ಔರಂಗಜೇಬ್
From Wikipedia, the free encyclopedia
ಔರಂಗಜೇಬ್(3 ನವೆಂಬರ್ 1618 – 3 ಮಾರ್ಚ್ 1707),[1] ಭಾರತದ ಆರನೆಯ ಮೊಘಲ್ ಚಕ್ರವರ್ತಿ. ಷಹಜಹಾನನ (ನೋಡಿ- ಷಾಜಹಾನ್) ಮೂರನೆಯ ಮಗ. ಇವನು ೧೬೫೯ರಿಂದ ೧೭೦೭ ರವರೆಗೆ ೪೯ ವರ್ಷಗಳ ಕಾಲ ಆಳ್ವಿಕೆ ಮಾಡಿದನು. ಇವನು ಒಬ್ಬ ವಿಸ್ತರಣಾವಾದಿಯಾಗಿದ್ದು ಇವನ ಕಾಲದಲ್ಲಿ ಮೊಘಲ ಸಾಮ್ರಾಜ್ಯವು ತನ್ನ ಅತ್ಯಂತ ವಿಸ್ತಾರವಾಗಿತ್ತು.ಇವನು ಒಬ್ಬ ಕಟ್ಟಾ ಮುಸ್ಲಿಮನಾಗಿದ್ದನು. ಅಕ್ಬರನ ಕಾಲದಲ್ಲಿದ್ದ ಜಾತ್ಯಾತೀತ ತತ್ವಗಳನ್ನು ಬದಿಗೆ ತಳ್ಳಿದ್ದನು.ಇವನ ಆಡಳಿತದಲ್ಲಿ ಧರ್ಮ ಅಸಹಿಷ್ಣುತೆಯು ತಾಂಡವವಾಡುತ್ತಿತ್ತು. ಇವನು ಒಬ್ಬ ಉತ್ತಮ ಆಡಳಿತಗಾರನಾಗಿದ್ದು ಇವನ ಕಾಲದಲ್ಲಿ ಮೊಘಲ್ ಸಾಮ್ರಾಜ್ಯವು ತನ್ನ ಉಚ್ಚ್ರಾಯ ಸ್ಥಿತಿಯನ್ನು ಮುಟ್ಟಿತ್ತು. ಇವನ ನಿಧನಾನಂತರ ಮೊಘಲ್ ಸಂತತಿ ವೇಗವಾಗಿ ತನ್ನ ಅವನತಿಯನ್ನು ಕಂಡಿತು.
Quick Facts ಔರಂಗಜೇಬ್, ಆಳ್ವಿಕೆ ...
ಔರಂಗಜೇಬ್ | |
---|---|
ಮಯೂರ ಸಿಂಹಾಸನದಲ್ಲಿ ಆಸೀನನಾಗಿರುವ ಔರಂಗಜೇಬ್. | |
ಆರನೆಯ ಮೋಘಲ್ ಸಾಮ್ರಾಟ | |
ಆಳ್ವಿಕೆ | ೩೧ ಜುಲೈ ೧೬೫೮ – ೩ ಮಾರ್ಚ್ ೧೭೦೭ |
ಪಟ್ಟಾಭಿಷೇಕ | ೧೫ ಜೂನ್ ೧೬೫೯ at ಕೆಂಪು ಕೋಟೆ, ದೆಹಲಿ |
ಪೂರ್ವಾಧಿಕಾರಿ | ಷಹ ಜಹಾನ್ |
ಉತ್ತರಾಧಿಕಾರಿ | ಮುಹಮ್ಮದ್ ಅಝಮ್ ಷಾ |
ಪತ್ನಿಯರು | ದಿಲ್ರಾಸ್ ಬಾನು ಬೇಗಮ್ ನವಾಬ್ ಬಾಯಿ ಔರಂಗಾಬಾದಿ ಮಹಲ್ ಉದಯ್ಪುರಿ ಮಹಲ್ ಜೈನಾಬಾದಿ ಮಹಲ್ ದೌಲತಾಬಾದಿ ಮಹಲ್ |
ಸಂತಾನ | |
ಜೆಬ್-ಉನ್-ನ್ನೀಸಾ ಝೀನತ್ ಉನ್ನೀಸಾ ಮುಹಮ್ಮದ್ ಅಜ಼ಮ್ ಷಾ ಮೆಹರುನ್ನೀಸಾ ಸುಲ್ತಾನ್ ಮುಹಮ್ಮದ್ ಅಕ್ಬರ್ ಮುಹಮ್ಮದ್ ಸುಲ್ತಾನ್ ಬಹದೂರ್ ಷಾ- I ಬದ್ರುನ್ನೀಸಾ ಜುಬಾದತ್ ಉನ್ನೀಸಾ ಮುಹಮ್ಮದ್ ಕಮ್ ಬಕ್ಷ್ | |
ಪೂರ್ಣ ಹೆಸರು | |
ಅಬುಲ್ ಮುಜಾಫರ್ ಮುಹಿ-ಉದ್-ದಿನ್ ಮೊಹಮ್ಮದ್ ಔರಂಗಜೇಬ್ | |
ಮನೆತನ | ತಿಮುರಿಡ್ |
ತಂದೆ | ಷಹ ಜಹಾನ್ |
ತಾಯಿ | ಮುಮ್ತಾಜ್ ಮಹಲ್ |
ಜನನ | (೧೬೧೮-೧೧-೦೪)೪ ನವೆಂಬರ್ ೧೬೧೮ (N.S.) ದಾಹೋಡ್, ಮೊಘಲ್ ಸಾಮ್ರಾಜ್ಯ |
ಮರಣ | 3 March 1707(1707-03-03) (aged 88) ಅಹಮದ್ ನಗರ, ಭಾರತ |
Burial | ಖುಲ್ಡಾಬಾದ್ |
ಧರ್ಮ | ಇಸ್ಲಾಂ |
Close