ಬಸವರಾಜ ಕಟ್ಟೀಮನಿ
From Wikipedia, the free encyclopedia
ಬಸವರಾಜ ಕಟ್ಟೀಮನಿಯವರು ೧೯೧೯ ಅಕ್ಟೋಬರ ೫ರಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಲಾಮರಡಿ ಎನ್ನುವ ಹಳ್ಳಿಯಲ್ಲಿ ಜನಿಸಿದರು. ತಾಯಿ ಬಾಳವ್ವ; ತಂದೆ ಅಪ್ಪಣ್ಣ. ತಂದೆ ಮೊದಲಲ್ಲಿ ಸಶಸ್ತ್ರ ಪೊಲೀಸ್ ಪಡೆಯಲ್ಲಿ ಸಿಪಾಯಿಯಾಗಿದ್ದವರು. ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ರಾಜೀನಾಮೆ ಕೊಟ್ಟು ಹೊರಬಂದರು. ಕೆಲ ಕಾಲದ ನಂತರ ರೇಲ್ವೆ ಇಲಾಖೆಯಲ್ಲಿ ಸೇರಿಕೊಂಡರು. ಅವರು ೧೯೮೯ರಲ್ಲಿ ತೀರಿಕೊಂಡರು. ತಾಯಿಯೇ ಕೂಲಿನಾಲಿ ಮಾಡಿ ತನ್ನ ೪ ಮಕ್ಕಳನ್ನಲ್ಲದೆ ತನ್ನ ಅಣ್ಣನ ಮಗಳನ್ನೂ ಸಹ ಬೆಳೆಯಿಸಿದಳು.[1]