ರುಕ್ಮಿಣಿ
From Wikipedia, the free encyclopedia
ಹಿಂದೂ ಧರ್ಮದಲ್ಲಿ, ರುಕ್ಮಿಣಿ ಕೃಷ್ಣನ ಮೊದಲನೆಯ ಪತ್ನಿ ಹಾಗು ದ್ವಾರಕ ನಗರದ ರಾಣಿ. ಕೃಷ್ಣ ಧೀರತನದಿಂದ ರುಕ್ಮಿಣಿಯನ್ನು ಅವಳ ಬೇಡಿಕೆ ಮೇಲೆ, ಅವಳ ಇಚ್ಛೆ ವಿರುದ್ದವಾಗಿ ನಡೆಯುತಿದ್ದ ಅವಳ ಮದುವೆಯಿಂದ ಅಪಹರಿಸುತ್ತಾನೆ (ಭಾಗವತ ಪುರಾಣದಲ್ಲಿ ಇದರ ವರ್ಣನೆ ಇದೆ). ಕೃಷ್ಣನ ೧೬,೧೦೮ ರಾಣಿಯರಲ್ಲಿ, ರುಕ್ಮಿಣಿ ಮೊದಲನೇ ಹಾಗು ಅತ್ಯಂತ ಪ್ರಮುಖ. ರುಕ್ಮಿಣಿಯನ್ನು ಲಕ್ಷ್ಮಿಯ ಅವತಾರ ಎಂದು ಭಾವಿಸಲಾಗಿದೆ.[1] ದೇವಿಯನ್ನು ವಿವಿಧ ಸಾಹಿತ್ಯದಲ್ಲಿ ಕೃಷ್ಣನ ಮುಖ್ಯ ಅಥವಾ ಪ್ರಧಾನ ಪತ್ನಿ ಎಂದು ಪರಿಗಣಿಸಲಾಗುತ್ತದೆ. [2]ಪ್ರಾಥಮಿಕವಾಗಿ ವಾರಕರಿ ಮತ್ತು ಹರಿದಾಸ ಸಂಪ್ರದಾಯದಲ್ಲಿ ಪೂಜಿಸಲಾಗುತ್ತದೆ ಮತ್ತು ಹೆಚ್ಚಾಗಿ ಶ್ರೀ ವೈಷ್ಣವ ಧರ್ಮದಲ್ಲಿ ಲಕ್ಷ್ಮಿ-ನಾರಾಯಣರನ್ನು ಪೂಜಿಸಲಾಗುತ್ತದೆ.[3][4]
ರುಕ್ಮಿಣಿಯನ್ನು ಮುಖ್ಯವಾಗಿ ಮಹಾರಾಷ್ಟ್ರ ಮತ್ತು ದಕ್ಷಿಣ ಭಾರತದಲ್ಲಿ ಪೂಜಿಸಲಾಗುತ್ತದೆ.ಮಹಾರಾಷ್ಟ್ರದ ಜನರು ಅವಳನ್ನು ವಿಠ್ಠಲನೊಂದಿಗೆ (ಕೃಷ್ಣನ ಪ್ರಾದೇಶಿಕ ರೂಪ) ಪೂಜಿಸುತ್ತಾರೆ ಮತ್ತು ಅವಳನ್ನು ರಖುಮಾಯಿ ಎಂದು ಕರೆಯುತ್ತಾರೆ.ದಕ್ಷಿಣ ಭಾರತದಲ್ಲಿ, ಅವಳನ್ನು ಕೃಷ್ಣ ಮತ್ತು ಅವನ ಇನ್ನೋರ್ವ ಮುಖ್ಯ ಪತ್ನಿ ಸತ್ಯಭಾಮಾ ಜೊತೆಗೆ ಪೂಜಿಸಲಾಗುತ್ತದೆ.[5]