ಪಂಜಾಬಿ ಭಾಷೆ
From Wikipedia, the free encyclopedia
ಪಂಜಾಬಿ[ಟಿಪ್ಪಣಿ 1] ಒಂದು ಇಂಡೋ ಆರ್ಯ ಭಾಷೆ ಮತ್ತು ಇದನ್ನು ಜಗತ್ತಿನಾದ್ಯಂತ ಸುಮಾರು ೧೦ ಕೋಟಿ ಜನರು ಮಾತನಾಡುತ್ತಾರೆ. ಇದು ಅತಿ ಹೆಚ್ಚು ಭಾಷಿಗರ ಪಟ್ಟಿಯಲ್ಲಿ ೧೦ನೇ ಸ್ಥಾನದಲ್ಲಿದೆ.[2][3] ಐತಿಹಾಸಿಕ ಪಾಕಿಸ್ತಾನ ಮತ್ತು ಭಾರತಗಳ ಪಂಜಾಬ್ ಪ್ರದೇಶದ ಸ್ಥಳೀಯರು ಮಾತನಾಡುವ ಭಾಷೆ.
Quick Facts ಪಂಜಾಬಿ Pañjābī, ಅಧಿಕೃತ ಸ್ಥಾನಮಾನ ...
ಪಂಜಾಬಿ Pañjābī | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಪಾಕಿಸ್ತಾನ,ಭಾರತ | |
ಪ್ರದೇಶ: | ಪಶ್ಚಿಮ ಪಂಜಾಬ್, ಪೂರ್ವ ಪಂಜಾಬ್ | |
ಒಟ್ಟು ಮಾತನಾಡುವವರು: |
೧೦೦ ಮಿಲಿಯ | |
ಭಾಷಾ ಕುಟುಂಬ: | ಇಂಡೋ -ಇರಾನಿಯನ್ ಇಂಡೋ -ಆರ್ಯನ್ Central[1] ಪಂಜಾಬಿ | |
ಬರವಣಿಗೆ: | ಗುರುಮುಖಿ (ಬ್ರಾಹ್ಮೀ) ಷಾಮುಖಿ ಅಕ್ಷರಮಾಲೆ (ಪೆರ್ಸೋ-ಅರೇಬಿಕ್) Punjabi Braille | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಭಾರತ (ಭಾರತದ ರಾಜ್ಯಗಳಾದ ಪಂಜಾಬ್, ಚಂಡೀಗಢ, ಹರ್ಯಾನ, and ಹಿಮಾಚಲ ಪ್ರದೇಶ, ದ್ವಿತೀಯ ಅಧಿಕೃತ ಭಾಷೆಯಾಗಿ ದೆಹಲಿ, ಜಮ್ಮು ಮತ್ತು ಕಾಶ್ಮೀರ,ಮತ್ತು ಪಶ್ಚಿಮ ಬಂಗಾಳ) ಪಾಕಿಸ್ತಾನ (ಪಾಕಿಸ್ತಾನದ ಪ್ರದೇಶಗಳಾದ ಪಂಜಾಬ್, ಅಜಾದ್ ಕಾಶ್ಮೀರ,ಮತ್ತು ಇಸ್ಲಾಮಾಬಾದ್ ರಾಜಧಾನಿ ಪ್ರದೇಶ) ಸೌಥಾಲ್ (ಇಂಗ್ಲೆಂಡ್) | |
ನಿಯಂತ್ರಿಸುವ ಪ್ರಾಧಿಕಾರ: |
||
ಭಾಷೆಯ ಸಂಕೇತಗಳು | ||
ISO 639-1: | pa | |
ISO 639-2: | pan | |
ISO/FDIS 639-3: | — | |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
Close
ಪಾಕಿಸ್ತಾನದಲ್ಲಿ ಪಂಜಾಬಿ ಅತಿ ಹೆಚ್ಚು ಜನರು ಮಾತನಾಡುವ ಭಾಷೆ,[4] ಭಾರತದಲ್ಲಿ ಇದರ ಭಾಷಿಗರ ಸಂಖ್ಯೆಯಲ್ಲಿನ ಸ್ಥಾನ ೧೧.[5] ಇದು ಭಾರತೀಯ ಉಪಖಂಡದಲ್ಲಿನ ಮೂರನೆಯ ಅತಿ ಹೆಚ್ಚು ಜನರು ಮಾತನಾಡುವ ಭಾಷೆ. ಯುನೈಡ್ ಕಿಂಗ್ಡಮ್ನಲ್ಲಿ ೪ನೆಯ ಅತಿಹೆಚ್ಚು ಜನರು ಮಾತನಾಡುವ ಭಾಷೆಯಾದರೆ[6] ಕೆನಡದಲ್ಲಿನ ಅದರ ಸ್ಥಾನ ಮೂರನೆಯದು (ಇಂಗ್ಲೀಶ್ ಮತ್ತು ಪ್ರೆಂಚ್ ನಂತರದ ಸ್ಥಾನ).[7][8] ಇದನ್ನು ಯುನೈಟೆಡ್ ಅರಬ್ ಎಮಿರೇಟ್ಸ್, ಅಮೆರಿಕ ಸಂಯುಕ್ತ ಸಂಸ್ಥಾನ, ಸೌದಿ ಅರೇಬಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಗಣನೀಯ ಸಂಖ್ಯೆಯ ಜನರು ಮಾತನಾಡುತ್ತಾರೆ.