ದೊಡ್ಡಬಸಪ್ಪ ದೇವಾಲಯ
From Wikipedia, the free encyclopedia
ದೊಡ್ಡಬಸಪ್ಪ ದೇವಸ್ಥಾನ ೧೧-೧೨ನೇ ಶತಮಾನದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದಲ್ಲಿ ಕಟ್ಟಲ್ಪಟ್ಟ, ಶಿವನಿಗೆ ಸಮರ್ಪಿತವಾದ ಒಂದು ದೇಗುಲ. ಪಶ್ಚಿಮ ಚಾಲುಕ್ಯ ವಾಸ್ತುಶಿಲ್ಪ ಶೈಲಿಯಲ್ಲಿ ಕಟ್ಟಲ್ಪಟ್ಟಿರುವ ಈ ಮಂದಿರ, ಗದಗ ಜಿಲ್ಲೆಯ, ಮುಂಡರಗಿ ತಾಲೂಕಿನ ಡಂಬಳ ಎಂಬ ಹಳ್ಳಿಯಲ್ಲಿದೆ. ಶಿವ ದೇವಾಲಯಕ್ಕೆ ಮುಖಮಾಡಿ ಕುಳಿತಿರುವ ಬೃಹತ್ ನಂದಿಯ ವಿಗ್ರಹದ ಕಾರಣದಿಂದಾಗಿ ಈ ಮಂದಿರಕ್ಕೆ ದೊಡ್ಡಬಸಪ್ಪ ದೇವಾಲಯ ಎಂದು ಹೆಸರು ಬಂದಿದೆ[1]