ಕ್ಯಾಲಿಫೊರ್ನಿಯ
From Wikipedia, the free encyclopedia
ಕ್ಯಾಲಿಫೊರ್ನಿಯ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿನ ಅತ್ಯಂತ ಜನನಿಬಿಡ ರಾಜ್ಯ, ಮತ್ತು ವಿಸ್ತೀರ್ಣದಲ್ಲಿ ಮೂರನೆಯ ಅತಿ ದೊಡ್ಡ ರಾಜ್ಯವಾಗಿದೆ. ಇದು ಶಾಂತ ಮಹಾಸಾಗರದ ಪಕ್ಕದಲ್ಲಿ ಅಮೇರಿಕ ದೇಶದ ಪಶ್ಚಿಮ ಕರಾವಳಿಯಲ್ಲಿ ಸ್ಥಿತವಾಗಿದೆ. ಇದರ ಉತ್ತರದಲ್ಲಿ ಆರೆಗಾನ್, ಪೂರ್ವದಲ್ಲಿ ನವಾಡ, ದಕ್ಷಿಣಪೂರ್ವದಲ್ಲಿ ಆರಿಜೋನ, ದಕ್ಷಿಣದಲ್ಲಿ ಮೆಕ್ಸಿಕೋದ ರಾಜ್ಯವಾದ ಬಾಹಾ ಕ್ಯಾಲಿಫೊರ್ನಿಯವನ್ನು ಗಡಿಯಾಗಿ ಹೊಂದಿದೆ. ಲಾಸ್ ಏಂಜಲೆಸ್, ಸ್ಯಾನ್ ಡಿಯೇಗೊ, ಸ್ಯಾನ್ ಹೋಸೆ, ಮತ್ತು ಸ್ಯಾನ್ ಫ್ರಾನ್ಸಿಸ್ಕೊ ಇದರ ನಾಲ್ಕು ಅತಿ ದೊಡ್ಡ ನಗರಗಳು.
ಸ್ಟೇಟ್ ಆಫ್ ಕ್ಯಾಲಿಫೊರ್ನಿಯ | |||||||||||
| |||||||||||
ಅಧಿಕೃತ ಭಾಷೆ(ಗಳು) | English | ||||||||||
ರಾಜಧಾನಿ | ಸ್ಯಾಕ್ರಮೆಂಟೊ | ||||||||||
ಅತಿ ದೊಡ್ಡ ನಗರ | ಲಾಸ್ ಏಂಜಲೆಸ್ | ||||||||||
ವಿಸ್ತಾರ | Ranked 3rd in the US | ||||||||||
- ಒಟ್ಟು | 163,696 sq mi (423,970 km²) | ||||||||||
- ಅಗಲ | 250 miles (400 km) | ||||||||||
- ಉದ್ದ | 770 miles (1,240 km) | ||||||||||
- % ನೀರು | 4.7 | ||||||||||
- Latitude | 32° 32′ N to 42° N | ||||||||||
- Longitude | 114° 8′ W to 124° 26′ W | ||||||||||
ಜನಸಂಖ್ಯೆ | 1stನೆಯ ಅತಿ ಹೆಚ್ಚು | ||||||||||
- ಒಟ್ಟು | 36,756,666 (2008 est.)[2] 33,871,648 (2000) | ||||||||||
- ಜನಸಂಖ್ಯಾ ಸಾಂದ್ರತೆ | 234.4/sq mi (90.49/km²) 11thನೆಯ ಸ್ಥಾನ | ||||||||||
- Median income | US$54,385 (11th) | ||||||||||
ಎತ್ತರ | |||||||||||
- ಅತಿ ಎತ್ತರದ ಭಾಗ | Mount Whitney[3] 14,505 ft (4,421 m) | ||||||||||
- ಸರಾಸರಿ | 2,900 ft (884 m) | ||||||||||
- ಅತಿ ಕೆಳಗಿನ ಭಾಗ | Death Valley[3] -282 ft (-86 m) | ||||||||||
ಸಂಸ್ಥಾನವನ್ನು ಸೇರಿದ್ದು | September 9, 1850 (31st) | ||||||||||
Governor | Gavin Newsom (D) | ||||||||||
Lieutenant Governor | Eleni Kounalakis (D) | ||||||||||
U.S. Senators | Dianne Feinstein (D) Alex Padilla (D) | ||||||||||
Congressional Delegation | 34 Democrats, 19 Republicans (list) | ||||||||||
Time zone | Pacific: UTC-8/-7 | ||||||||||
Abbreviations | CA Calif. US-CA | ||||||||||
Website | ca.gov | ||||||||||
ಕ್ಯಾಲಿಫೋರ್ನಿಯವು ಅಮೆರಿಕ ಸಂಯುಕ್ತಸಂಸ್ಥಾನದ ನೈಋತ್ಯ ಭಾಗದಲ್ಲಿ, ಪೆಸಿಫಿಕ್ ಸಾಗರ ತೀರದಲ್ಲಿದೆ.
`ಚಿನ್ನದ ರಾಜ್ಯವೆಂದು ಇದಕ್ಕೆ ಅಡ್ಡ ಹೆಸರುಂಟು. ಆರಂಭದಲ್ಲಿ ಏಕಪ್ರಕಾರವಾಗಿ ಇಲ್ಲಿ ಚಿನ್ನ ಸಿಕ್ಕುತ್ತಿದ್ದುದೇ ಈ ಹೆಸರಿಗೆ ಕಾರಣ. ಉತ್ತರದಲ್ಲಿ ಅರೆಗನ್, ಪೂರ್ವದಲ್ಲಿ ನೆವಾಡ ಮತ್ತು ಆರಿಜೋóನ, ದಕ್ಷಿಣದಲ್ಲಿ ಮೆಕ್ಸಿಕೋದ ಕೆಳ ಕ್ಯಾಲಿಫೋರ್ನಿಯ ಪ್ರದೇಶ, ಪಶ್ಚಿಮಕ್ಕೆ ಪೆಸಿಫಿಕ್ ಸಾಗರ-ಇವು ಇದರ ಮೇರೆಗಳು. ಉ.ಅ.32030'-420 ಮತ್ತು ಪ.ರೇ.1140-124029' ನಡುವೆ ಹಬ್ಬಿರುವ ಈ ರಾಜ್ಯದ ವಿಸ್ತೀರ್ಣ, 2,120 ಚ.ಮೈ. ಜಲಪ್ರದೇಶವೂ ಸೇರಿ, 1,58,693 ಚ.ಮೈ. ಇದು ವಿಸ್ತೀರ್ಣದಲ್ಲಿ ಅಮೆರಿಕ ಸಂಯುಕ್ತಸಂಸ್ಥಾನದ ಮೂರನೆಯ ರಾಜ್ಯ, ಇದಕ್ಕೆ 1,264 ಮೈ. ಉದ್ದದ ಕರಾವಳಿ ಇದೆ.