ಬಂಡವಾಳಶಾಹಿ
From Wikipedia, the free encyclopedia
ಬಂಡವಾಳಶಾಹಿ ಯು ಕೇವಲ"ಮಾರುಕಟ್ಟೆಗಳೊಂದಿಗೆ ಸಂಬಂಧಿಸಿದ ಆರ್ಥಿಕ ಪದ್ಧತಿಯಾಗಿರದೆ, ಮಾರುಕಟ್ಟೆಯ ಆಗುಹೋಗುಗಳನ್ನು ನೋಡಿಕೊಳ್ಳುವ ಆಡಳಿತ ವ್ಯವಸ್ಥೆಯೂ ಆಗಿದೆ."[1] ಬಂಡವಾಳಶಾಹಿಯು ಮೂರು ಶ್ರೇಣಿಯ ಅಡಳಿತ ವ್ಯವಸ್ಥೆಗೆ ಪರೋಕ್ಷವಾಗಿ ನೆರವಾಗುತ್ತದೆ. ಆರ್ಥಿಕ ವಲಯದ ಸುಧಾರಣೆಗಾಗಿ ಬಂಡವಾಳದ ಅಗತ್ಯ ಪೂರೈಸುವುದು ಹಾಗೂ ಮೂಲಭೂತ ಸೌಲಭ್ಯಗಳನ್ನು ಸ್ಫರ್ಧಾತ್ಮಕವಾಗಿ ಬಳಸಿಕೊಂಡು ಉದ್ಯೋಗವಕಾಶ ಮತ್ತು ಇತರೆ ಅನುಕೂಲಗಳನ್ನು ಕಾನೂನಿನ ಚೌಕಟ್ಟಿನಲ್ಲಿ ನಡೆಸಿಕೊಂಡು ಹೋಗುವುದೇ ಬಂಡವಾಳಶಾಹಿಯ ವ್ಯಾಖ್ಯಾನವಾಗಿದೆ.ಇದನ್ನು ರಾಜ್ಯ ಕಾನೂನು ಅಧಿಕಾರಗಳು ಹಾಗೂ ನಿಯಂತ್ರಕ ಏಜೆನ್ಸಿಗಳು ಜಾರಿಗೊಳಿಸುತ್ತವೆ.[2]
ಇದು ಆರ್ಥಿಕ ಮತ್ತು ಸಾಮಾಜಿಕ ಪದ್ದತಿಗಳ ಆಚರಣೆಯಾಗಿದೆ. ಇದರಲ್ಲಿ ಬಂಡವಾಳ,ಅಶ್ರಮಿಕ ಉತ್ಪಾದನಾ ಸಂಗತಿಗಳು ಅಡಗಿರುತ್ತವೆ.(ಅಲ್ಲದೇ ಉತ್ಪಾದನಾ ವಿಧಾನಗಳು ಮತ್ತು ಖಾಸಗಿಯಾಗಿ ನಿಯಂತ್ರಿತ[ಸೂಕ್ತ ಉಲ್ಲೇಖನ ಬೇಕು] ಕಾರ್ಮಿಕರು,ಕಚ್ಚಾ ವಸ್ತುಗಳು ಹಾಗೂ ಬಂಡವಾಳಗಳ ವಹಿವಾಟುಗಳಲ್ಲಿ ಮಾರುಕಟ್ಟೆ ಯಿಂದ ಕೈಗಾರಿಕೆಗಳ ಮೂಲಕ ಬಳಸಲ್ಪಡುತ್ತವೆ. ಇದರಿಂದ ಬರುವ ಲಾಭಾಂಶವನ್ನು ತಂತ್ರಜ್ಞಾನದಲ್ಲಿ ಹೂಡಿಕೆದಾರರಿಗೆ ಹಾಗೂ ಬಂಡವಾಳದಾರರಿಗೆ ಮತ್ತು ಉದ್ಯಮಗಳಿಗೆ ಹಂಚಲಾಗುತ್ತದೆ.
ಬಂಡವಾಳ ಶಾಹಿ ವ್ಯಾಖ್ಯದ ಬಗ್ಗೆ ಇನ್ನೂ ಯಾವದೇ ಒಮ್ಮತವಿಲ್ಲ ಅಲ್ಲದೇ ಇದನ್ನು ಯಾವ ರೀತಿಯಾಗಿ ವರ್ಗೀಕರಿಸಬೇಕೆಂಬುದರ ಬಗ್ಗೆ ಖಚಿತವಾಗಿ ಹೇಳಿಲ್ಲ.[3] ಬಂಡವಾಳಶಾಹಿಯ ವ್ಯಾಖ್ಯಾನ ವಿವಿಧ ಐತಿಹಾಸಿಕ ಪ್ರಕರಣಗಳನ್ನು ಅವಲಂಬಿಸಿದೆ.ಆಯಾ ಪ್ರದೇಶ,ಕಾಲಮಾನ, ಭೌಗೋಳಿಕತೆ, ರಾಜಕೀಯ ಹಾಗೂ ಸಂಸ್ಕೃತಿ ವ್ಯತ್ಯಾಸವನ್ನು ಆಧರಿಸಿದೆ.[4] ಅರ್ಥಶಾಸ್ತ್ರಜ್ಞರು ರಾಜಕೀಯ ಆರ್ಥಿಕ ತಜ್ಞರು ಮತ್ತು ಇತಿಹಾಸಕಾರು ಬಂಡವಾಳಶಾಹಿ ಬಗ್ಗೆ ವಿಭಿನ್ನ ವಿಶ್ಲೇಷಣೆ ಮಾಡಿದ್ದಾರೆ. ಇದರ ಅರ್ಥವ್ಯಾಪ್ತಿಯನ್ನು ವಿವಿಧ ದೃಷ್ಟಿಕೋನಗಳಿಂದ ನೋಡಿದ್ದಾರೆ. ಸಮಾಜ ವಿಜ್ಞಾನಿಗಳು, ಇತಿಹಾಸಜ್ಞರನ್ನೊಳಗೊಂಡು, ಆರ್ಥಿಕ ಸಮಾಜಶಾಸ್ತ್ರಜ್ಞರು, ಆರ್ಥಿಕ ತಜ್ಞರು, ಮಾನವಶಾಸ್ತ್ರಜ್ಞರು ಹಾಗೂ ತತ್ವಜ್ಣಾನ ಕ್ಷೇತ್ರದ ಪ್ರತಿಭಾವಂತರು, ಬಂಡವಾಳಶಾಹಿ ಶಬ್ದದ ಅರ್ಥ ವ್ಯಾಪ್ತಿ ಹುಡುಕಲು ಸಾಕಷ್ಟು ಚರ್ಚೆ ನಡೆಸಿದ್ದಾರೆ. ಉತ್ಪಾದನಾ ಮೂಲಗಳ ಖಾಸಗಿ ಒಡೆತನ, ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ವಸ್ತುಗಳು ಹಾಗೂ ಸೇವೆಗಳ ನಿರ್ಮಾಣ, ಪೂರೈಕೆ ಮತ್ತು ದರ ಹಾಗೂ ಸಂಬಳ ನಿಗದಿ ಇವು ಬಂಡವಾಳಶಾಹಿಯ ಪ್ರಾಥಮಿಕ ಮೂಲಗಳು ಎಂಬ ಬಗ್ಗೆ ಕೆಲಮಟ್ಟಿಗೆ ವಿವಾದವಿದೆ.[5]
ಸಾಮಾನ್ಯವಾಗಿ ಆರ್ಥಿಕ ತಜ್ಞರು ಮಾರುಕಟ್ಟೆಯ ತಾಂತ್ರಿಕ ವಿಧಾನಗಳ ಬಗ್ಗೆ ಹೆಚ್ಚು ಒತ್ತು ನೀಡುತ್ತಾರೆ. ಮಾರುಕಟ್ಟೆಗಳ ಮೇಲೆ ಸರ್ಕಾರೀ ಆಡಳಿತ ಯಂತ್ರದ ನಿಯಂತ್ರಣ(ಸ್ವಾಯತ್ತತೆ ಮತ್ತು ಹೆಚ್ಚು ರಿಯಾಯತಿ)), ಆಸ್ತಿ ಹಕ್ಕುಗಳು[6][7]. ಆದರೆ ಬಹುತೇಕ ರಾಜಕೀಯ ಆರ್ಥಿಕ ವಲಯದ ಪರಿಣಿತರು ಖಾಸಗಿ ಆಸ್ತಿ ಒಡೆತನದ ಹಕ್ಕು, ಅಧಿಕಾರಸಂಬಂಧಗಳು, ಕೂಲಿ ಕಾರ್ಮಿಕ ಹಾಗೂ ದುಡಿಯುವವರ್ಗವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.[8] ಎಲ್ಲರ ಒಮ್ಮತವೆಂದರೆ ಬಂಡವಾಳಶಾಹಿ ತತ್ವವು ಬಂಡವಾಳ ಹೂಡಿಕೆಯಿಂದಾಗಿ ಆರ್ಥಿಕ ಪ್ರಗತಿಯನ್ನು ಉತ್ತೇಜಿಸುತ್ತದೆ.[9] ಮಾರುಕಟ್ಟೆಗಳು ಹೇಗೆ ವರ್ತಿಸಬೇಕು ಮತ್ತು ಎಷ್ಟರ ಮಟ್ಟಿಗೆ ಅವುಗಳಿಗೆ ಮುಕ್ತತೆ ಇರಬೇಕು,ಎಂಬ ನಿರ್ಧಾರಕ್ಕೆ ಬೇಕಾಗುವ ನಿಯಮಾವಳಿಗಳ ರಚನೆ ಮಾತ್ರ ಖಾಸಗಿ ಒಡೆತನಕ್ಕೆ ಸೇರಿರಲಾರದು. ಇದು ಅಲ್ಲಿನ ರಾಜಕೀಯ ಮತ್ತು ಆರ್ಥಿಕ ಸೂತ್ರಗಳನ್ನು ಒಳಗೊಂಡ ವಿಷಯವೆನಿಸಿದೆ. ಕೆಲವು ರಾಜ್ಯಗಳಲ್ಲಿ ಮಾರುಕಟ್ಟೆ ನಿಯಮಾವಳಿಗಳ ಬಗ್ಗೆ ಮಿಶ್ರ ಆರ್ಥಿಕತೆಯ ಸೂತ್ರಗಳಿವೆ.[8]
ಬಂಡವಾಳಶಾಹಿ ತತ್ವ 16ನೆಯ ಶತಮಾನದಲ್ಲಿ ಯುರೋಪಿನಾದ್ಯಂತ ಪ್ರಾಧಾನ್ಯತೆ ಪಡೆದ ಒಂದು ವ್ಯಾಪಾರ-ವಹಿವಾಟಿನ ವಿಧಾನ ಅಭಿವೃದ್ಧಿ ಹೊಂದಿತು.ಪ್ರಾಚೀನ ಯುಗದಲ್ಲಿ ಬಂಡವಾಳಶಾಹಿಯಂತೆ ಕೆಲಸ ಮಾಡುತ್ತಿದ್ದ ಕೆಲವು ಸಂಘಟನೆಗಳಿದ್ದರೂ ಇದಕ್ಕೆ ಪ್ರಾಮುಖ್ಯತೆ ಬಂದದ್ದು ಈ ಶತಮಾನದ ನಂತರವೇ.ಮಧ್ಯ ಯುಗದಲ್ಲಿ ವ್ಯಾಪಾರಿ ಬಂಡವಾಳ ಹೂಡಿಕೆದಾರರರಿಂದಾಗಿ ಬಂಡವಾಳಶಾಹಿಯು ಮತ್ತಷ್ಟು ಪ್ರಗತಿ ಕಂಡಿತೆಂದು ಹೇಳಬಹುದು.[10][11][12] ಬಂಡವಾಳಶಾಹಿ ಸಾಮ್ರಾಜ್ಯವು ಪಾಶ್ಚಿಮಾತ್ಯ ದೇಶಗಳಲ್ಲಿನ ಊಳಿಗಮಾನ್ಯ (ಜಮೀನುದಾರಿಕೆ) ಪದ್ದತಿ ಕೊನೆಗೊಂಡ ನಂತರ [12] ಪ್ರವರ್ಧನಮಾನಕ್ಕೆ ಬಂತು.[12] ಬಂಡವಾಳಶಾಹಿ ಸಾಮ್ರಾಜ್ಯವು 19ಮತ್ತು20ನೆಯ ಶತಮಾನದಲ್ಲಿ ಯುರೋಪಿನಾದ್ಯಂತ ನಿಧಾನಗತಿಯಲ್ಲಿ ಹರಡಿತು.ಪ್ರಪಂಚದಾದ್ಯಂತ ಕೈಗಾರಿಕರಣದ ಮೂಲೋದ್ದೇಶಕ್ಕೆ ಮುಖ್ಯವಾಹಿನಿಯಾಗಿ ಕೆಲಸ ಮಾಡಿತು.[4]