ಬ್ರಾಹ್ಮಣ
ಹಿಂದೂ ಧರ್ಮದಲ್ಲಿ ಒಂದು ವರ್ಣ (ವರ್ಗ), ನಾಲ್ಕು ಜಾತಿಗಳಲ್ಲಿ ಒಂದಾಗಿದೆ / From Wikipedia, the free encyclopedia
Expression error: Unexpected < operator. ಹಿಂದೂಧರ್ಮವನ್ನು ಬೋಧಿಸುವ ಮತ್ತು ಅರ್ಚಕರ ವರ್ಗಕ್ಕೆ ಸೇರಿದವರನ್ನು ಬ್ರಾಹ್ಮಿನ್ Brāhmaṇa (ಬ್ರಾಹ್ಮಣರು) ಎನ್ನುತ್ತಾರೆ.ब्राह्मण[1][2][3][4].
ಬ್ರಾಹ್ಮಿನ್ ಎಂಬ ಇಂಗ್ಲಿಷ್ ಪದವು ಸಂಸ್ಕೃತ ಪದದ ಆಂಗ್ಲ ರೂಪವಾಗಿದೆBrāhman; (ಬ್ರಹ್ಮನ್ ಎಂದರೆ ಶ್ರೇಷ್ಠ ಆತ್ಮ ಎಂಬ ಅರ್ಥವೂ ಹಿಂದೂ ಧರ್ಮದಲ್ಲಿದೆ). ಬ್ರಾಹ್ಮಣರನ್ನು ವಿಪ್ರ "ಪ್ರೇರಣೆಗೊಂಡ"[5] ಅಥವಾ ದ್ವಿಜ "ಎರಡು ಬಾರಿ ಹುಟ್ಟಿದವರು" ಎಂದೂ ಕರೆಯುತ್ತಾರೆ.[6] ಬ್ರಾಹ್ಮಣರು ವೇದವಿಧಿಗಳನ್ನು ಸಹ ಆಚರಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಬ್ರಾಹ್ಮಣರೆಂದರೆ ಅರ್ಚಕರೆಂಬುದು ಮಾತ್ರವಲ್ಲ. ಬ್ರಾಹ್ಮಣರ ಒಂದು ಉಪವರ್ಗ ಮಾತ್ರ ಅರ್ಚನೆಯ ವಿಧಿಗಳನ್ನು ಆಚರಿಸುವುದರಲ್ಲಿ ನಿರತವಾಗಿತ್ತು. ವೇದಗಳ ಕಾಲದ ಉತ್ತರಭಾಗದಿಂದಲೂ ಅವರು ವಿವಿಧ ವೃತ್ತಿಗಳನ್ನು ಸಹ ಕೈಗೊಳ್ಳುತ್ತಿದ್ದು, ಪ್ರಮುಖವಾಗಿ ವೈದ್ಯರು, ಯೋಧರು, ಬರಹಗಾರರು, ಕವಿಗಳು, ಭೂ ಒಡೆಯರು, ಮಂತ್ರಿಗಳು, ಇತ್ಯಾದಿ ಕಾಯಕಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಭಾರತದ ಕೆಲವು ಭಾಗಗಳಲ್ಲಿ ಬ್ರಾಹ್ಮಣ ರಾಜರು ಆಳ್ವಿಕೆಯನ್ನೂ ಮಾಡುತ್ತಿದ್ದರು.
ವೇದಗಳ ಕಾಲದಿಂದಲೂ ರಾಜರು ಬ್ರಾಹ್ಮಣರೊಡನೆ (ಬ್ರಹ್ಮಕ್ಷತ್ರ) ನಿಕಟವಾದ ಸಂಬಂಧವಿರಿಸಿಕೊಳ್ಳುತ್ತಿದ್ದರು ಮತ್ತು ಅವರ ಸಲಹೆಗಳ ಮೇಲೆ ಅವಲಂಬಿತವಾಗಿರುತ್ತಿದ್ದರು.ಭಾರತದಲ್ಲಿ ಬ್ರಾಹ್ಮಣರು ಪ್ರಬಲರೂ, ಪ್ರಭಾವಶಾಲಿಗಳೂ ಆಗಿದ್ದರು ಹಾಗೂ ಹಲವರು 'ಕೆಳ' ಜಾತಿಗಳ ಬಗ್ಗೆ ತಾರತಮ್ಯ ತೋರುತ್ತಿದ್ದರು.[7][8] ಆಧುನಿಕ ಭಾರತದಲ್ಲಿ, ತಾವು ವಿರುದ್ಧ ತಾರತಮ್ಯಕ್ಕೆ ಒಳಗಾಗಿದ್ದೇವೆಂದು ಬ್ರಾಹ್ಮಣರು ಹೇಳುತ್ತಾರೆ.[9][10] ಬ್ರಾಹ್ಮಣರು ತಮ್ಮ ಪರಂಪರೆಯ ಆದಿಯನ್ನು ಮಧ್ಯ ಏಷ್ಯಾದ ಪುರಾತನ ಜನರವರೆಗೂ ಪತ್ತೆ ಹಚ್ಚಲು ಸಾಧ್ಯವಾಗಿದೆ.