ಪಿರಮಿಡ್
ರಚನೆಯು ಆಕಾರವು ಜ್ಯಾಮಿತೀಯ ಅರ್ಥದಲ್ಲಿ ಪಿರಮಿಡ್ನ ಸರಿಸುಮಾರಾಗಿರುತ್ತದೆ / From Wikipedia, the free encyclopedia
Lua error in package.lua at line 80: module 'Module:Pagetype/setindex' not found.
ಈ ಲೇಖನದಲ್ಲಿಪರಿಶೀಲನೆಗಾಗಿ ಹೆಚ್ಚಿನ ಉಲ್ಲೇಖಗಳ ಅಗತ್ಯವಿದೆ. (August 2006) |
ಪಿರಮಿಡ್ (ಗ್ರೀಕ್ ಭಾಷೆಯಲ್ಲಿ "πυραμίς" - ಪಿರಾಮಿಸ್ [1]) ಒಂದು ಕಟ್ಟಡವಾಗಿದ್ದು, ಹೊರಗಿನ ಮೇಲ್ಭಾಗ ತ್ರಿಕೋನಾಕಾರ ಹೊಂದಿದ್ದು,ಒಂದು ಸ್ಥಳದಲ್ಲಿ ಸೇರಲ್ಪಡುತ್ತದೆ. ಪಿರಮಿಡ್ಡಿನ ತಳಭಾಗವು ತ್ರಿಕೋಣ ಪಾರ್ಶ್ವವನ್ನು, ಚತುಷ್ಟ ಪಾರ್ಶ್ವವನ್ನು, ಅಥವಾ ಯಾವುದಾದರೂ ಬಹುಭುಜಾಕೃತಿ ಆಕಾರ ಹೊಂದಿದ್ದು, ಪಿರಮಿಡ್ಡು ಅಂದರೆ ; ಕಡೆ ಪಕ್ಷ ಮೂರು ಹೊರಗಿನ ಪಾರ್ಶ್ವವನ್ನು , (ಕಡೆ ಪಕ್ಷ ನಾಲ್ಕು ಮುಖ/ಪಾರ್ಶ್ವ ಗಳು ,ತಳಪಾಯವೂ ಸೇರಿದಂತೆ ). ಚೌಕಾಕಾರದ ಪಿರಮಿಡ್ದು,ಚೌಕಾಕಾರದ ತಳವನ್ನು ಹೊಂದಿದ್ದು,ತ್ರಿಕೋನಾಕಾರದ ಹೊರಗಿನ ಮೇಲ್ಭಾಗವನ್ನು ಹೊಂದಿರುವುದು ಸಾಮಾನ್ಯ ವಿಷಯವಾಗಿದೆ.
ಪಿರಮಿಡ್ಡಿನ ಮುಖ್ಯ ರೂಪ ಮತ್ತು ಅದರ ಬಹಳಷ್ಟು ತೂಕ ನೆಲದ ಕಡೆಗೆ ಕೇಂದ್ರೀಕರಿಸಿದೆ/ಹತ್ತಿರವಾಗಿದೆ ,[2] ಅಂದರೆ ಕಡಿಮೆಯ ವಸ್ತುಗಳು ಪಿರಮಿಡ್ಡಿನ ಎತ್ತರದಲ್ಲಿ ,ಮೇಲಿನಿಂದ ಕೆಳಭಾಗಕ್ಕೆ ತಳ್ಳಲ್ಪಡುತ್ತವೆ : ಈ ರೀತಿಯಾಗಿ ತೂಕದ ಸಮಾನಾಂತರ ಬಿಡುಗಡೆಯು,'ಪ್ರಾಚೀನ ನಾಗರೀಕತೆಯ',ಒಂದು ಶಾಶ್ವತವಾದ ಸ್ಮರಣ ಕಟ್ಟಡಗಳನ್ನು ಸೃಷ್ಟಿಸಲು ಸಕಾರಿಯಾಯಿತು.
ಸಾವಿರಾರು ವರ್ಷಗಳ ಕಾಲದಲ್ಲಿ , ಭೂಮಿ ಯ ಮೇಲೆ ಪಿರಮಿಡ್ದುಗಳು ದೊಡ್ಡ ಕಟ್ಟಡಗಳಾಗಿ ಇದ್ದವು : ಮೊದಲು ಕೆಂಪು ಪಿರಮಿಡ್ಡು, ದಶುರ್ ನೆಕ್ರೋಪೋಲಿಸ್ ನಲ್ಲಿದ್ದು, ನಂತರ ಖುಫು ನ ದೊಡ್ಡ ಪಿರಮಿಡ್ಡು, ಈ ಎರಡೂ 'ಈಜಿಪ್ಟ್ ' ದೇಶದಲ್ಲಿವೆ. ಅದರಲ್ಲಿ ಎರಡನೆಯ 'ಕುಫ್ತು' ಪಿರಮಿಡ್ ಒಂದೇ ಪ್ರಾಚೀನ ಪ್ರಪಂಚದ ಏಳು ಅದ್ಭುತ ಗಳಲ್ಲಿ ಇಂದಿಗೂ ಉಳಿದುಕೊಂಡಿದೆ. ಇಂದಿಗೂ ಅದು ಎತ್ತರದ ಪಿರಮಿಡ್ ಆಗಿದೆ. ಪ್ರಪಂಚದಲ್ಲಿಯೇ ಎತ್ತರದ ಪಿರಮಿಡ್ ಅನ್ನು ಈವರೆವಿಗೂ ನಿರ್ಮಾಣ ಮಾಡದೆ ಇದ್ದು, ದೊಡ್ಡ ಚೋಲುಲ ಪಿರಮಿಡ್ ಹೆಚ್ಚಿನ ತನ್ನ ಗಾತ್ರ /ವಿಸ್ತಾರ ಕ್ಕೆ ಹೆಸರುವಾಸಿಯಾಗಿದೆ.ಇದು ಮೆಕ್ಸಿಕನ್ ರಾಜ್ಯದ ಪ್ಯುಬ್ಲ ದಲ್ಲಿ ಇದೆ. ಈ ಪಿರಮಿಡ್ ಅನ್ನು ಇನ್ನೂ ಸಂಶೋಧಿಸಲಾಗುತ್ತಿದೆ