್ಡ್ ಜೇಮ್ಸ್ ಕೀನನ್ ಸೇರಿದ್ದಾರೆ. ಇಸವಿ 1995ರಲ್ಲಿ, ಮೂಲ ಬಾಸ್ ಗಿಟಾರ್ ವಾದಕ ಪಾಲ್ ಡಿ'ಆಮೊರ್ರ ಸ್ಥಾನದಲ್ಲಿ ಸೇರಿದ ಜಸ್ಟಿನ್ ಛಾನ್ಸೆಲರ್ ಇಂದಿಗೂ ಸಹ ಬಾಸ್ ಗಿಟಾರ್ ವಾದಕರಾಗಿದ್ದಾರೆ. ಟೂಲ್ ವಾದ್ಯತಂಡವು ಮೂರು ಗ್ರ್ಯಾಮಿ ಪ್ರಶಸ್ತಿಗಳು ಗೆದ್ದಿರುವುದಲ್ಲದೇ, ವಿಶ್ವದಾದ್ಯಂತ ಪ್ರವಾಸ ಪ್ರದರ್ಶನಗಳನ್ನು ನಡೆಸಿದೆ. ಹಲವು ದೇಶಗಳಲ್ಲಿ ಸಂಗೀತ ಪಟ್ಟಿಗಳಲ್ಲಿ ಅಗ್ರಸ್ಥಾನ ಗಿಟ್ಟಿಸಿದ ಆಲ್ಬಮ್ಗಳನ್ನು ಸಹ ರಚಿಸಿದೆ.
Tool | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | Los Angeles, California |
ಸಂಗೀತ ಶೈಲಿ | Alternative metal, art rock, progressive metal, progressive rock |
ಸಕ್ರಿಯ ವರ್ಷಗಳು | 1990-present |
Labels | Tool Dissectional, Volcano, Zoo |
Associated acts | A Perfect Circle, Green Jellÿ, Puscifer, ZAUM, King Crimson |
ಅಧೀಕೃತ ಜಾಲತಾಣ | www.toolband.com |
ಸಧ್ಯದ ಸದಸ್ಯರು | Danny Carey Justin Chancellor Maynard James Keenan Adam Jones |
ಮಾಜಿ ಸದಸ್ಯರು | Paul D'Amour |
ಇಸವಿ 1993ರಲ್ಲಿ ಬಿಡುಗಡೆಗೊಳಿಸಿದ ತನ್ನ ಮೊದಲ ಸ್ಟುಡಿಯೊ ಆಲ್ಬಮ್ ಅಂಡರ್ಟೋ ನಲ್ಲಿ ಟೂಲ್ ಹೆವಿ ಮೆಟಲ್ ಶೈಲಿಯ ಸಂಗೀತ ಬಳಸಿತು. ಇಸವಿ 1996ರಲ್ಲಿ ಬಿಡುಗಡೆಗೊಳಿಸಿದ ಎನಿಮಾ ದೊಂದಿಗೆ ತಂಡವು ಪರ್ಯಾಯ ಮೆಟಲ್ ಶೈಲಿ ಸಂಗೀತ ಅಭಿಯಾನದಲ್ಲಿ ಪ್ರಾಬಲ್ಯ ಮೆರೆಯಿತು. ಸಂಗೀತದಲ್ಲಿ ಪ್ರಯೋಗಗಳು, ದೃಶ್ಯ ಕಲೆಗಳು ಹಾಗೂ ವೈಯಕ್ತಿಕ ವಿಕಾಸದ ಸಂದೇಶಗಳನ್ನು ಒಗ್ಗೂಡಿಸುವ ತಂಡದ ಯತ್ನಗಳು,ಲ್ಯಾಟೆರಲಸ್ (2001 ) ಆಲ್ಬಮ್ನೊಂದಿಗೆ ಮುಂದುವರೆದವು.ಇತ್ತೀಚೆಗೆ ಬಿಡುಗಡೆಯಾದ10,000 ಡೇಸ್ (2006 ) ಮೂಲಕ ವಾದ್ಯತಂಡಕ್ಕೆ ವಿಶ್ವದಾದ್ಯಂತ ವಿಮರ್ಶಾತ್ಮಕ ಪ್ರಶಂಸೆ ಹಾಗೂ ಯಶಸ್ಸು ಸಂಪಾದಿಸಿಕೊಟ್ಟಿತು.
ಟೂಲ್ ವಾದ್ಯತಂಡವು ದೃಶ್ಯಕಲೆಗಳನ್ನು ಸಂಯೋಜಿಸಿದ್ದರಿಂದ ಹಾಗೂ ತುಲನಾತ್ಮಕವಾಗಿ ದೀರ್ಘಾವಧಿ ಹಾಗೂ ಸಂಕೀರ್ಣವಾದ ಅಲ್ಬಮ್ಗಳನ್ನು ಬಿಡುಗಡೆಗೊಳಿಸಿದ್ದರಿಂದ, ಈ ವಾದ್ಯತಂಡವನ್ನು ಸಾಮಾನ್ಯವಾಗಿ ಶೈಲಿಯ ಚೌಕಟ್ಟನ್ನು ಮೀರಿದ ಸಂಗೀತ ತಂಡ, ಹಾಗೂ, ಆಧುನಿಕ ರಾಕ್ ಶೈಲಿಯ ಸಂಗೀತ ಮತ್ತು ಕಲಾತ್ಮಕ ರಾಕ್ ಶೈಲಿಯ ಸಂಗೀತದ ಅಂಗ ಎಂದು ಬಣ್ಣಿಸಲಾಗಿದೆ. ಈ ವಾದ್ಯತಂಡ ಹಾಗೂ ಇಂದಿನ ಸಂಗೀತ ಉದ್ದಿಮೆಯ ನಡುವಣ ಸಂಬಂಧವು ಅನಿಶ್ಚಯವಾಗಿತ್ತು. ಸೆನ್ಸಾರ್ಶಿಪ್ ಆಗಿದ್ದ ಸಂದರ್ಭದಲ್ಲಿ ಹಾಗೂ ಟೂಲ್ ಸದಸ್ಯರು ತಮಗೆ ಏಕಾಂತತೆ ಬೇಕು ಎಂದು ಒತ್ತಾಯಿಸಿದಾಗ ಹೀಗಾಗಿತ್ತು.