ಹಿನ್ನೀರು
From Wikipedia, the free encyclopedia
ಹಿನ್ನೀರು ನದಿಯ ಒಂದು ಭಾಗವಾಗಿದ್ದು ಇದರಲ್ಲಿ ಸ್ವಲ್ಪ ಅಥವಾ ಯಾವುದೇ ಹರಿವು ಇರುವುದಿಲ್ಲ. ಇದು ಒಂದು ಮುಖ್ಯ ನದಿಯ ಪಕ್ಕದಲ್ಲಿದ್ದು ನಂತರ ಅದನ್ನು ಮತ್ತೆ ಸೇರುವ ಶಾಖೆಯನ್ನು ಹೆಸರಿಸಬಹುದು, ಅಥವಾ ಸಮುದ್ರದ ಉಬ್ಬರವಿಳಿತದಿಂದ ಅಥವಾ ಅಣೆಕಟ್ಟಿನಂತಹ ಅಡಚಣೆಯಿಂದ ಹಿಂದೆ ಹರಿದ ಒಂದು ಮುಖ್ಯ ನದಿಯಲ್ಲಿನ ಜಲಸಮೂಹವನ್ನು ಹೆಸರಿಸಬಹುದು.[1] ನೈಸರ್ಗಿಕ ಹೊಳೆಯ ಹರಿವಿಗೆ ಮಾನವ ನಿರ್ಮಿತ ನಿರ್ಬಂಧಗಳು ಅಥವಾ ಮಂಜುಗಡ್ಡೆ ಅಡಚುಗಳು, ಸಸ್ಯವರ್ಗದ ತಡೆ, ಅಥವಾ ಕೆಳಗಿನ ಕಾಲುವೆಯಲ್ಲಿ ನೆರೆಬರುವಿಕೆಯಂತಹ ತಾತ್ಕಾಲಿಕ ನೈಸರ್ಗಿಕ ಅಡೆತಡೆಗಳು ಹಿನ್ನೀರನ್ನು ರಚಿಸಬಹುದು.[2]